ಸಾಲಪಾವತಿಗೆ ಬ್ಯಾಂಕ್‌ ನೋಟಿಸ್‌: ರೈತ ಆತ್ಮಹತ್ಯೆಗೆ ಶರಣು

*  ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ನಡೆದ ಘಟನೆ
*  1.98 ಲಕ್ಷ ಬೆಳೆ ಸಾಲ ಪಡೆದಿದ್ದ ರೈತ 
*  ಸಾಲ ತುಂಬುವಂತೆ ಕಳೆದ 6 ತಿಂಗಳಿನಿಂದ ನೋಟಿಸ್‌ ನೀಡುತ್ತಿದ್ದ ಕೆವಿಜಿ ಬ್ಯಾಂಕ್‌ 

Farmer Committed Suicide at Ron in Gadag grg

ರೋಣ(ಜೂ.17):  ಸಾಲ ಪಾವತಿಸುವಂತೆ ಬ್ಯಾಂಕಿನವರು ನೋಟಿಸ್‌ ನೀಡಿದ್ದರಿಂದ ಬೇಸತ್ತು ರೈತ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. 

ಮೃತ ರೈತ ಬಸವರಾಜ ಆರೇರ (49) ರೋಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ 3 ವರ್ಷಗಳ ಹಿಂದೆ .1.98 ಲಕ್ಷ ಬೆಳೆ ಸಾಲ ಪಡೆದಿದ್ದ. ರೈತ 4 ಎಕರೆ ಜಮೀನು ಹೊಂದಿದ್ದು, ಕಳೆದ 3 ವರ್ಷದಿಂದ ಸರಿಯಾಗಿ ಬೆಳೆ ಬಾರದೇ ಸಂಕಷ್ಟಕ್ಕಿಡಾಗಿದ್ದ. ತನ್ನಿಂದ ಬ್ಯಾಂಕ್‌ ಸಾಲ ತೀರಿಸಲು ಆಗುತ್ತಿಲ್ಲ ಎಂದು ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ. 

ಮಾನಸಿಕ ಖಿನ್ನತೆ: ರೈಫಲ್‌ನಿಂದ ಶೂಟ್ ಮಾಡಿಕೊಂಡು ಪೇದೆ ಆತ್ಮಹತ್ಯೆ!

ಸಾಲ ತುಂಬುವಂತೆ ಕಳೆದ 6 ತಿಂಗಳಿನಿಂದ ಕೆವಿಜಿ ಬ್ಯಾಂಕಿನವರು ನೋಟಿಸ್‌ ನೀಡುತ್ತಿದ್ದರು. ಅಲ್ಲದೇ ಬುಧವಾರ ಮತ್ತೊಂದು ನೋಟಿಸ್‌ ಬಂದಿತ್ತು. ಇದರಿಂದ ಸಾಲ ತೀರಿಸಲು ನನ್ನಿಂದಾಗುತ್ತಿಲ್ಲ ಎಂದು ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ರೈತನ ಪತ್ನಿ ಗೀತಾ ಆರೇರ ದೂರು ನೀಡಿದ್ದಾರೆ.
 

Latest Videos
Follow Us:
Download App:
  • android
  • ios