ಒಂದೇ ಕುಟುಂಬದ ಮೂವರ ಸಾವು ಪ್ರಕರಣ, ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ

ಕೋಣನಕುಂಟೆಯ ಮೈಸೂರು ಬ್ಯಾಂಕ್ ಕಾಲೋನಿಯ ಮನೆಯೊಂದರಲ್ಲಿ  ಮೂವರು ಮನೆಯಲ್ಲಿ ಶವವಾಗಿ ಸಿಕ್ಕಿದ ಪ್ರಕರಣ ಈಗ ಹೊಸ ತಿರುವು ಪಡೆದಿದೆ.

family members death case konankunte truth revealed after post mortem report  gow

ವರದಿ : ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಸೆ.3): ಇಡಿ ಮನೆಯೇ ಸ್ಮಶಾನವಾದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಒಂದೇ ಕುಟುಂಬಕ್ಕೆ ಸೇರಿದ ಮೂವರು ಮನೆಯಲ್ಲಿ ಶವವಾಗಿ ಸಿಕ್ಕಿದ್ರು.  ಈ ಮೂವರಲ್ಲಿ ಒಬ್ಬರ ಸಾವು ಸಾವು ಆತ್ಮಹತ್ಯೆ ಅಂತ ಗೊತ್ತಿತಾದ್ರೂ ಉಳಿದ ಇಬ್ಬರ ಸಾವು ಹೇಗಾಯ್ತು ಅನ್ನೋ ಗೊಂದಲವಿತ್ತು. ಈ ಪ್ರಕರಣದ ಅಸಲಿ ಕಾರಣ ಹುಡುಕಿ ಹೊರಟ ಪೊಲೀಸರಿಗೆ ಕೊನೆಗೂ ಪತ್ನಿ ಹಾಗೂ ಮಗುವಿನ ಸಾವಿನ ಹಿಂದಿನ ಸತ್ಯ ತಿಳಿದಿದೆ. ಆಗಸ್ಟ್​ 18ರಂದು ಕೋಣನಕುಂಟೆಯ ಮೈಸೂರು ಬ್ಯಾಂಕ್ ಕಾಲೋನಿಯ ಮನೆಯೊಂದರಲ್ಲಿ ನಡೆದ ಘಟನೆ. ಅಂದು ಇಡಿ ಕುಟುಂಬವೇ ಮನೆಯಲ್ಲಿ ಶವವಾಗಿ ಬಿದಿತ್ತು. ಮನೆಯ ಮುಖ್ಯಸ್ಥ ಮಹೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೇ, ಆತನ ಪತ್ನಿ ಹಾಗೂ ಒಂಬತ್ತು ವರ್ಷದ ಮಗ ನಂದೀಶ್ ಗೌಡ ರೂಮ್​ನ ಬೆಡ್ ಮೇಲೆ ಶವವಾಗಿ ಬಿದಿದ್ದರು. ಮಹೇಶ ತನಗೆ ಕ್ಯಾನ್ಸರ್ ಇರೋದಾಗಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೊಟ್ ಬರೆದಿದ್ದ. ಆದ್ರೆ, ಮನೆಯಲ್ಲಿದ್ದ ಆತನ ಪತ್ನಿ ಜ್ಯೋತಿ ಹಾಗೂ ಮಗು ಹೇಗೆ ಸಾವನಪ್ಪಿತ್ತು ಅನ್ನೋದು ಪೊಲೀಸ್ರಿಗೆ ಗೊತ್ತಾಗಿರಲಿಲ್ಲ. ಹೀಗಾಗೇ ಮೃತದೇಹಗಳ ಮರಣೊತ್ತರ ಪರೀಕ್ಷೆಗಾಗಿ ಖಾಕಿ ಕಾದು ಕುಳಿತಿತ್ತು. ಈಗ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದ್ದು, ಆತಂಕಕಾರಿ ವಿಷಯವಿಂದು ಬೆಳಕಿಗೆ ಬಂದಿದೆ. 

ಆನ್‌ಲೈನ್‌ನಲ್ಲಿ ವಿಗ್ರಹ ಖರೀದಿಸಿ 'ಜಮೀನಿನಲ್ಲಿ ಸಿಕ್ಕಿದ ಮೂರ್ತಿ' ಎಂದು ವಂಚನೆ!

ಪತ್ನಿ ಹಾಗೂ ಹೆತ್ತ ಮಗುವನ್ನ ಕೊಂದಿದ್ದ ಪತಿ
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಹೇಶ, ಕಾಯಿಲೆ ವಿಷಯದಿಂದಾಗಿ ನೊಂದಿದ್ದ. ಆರ್ಥಿಕ ಸಮಸ್ಯೆ ನಡುವೆ ಮುಂದಿನ ದಿನಗಳು ಕಷ್ಟವಾಗತ್ತೆ ಅಂತ ಸಾವಿನ ಹಾದಿ ತುಳಿದಿದ್ದ. ಆದ್ರೆ ಇದೇ ವೇಳೆ ಪತ್ನಿ ಹಾಗೂ ಸುಂದರ ಮಗು ಮುಂದೆ ಒಂಟಿಯಾಗುತ್ತಾರೆನ್ನೊ ಎಂಬ ಯೋಚನೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಶಾಲೆಗೆ ಹೋಗಿದ್ದ ಮಗು ಕರೆತಂದು ಮಂಚದ ಮೇಲೆ ಮಲಗಿಸಿ ತಾಯಿ ಹಾಗೂ ಇಬ್ಬರ ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾನೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮರಣೊತ್ತರ ಪರಿಕ್ಷಾವರದಿಯಲ್ಲಿ ಉಲ್ಲೇಖವಾಗಿದೆ.

ಕರ್ನಾಟಕದ ಹಲವು ಮಠದ ಸ್ವಾಮೀಜಿಗಳ ಕಾಮ ಪುರಾಣ ಬಿಚ್ಚಿಟ್ಟ ಮಹಿಳೆ, ಆಡಿಯೋ ವೈರಲ್

ಸದ್ಯ ಪತ್ನಿಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಮಹೇಶನ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆದ್ರೆ ಅದೇನೆ ಇದ್ರು, ಆರೋಗ್ಯದ ಸಮಸ್ಯೆಗೆ ಚಿಕಿತ್ಸೆಯ ಮೊರೆ ಹೋಗುವ ಬದಲು, ಆರ್ಥಿಕ ಸಮಸ್ಯೆ ಅಂತ ಇಡಿ ಕುಟುಂಬವನ್ನೇ ನಾಶ ಮಾಡಿಕೊಂಡು ಕೊನೆಗೂ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹೇಶನ ನಿರ್ಧಾರ ಎಷ್ಟು ಸರಿ.

Latest Videos
Follow Us:
Download App:
  • android
  • ios