Asianet Suvarna News Asianet Suvarna News

Suicide Case: ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾದ ಅನ್ನದಾತ

*   ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಗ್ರಾಮದಲ್ಲಿ ನಡೆದ ಘಟನೆ
*   ವಿವಿಧೆಡೆ ಸಾಲ ಮಾಡಿಕೊಂಡಿದ್ದ ಮೃತ ಫಕ್ಕೀರಪ್ಪ ನಿಂಗಪ್ಪ ಅಸುಂಡಿ 
*   ಅಕಾಲಿಕ ಮಳೆಯಿಂದ ಬೆಳೆ ಕೈಗೆ ಬರದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಫಕ್ಕೀರಪ್ಪ
 

Farmer Committed Suicide at Byadagi in Haveri grg
Author
Bengaluru, First Published Jan 3, 2022, 12:17 PM IST

ಬ್ಯಾಡಗಿ(ಡಿ.03): ಸಾಲ(Loan) ತೀರಿಸಲಾಗದೇ ಮೋಟೆಬೆನ್ನೂರು ಗ್ರಾಮದ ರೈತ(Farmer) ಶನಿವಾರ ನೇಣಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಮೃತನನ್ನು ಅದೇ ಗ್ರಾಮದ ನಿವಾಸಿ ಫಕ್ಕೀರಪ್ಪ ನಿಂಗಪ್ಪ ಅಸುಂಡಿ (30) ಎಂದು ಗುರುತಿಸಲಾಗಿದ್ದು, ತನಗಿದ್ದ 2 ಎಕರೆ 8 ಗುಂಟೆ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಬ್ಯಾಡಗಿ ಯೂನಿಯನ್‌ ಬ್ಯಾಂಕ್‌ನಿಂದ 2 ಲಕ್ಷ, ಮೋಟೆಬೆನ್ನೂರಿನ ವಿಎಸ್ಎಸ್‌ ಸೊಸೈಟಿಯಲ್ಲಿ 50 ಸಾವಿರ ಹಾಗೂ ಕೈಗಡ ರೂಪದಲ್ಲಿ 2 ಲಕ್ಷ ಸೇರಿದಂತೆ ಒಟ್ಟು 5 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ಎನ್ನಲಾಗಿದೆ.

ಕಳೆದ ಎರಡ್ಮೂರು ವರ್ಷಗಳಿಂದ ಬಿತ್ತನೆ ಮಾಡಿದ್ದ ಬೆಳೆ ಅಕಾಲಿಕ ಮಳೆಯಿಂದ(Untimely Rain) ಕೈಗೆ ಬರದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಫಕ್ಕೀರಪ್ಪ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಗಿ ಪೊಲೀಸ್ಮೂಲಗಳು ತಿಳಿಸಿವೆ. ಘಟನೆ ಬಗ್ಗೆ ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Suicide Case: ಮೊಬೈಲ್‌ ಆ್ಯಪ್‌ ಸಾಲ ತೀರಿಸಲಾಗದೆ ಆತ್ಮಹತ್ಯೆ

ರೈಲಿಗೆ ತಲೆಕೊಟ್ಟು ಮಹಿಳೆ ಆತ್ಮಹತ್ಯೆ

ಮೈಸೂರು(Mysuru): ರೈಲಿಗೆ ತಲೆಕೊಟ್ಟು ಮಹಿಳೆ(Woman) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ಪ್ರೀತಿ ಗ್ರಾನೈಟ್‌ ಬಳಿಯ ರೈಲ್ವೆ ಟ್ರ್ಯಾಕ್‌ ಬಳಿ ಶನಿವಾರ ನಡೆದಿದೆ. ಕುಂಬಾರಕೊಪ್ಪಲಿನ ನಿವಾಸಿ ಸಾಗರ್‌ ಎಂಬುವರ ಪತ್ನಿ ಸ್ವಾತಿ (21) ಆತ್ಮಹತ್ಯೆ ಮಾಡಿಕೊಂಡವರು. 

ಶ್ರೀರಂಗಪಟ್ಟಣದ ಸ್ವಾತಿ ಅವರು ಕೆಲವು ತಿಂಗಳ ಹಿಂದೆಯಷ್ಟೇ ಸಾಗರ್‌ ಅವರನ್ನು ವಿವಾಹವಾಗಿದ್ದರು. ಹೀಗಿರುವಾಗ ದಂಪತಿಯ ನಡುವೆ ಮನಸ್ತಾಪವುಂಟಾಗಿದ್ದು, ಇದರಿಂದ ಮನನೊಂದ ಸ್ವಾತಿ ಶನಿವಾರ ಬೆಳಗ್ಗೆ ಹಾಲು ತರುವುದಾಗಿ ಮನೆಯಿಂದ ಹೋದವರು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೈಸೂರು ರೈಲ್ವೆ ಪೊಲೀಸ್‌ ಠಾಣೆಯಲ್ಲಿ(Police Station) ಪ್ರಕರಣ ದಾಖಲಾಗಿದೆ.

ಗೃಹಿಣಿ ನೇಣಿಗೆ ಶರಣು

ಚಿಕ್ಕಬಳ್ಳಾಪುರ(Chikkaballapur): ಪ್ರೀತಿಸಿ(Love) ವಿವಾಹವಾಗಿದ್ದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರ ಠಾಣೆ ವ್ಯಾಪ್ತಿಯ 2ನೇ ವಾರ್ಡ್‌ನ ಭಗತ್‌ ಸಿಂಗ್‌ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಚಿಂತಾಮಣಿ ಮೂಲದ ಗೌತಮಿ ಕೋಂ ಸುರೇಂದ್ರ ಎಂದು ಗುರುತಿಸಲಾಗಿದೆ. ಗೌತಮಿ ಹಾಗೂ ಸುರೇಂದ್ರ ಒಂದೂವರೆ ವರ್ಷದ ಹಿಂದೆ ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ವಿವಾಹವಾಗಿ ಚಿಕ್ಕಬಳ್ಳಾಪುರದಲ್ಲಿ ನೆಲಸಿದ್ದರು. ಆತ್ಮಹತ್ಯೆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತಹಸೀಲ್ದಾರ್‌ ಗಣಪತಿಶಾಸ್ತ್ರಿ, ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೌತಮಿ ಗಂಡ ಸುರೇಂದ್ರ ನಗರದ ಮದ್ಯದಂಗಡಿಯಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದ.

ಮಾನಸಿಕ ಅಸ್ವಸ್ಥೆ ಆತ್ಮಹತ್ಯೆ

ಲಕ್ಷ್ಮೇಶ್ವರ: ಗದಗ(Gadag) ಜಿಲ್ಲೆಯ ಲಕ್ಷ್ಮೇಶ್ವರ(Lakshmeshwara) ಸಮೀಪದ ಸೂರಣಗಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ. ಅನ್ನಪೂರ್ಣ ಬಡಕಲ್ಲ(42) ಎಂಬ ಮಹಿಳೆ ಗ್ರಾಮದ ಹೊಲದಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Suicide Cases: ತಡರಾತ್ರಿ ಮೇಲ್ಸೇತುವೆಯಿಂದ ಜಿಗಿದು ಯುವಕ ಆತ್ಮಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ತಂದೆ ಟಿವಿ ಆಫ್‌ ಮಾಡಲು ಹೇಳಿದ್ದಕ್ಕೆ ಬಾಲಕ ಆತ್ಮಹತ್ಯೆ

ವಿರಾಜಪೇಟೆ(Virajpet): ಟಿವಿ ಆಫ್‌ ಮಾಡಲು ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ನೊಂದ ಬಾಲಕನೊಬ್ಬ ನೇಣಿಗೆ ಶರಣಾದ ಘಟನೆ ಇಲ್ಲಿನ ಕಡಂಗಮರೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಕಾರ್ಮಿಕ ಸಿಬಿ ಎಂಬವರ ಪುತ್ರ 7ನೇ ತರಗತಿ ವಿದಾರ್ಥಿಯಾಗಿರುವ ನಿತಿನ್(13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಡಿ.31ರಂದು ರಾತ್ರಿ ನಿತಿನ್ಟಿ.ವಿ. ವಿಕ್ಷಣೆ ಮಾಡುತ್ತಿದ್ದ ವೇಳೆ ಕುಪಿತರಾದ ತಂದೆ, ಟಿವಿ ಬಂದ್‌ ಮಾಡಲು ಹೇಳಿದ್ದಾರೆ. ಇದರಿಂದ ನೊಂದ ಆತ ತಂದೆಯ ಲುಂಗಿ ಬಳಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತನ ಪೋಷಕರು ಬೆಳಗ್ಗೆ ಎದ್ದು ಮಗನನ್ನು ಎಬ್ಬಿಸಲು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಅತ್ಮಹತ್ಯೆ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios