Asianet Suvarna News Asianet Suvarna News

ಕರ್ನಾಟಕದ ಹಲವು ಮಠದ ಸ್ವಾಮೀಜಿಗಳ ಕಾಮ ಪುರಾಣ ಬಿಚ್ಚಿಟ್ಟ ಮಹಿಳೆ, ಆಡಿಯೋ ವೈರಲ್

ಕರ್ನಾಟಕದ ಹಲವು ಮಠಗಳ ಸ್ವಾಮೀಜಿಗಳ ಬಗ್ಗೆ ಮಹಿಳೆಯರಿಬ್ಬರು ಮಾತನಾಡಿರುವ ಆಡಿಯೋ ಬಹಿರಂಗವಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

Karnataka Many Mutt Swamji sexual abused womans audio goes viral rbj
Author
First Published Sep 3, 2022, 6:42 PM IST

ಬೆಂಗಳೂರು, (ಸೆಪ್ಟೆಂಬರ್.03): ಮಠದ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜುನ್ಯ ಎಸಗಿರುವ ಆರೋಪ ಮೇಲೆ ಚಿತ್ರದುರ್ಗ ಮುರುಘಾ ಶರಣರ ಬಂಧನವಾಗಿದೆ. ಈ ಪ್ರಕರಣದ ಬಗ್ಗೆ ಸಾಮಾಜಿ ಜಾಲತಾಣಗಳಲ್ಲಿ ಕಾವಿ ಸಂತರ ಬಗ್ಗೆ ನಾನಾ ನೆಗೆಟಿವ್ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯೆ ಕರ್ನಾಟಕದ ಹಲವು ಪಠದ ಸ್ವಾಮೀಜಿಗಳು ಲೈಂಗಿಕ ಚಟುವಟಿಕೆಗಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಮಹಿಳೆಯರ ಆಡಿಯೋ ವೈರಲ್ ಆಗಿದೆ.

 ಹೌದು...ಇಬ್ಬರು ಹೆಣ್ಣು ಮಕ್ಕಳು ಪರಸ್ಪರ ಮಾತನಾಡಿಕೊಂಡಿರುವ ಆಡಿಯೋ ಇದಾಗಿದ್ದು, ಕರ್ನಾಟಕದ ಹಲವು ಸ್ವಾಮೀಜಿಗಳ ಹೆಸರುಗಳನ್ನ ಸಹ ಓಪನ್‌ ಆಗಿ ಹೇಳಿದ್ದಾರೆ. ರಾಜ್ಯದ ಹಲವು ಮಠಗಳ ಸ್ವಾಮೀಜಿಗಳು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹೆಣ್ಣು ಮಕ್ಕಳನ್ನು ಹಾಳು ಮಾಡಿದ್ದಾರೆ. ಬಹಳಷ್ಟು ಜನ ಕೆಟ್ಟವರೇ ಎಂದು ಮಹಿಳೆಯರಿಬ್ಬರ ಮಾತನಾಡಿರುವ ಆಡಿಯೋದಲ್ಲಿದೆ.

ಬೆಳಗಾವಿಯ ಸತ್ಯಕ್ಕ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು ಗಂಗಾವತಿಯ ಇನ್ನೊಬ್ಬ ಮಹಿಳೆ ಜೊತೆಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಹೆಣ್ಮಕ್ಳನ್ನ ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳುವ ರಾಜ್ಯದ ಮಠಗಳು, ಶ್ರೀಗಳ ಹೆಸರುಗಳನ್ನು ಸಹ ಬಹಿರಂವಾಗಿ ಹೇಳಿಕೊಂಡಿದ್ದಾಳೆ.

Murugha Seer Police Custody ಮುರುಘಾ ಶ್ರೀ ರಕ್ಷಿಸುವ ಪ್ಲಾನ್ ಉಲ್ಟಾ, ಚಿತ್ರದುರ್ಗ ಕೋರ್ಟ್‌ನಲ್ಲಿ ನಡೆದಿದ್ದೇನು?

ಮಹಿಳೆಯ ಆಡಿಯೋ ಹೀಗಿದೆ.
ತಮಿಳುನಾಡು ಸತ್ಯಕ್ಕ ಅಂದ್ರೆ ಕೆಲವು ಸ್ವಾಮೀಜಿಗಳು ಮಾತಾಡುವುದಿಲ್ಲ. ನಾನು 10 ವರ್ಷ ತಮಿಳುನಾಡಿನಲ್ಲಿ ಇದ್ದು, ಬಸವ ಸೇವಾ ಸಮತಿಯನ್ನು ಕಟ್ಟಿ ಬಿಟ್ಟು ಬಂದಿದ್ದೇನೆ. ಈಗ ಈ ಸ್ವಾಮೀಜಿಯ ಘಟನೆ ಸುಳ್ಳು ಅಂತ ಕೆಲವರು ಮಾತನಾಡುತ್ತಿದ್ದಾರೆ. ಆದ್ರೆ, ಅವರ ಬಳಿ ಇದ್ದ ಹೆಣ್ಣು ಮಕ್ಕಳಿಗೇ ಗೊತ್ತು ಅವರು ಎಂಥವರು ಎಂದು ಮಹಿಳೆ ಹೇಳಿದ್ದಾಳೆ.

ಇನ್ನು ಆ ಮಹಿಳೆ ಮಾತು ಮುಂದುರಿಸಿದ್ದು,  ಮದುರೈನಲ್ಲಿರು ಪೀಠದ ಐದು ಎಕರೆ ಜಮೀನು ಇದೆ. ನನ್ನೊಂದಿಗೆ ಚೆನ್ನಾಗಿ ಇರು. ಎಲ್ಲಾ ವ್ಯವಸ್ಥೆ ಮಾಡುತ್ತೇನೆ ಎಂದು ಒಬ್ಬ ಸ್ವಾಮೀಜಿ ನನಗೆ ಆಫರ್ ಕೊಟ್ಟಿದ್ರು.ಎಲ್ಲ ಹೊರಗೆ ಹಾಕಬಹುದು. ಆದ್ರೆ, ಸೇಫ್ಟಿ ಇಲ್ಲ ಎಂದು ಮಹಿಳೆ ಮಾತನಾಡಿದ್ದಾಳೆ.

Murugha Sri case: ಮುರುಘಾ ಶರಣರಿಗೆ ಪುರುಷತ್ವ ಪರೀಕ್ಷೆ, ವರದಿಯಲ್ಲಿ ಗಂಡಸ್ತನ ಸಾಬೀತು

ಸ್ವಾಮೀಜಿಯೊಬ್ಬರು ಶಿರಸಿಯ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಬಳಿಕ ಆಕೆ ಪ್ರಗ್ನೆಂಟ್ ಆಗಿದ್ದಳು. ಸ್ವಾಮೀಜಿಗಳು ಆಸ್ಟ್ರೇಲಿತಾ ಫಾರೀನ್ ಟೂರ್‌ಗೆ ಹೋಗಿ ಬರುವುದರೊಳಗೆ ಪೋಷಕರು ಆ ಯುವತಿಗೆ ಲೆಕ್ಚರರ್ ಜೊತೆ ಮದುವೆ ಮಾಡಿಕೊಟ್ರು. ಮಠದ ಸ್ವಾಮಿಗಳೇ ಮದ್ವೆ ಮಾಡಿಕೊಟ್ರು.40 ಲಕ್ಷ ಮನೆ, ಕಾರು ಕೊಟ್ರು. ಅವಳ ತಿಂಗಳ-ತಿಂಗಳ ಇಂತಿಷ್ಟು ಅಂತ ಅಕೌಂಟ್‌ಗೆ ಹೋಗುತ್ತಿತ್ತು ಹೀಗೆ ಕರ್ನಾಟಕದ ಹಲವು ಸಮುದಾಯದ ಸ್ವಾಮೀಜಿಗಳ ಹೆಸರಿಸಿದ್ದಾರೆ.

ಆದ್ರೆ, ಮಹಿಳೆಯರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅವರಿಬ್ಬರು ಯಾರು? ಏನು? ಎನ್ನುವ ಖಚಿತ ಮಾಹಿತಿ ಇಲ್ಲ. ಆದರೆ, ಆಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

ಆಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios