Asianet Suvarna News Asianet Suvarna News

ಜಮೀನು ವಿವಾದ; ತಹಶೀಲ್ದಾರ್ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಜಮೀನು ವಿವಾದ ಹಿನ್ನಲೆ, ತಹಶಿಲ್ದಾರ್ ಎದುರು ವಿಷಸೇವಿಸಿ ಆತ್ಮಹತ್ಯೆ ಯತ್ನಿಸಿದ ಘಟನೆ ಕೋಲಾರ ತಾಲೂಕಿನ ದೊಡ್ಡವಲ್ಲಬ್ಬಿ ಗ್ರಾಮದಲ್ಲಿ ನಡೆದಿದೆ.

farmer tried to commit suicide by consuming poison in front of the Tehsildar kolar rav
Author
Bangalore, First Published Aug 18, 2022, 11:44 AM IST

ಕೋಲಾರ (ಆ.18) :  ಜಮೀನು ವಿವಾದ ಹಿನ್ನಲೆ, ತಹಶಿಲ್ದಾರ್ ಎದುರು ವಿಷಸೇವಿಸಿ ಆತ್ಮಹತ್ಯೆ ಯತ್ನಿಸಿದ ಘಟನೆ ಕೋಲಾರ ತಾಲೂಕಿನ ದೊಡ್ಡವಲ್ಲಬ್ಬಿ ಗ್ರಾಮದಲ್ಲಿ ನಡೆದಿದೆ.  ಜಮೀನು ಸಾಗುವಳಿ ಚೀಟಿ ವಿಚಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮನನೊಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸಾಲಪಾವತಿಗೆ ಬ್ಯಾಂಕ್‌ ನೋಟಿಸ್‌: ರೈತ ಆತ್ಮಹತ್ಯೆಗೆ ಶರಣು

ಕೋಲಾರ ತಾಲೂಕಿನ ದೊಡ್ಡವಲ್ಲಬ್ಬಿ ಗ್ರಾಮದ ಅಶ್ವತ್ಥ ನಾರಾಯಣ ಆತ್ಮಹತ್ಯೆಗೆ ಯತ್ನಿಸಿದ ರೈತ. ರೈತ ಗ್ರಾಮದ 3.16 ಎಕರೆ ಜಮೀನು ಸಾಗುವಳಿಗೆ ಚೀಟಿ ನೀಡುವ ವಿಚಾರಕ್ಕೆ ಕಚೇರಿಗೆ ಅಲೆದಾಡಿದ್ದರು. ತಂದೆ ಮಾಜಿ ಯೋಧ ನಾಗಪ್ಪ ಎನ್ನುವವರ ಕಾಲದಿಂದ ಉಳುಮೆ ಮಾಡ್ತಿದ್ದ ಜಮೀನು. ಜಮೀನು ಮಂಜೂರಿ ಮಾಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದ ರೈತ. ಆದರೆ ಜಮೀನು ಅರ್ಜಿ ಮಂಜೂರು ಮಾಡುವುದಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದ ಕೆಲ ಗ್ರಾಮಸ್ಥರು. ಈ ಹಿನ್ನೆಲೆ ಇಂದು ಜಮೀನು ಪರೀಶಿಲನೆಗೆ ತಹಶೀಲ್ದಾರ್ ನಾಗರಾಜ ಆಗಮಿಸಿದ್ದರು. ಈ ವೇಳೆ ರೈತ ಅಶ್ವತ್ಥ ನಾರಾಯಣ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆ ಮನನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಕೂಡಲೇ ಸ್ಥಳೀಯರು ಅಶ್ವತ್ಥ ನಾರಾಯಣ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ಮುಂದುವರಿಸಿದ್ದಾರೆ.

ನೇಣು ಬಿಗಿದುಕೊಂಡು ಆತ್ಮಹತ್ಯೆ:

ಚಿಕ್ಕೋಡಿ: ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ. ವಿರುಪಾಕ್ಷಿ ಸಿದ್ದಪ್ಪಾ ಮಗದುಮ(56) ನೇಣಿಗೆ ಶರಣಾದ ದುರ್ದೈವಿ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ನಿವಾಸಿಯಾಗಿದ್ದು, ಜೀವನದಲ್ಲಿ ಹಲವು ಸಂಕಷ್ಟಗಳಿಂದ ಜುಗುಪ್ಸೆಗೊಂಡು ಆತ್ಮಹತ್ಯೆಗೆ ನಿರ್ಧರಿಸಿ, ಚಿಕ್ಕೋಡಿ ಪಟ್ಟಣದ ಇಂದಿರಾನಗರ ಗುಡ್ಡದ ಗಣಪತಿ ದೇವಸ್ಥಾನದ ಬಳಿ ಇರುವ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಯುವ ಮುನ್ನ ವಿರುಪಾಕ್ಷಿ ಡೆತ್ ನೋಟ್ ಬರೆದಿದ್ದು, ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ನಿರ್ಧರಿಸಿರುವ ಬಗ್ಗೆ ಬರೆದುಕೊಂಡಿದ್ದಾನೆ. ಚಿಕ್ಕೋಡಿ ಠಾಣಾ  ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ  ಸ್ಥಳ ಪರಿಶೀಲನೆ ನಡೆಸಿದ್ದಾರೆ. 

Suicide Case: ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾದ ಅನ್ನದಾತ

ಸ್ನೇಕ್ ಲೋಕೇಶ್‌ಗೆ ಕಚ್ಚಿದ ಹಾವು:

ಸ್ನೇಕ್ ಲೋಕೇಶ್‌ಗೆ ಬಲಗೈ ಬೆರಳಿನ ಭಾಗಕ್ಕೆ ವಿಷಪೂರಿತ ಹಾವೊಂದು ಕಚ್ಚಿದೆ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಘಟಿಸಿದೆ. ನಾಗರಹಾವು ಹಿಡಿದು ರಕ್ಷಣೆ ಮಾಡುವಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಸ್ನೇಕ್ ಲೋಕೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಸದ್ಯ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಗೆ ದಾಖಲಾಗಿ ಪಡೆಯುತ್ತಿದ್ದಾರೆ.

Follow Us:
Download App:
  • android
  • ios