ಆನ್‌ಲೈನ್‌ನಲ್ಲಿ ವಿಗ್ರಹ ಖರೀದಿಸಿ 'ಜಮೀನಿನಲ್ಲಿ ಸಿಕ್ಕಿದ ಮೂರ್ತಿ' ಎಂದು ವಂಚನೆ!
ಆನ್‌ಲೈನ್‌ನಲ್ಲಿ ವಿಗ್ರಹಗಳನ್ನು ಖರೀದಿ ಮಾಡಿ, ಬಳಿಕ ಅದನ್ನು ತಮ್ಮ ಜಮೀನಿನಲ್ಲಿ ಸಿಕ್ಕ ಮೂರ್ತಿಗಳು ಎಂದು ಪ್ರಚಾರ ಮಾಡುವ ಮೂಲಕ ಹಣ ಸುಲಿಗೆ ಮಾಡುತ್ತಿದ್ದ ಮೂವರನ್ನು ಉತ್ತರ ಪ್ರದೇಶದ ಉನ್ನಾವೊದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸುವ ವೇಳೆಗಾಗಲೇ, ಸ್ಥಳೀಯ ಗ್ರಾಮಸ್ಥರು ಮೂರ್ತಿಗೆ ಪೂಜೆ ಹಾಗೂ ಹಣವನ್ನು ಕಾಣಿಕೆ ನೀಡಲು ಆರಂಭಿಸಿದ್ದರು,
ಲಕ್ನೋ (ಸೆ. 3): ಎಲ್ಲಿಯ ತನಕ ಮೋಸ ಹೋಗುವವರು ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಮೋಸ ಮಾಡಲು ಹೊಸ ಹೊಸ ಮಾರ್ಗಗಳನ್ನು ಅವರು ಕಂಡುಹಿಡಿಯುತ್ತಲೇ ಇರುತ್ತಾರೆ. ಅಂಥದ್ದೊಂದು ಪ್ರಕರಣ ಉತ್ತರ ಪ್ರದೇಶದ ಉನ್ನಾವೋದಲ್ಲಿ ವರದಿಯಾಗಿದೆ. ಆನ್‌ನೈಲ್‌ನಲ್ಲಿ ವಿಶೇಷವಾಗಿ ಕಂಡು ಬರುವ ಮೂರ್ತಿಯನ್ನು ಆರ್ಡರ್ ಮಾಡಿದ ಮೂವರು ರೈತರು, ಬಳಿಕ ಈ ಮೂರ್ತಿಯನ್ನು ತಮ್ಮ ಜಮೀನಿನಲ್ಲಿ ಸಿಕ್ಕಿದ್ದು ಎಂದು ಹೇಳುವ ಮೂಲಕ ಸ್ಥಳೀಯ ಜನವರನ್ನು ವಂಚನೆ ಮಾಡುತ್ತಿದ್ದರು. ಅಂಥ ತಂಡವನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಇವರು ಬಂಧನ ಮಾಡುವ ವೇಳೆಗಾಗಲೇ ಸ್ಥಳೀಯ ಜನರು ಈ ಮೂರ್ತಿಗಳಿಗೆ ಪೂಜೆ ಆರಂಭಿಸಿ, ಕಾಣಿಕೆಗಳನ್ನು ನೀಡಲು ಮುಗಿಬಿದ್ದಿದ್ದರು. ಕೊನೆಗೆ ಪೊಲೀಸರು ಬಂದು ಇದು ಆನ್‌ಲೈನ್‌ನಲ್ಲಿ ಖರೀದಿ ಮಾಡಿರುವ ಮೂರ್ತಿಗಳು ಎಂದು ಸಾಕ್ಷಿ ಸಮೇತ ಜನರಿಗೆ ತೋರಿಸಿದ ಘಟನೆ ನಡೆದಿದೆ. 55 ವರ್ಷದ ರೈತನೊಬ್ಬ ತನ್ನ ಇಬ್ಬರು ಪುತ್ರರೊಂದಿಗೆ ಈ ವಂಚನೆಯಲ್ಲಿ ಭಾಗಿಯಾಗಿದ್ದ. ಈ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಹಿಂದೂ ದೇವರುಗಳ ವಿಗ್ರಹಗಳನ್ನು ಖರೀದಿ ಮಾಡಿದ್ದ ಈತ, ಇದನ್ನು ತನ್ನ ಜಮೀನಿನಲ್ಲಿ ಸಿಕ್ಕಿದ ಮೂರ್ತಿಗಳು ಎಂದು ಬಿಂಬಿಸಿ ಹಳ್ಳಿಗರು ಮೋಸ ಮಾಡಲು ಪ್ರಯತ್ನಿಸಿದ್ದ. ಇದರ ಬೆನ್ನಲ್ಲಿಯೇ ಈ ವಿಗ್ರಹಗಳನ್ನು ನೋಡಲು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು. ಪೊಲೀಸರಿಗೆ ಕೂಡ ಈ ವಿಚಾರ ತಿಳಿದಾಗ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ವಂಚನೆ ಜಾಲವನ್ನು ಬಯಲು ಮಾಡಿದ್ದಾರೆ.
"ಅವರು ಅಲ್ಲಿ ದೇವಸ್ಥಾನವನ್ನು ಸ್ಥಾಪಿಸಲು ಬಯಸಿದ್ದರು" ಎಂದು ಬಂಗಾರ್ಮೌ ವೃತ್ತದ ಅಧಿಕಾರಿ ಪಂಕಜ್ ಕುಮಾರ್ ಸಿಂಗ್ (Bangarmau Circle Officer Pankaj Kumar Singh) ತಿಳಿಸಿದ್ದಾರೆ. "ಅವರ ಉದ್ದೇಶ ಹಣ ಮಾಡುವುದಾಗಿತ್ತು ಏಕೆಂದರೆ ಜನರು ವಿಗ್ರಹಗಳನ್ನು ನೋಡಿದ ಮೇಲೆ ಹಣವನ್ನು ಕಾಣಿಕೆ ರೂಪದಲ್ಲಿ ನೀಡಲು ಆರಂಭಿಸಿದ್ದರು' ಎಂದು ತಿಳಿಸಿದ್ದಾರೆ.
ವಿಗ್ರಹಗಳು (Idols) ಹೊಚ್ಚಹೊಸದಾಗಿ ಕಾಣುತ್ತಿದ್ದರಿಂದ ಅನುಮಾನಗೊಂಡು ತನಿಖೆ ಆರಂಭಿಸಿದ್ದಾಗಿ ಪೊಲೀಸರು (Uttar Pradesh Police) ತಿಳಿಸಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಪೊಲೀಸರು ಪುರಾತತ್ವ ಇಲಾಖೆಗೂ ವಿಗ್ರಹಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಗ್ರಹ ಸೆಟ್ (Idol Set) ಅನ್ನು ಕೇವಲ 169 ರೂಪಾಯಿಗೆ ಆನ್‌ಲೈನ್‌ನಲ್ಲಿ ಖರೀದಿ ಮಾಡಿದ್ದ ವಂಚಕರು, ಜನರಿಂದ 30,000 ರೂಪಾಯಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಅಶೋಕ್ ರೈರಾಜ್ (55), ಮತ್ತು ಅವರ ಮಕ್ಕಳಾದ ರವಿ ರೈರಾಜ್ (26) ಮತ್ತು ವಿಜಯ್ ರೈರಾಜ್ (27) ಅವರನ್ನು ಬಂಧಿಸಿದ್ದಾರೆ. ಅವರು ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಮೆಹಮೂದ್‌ಪುರ ಗ್ರಾಮದವರು ಎಂದು ಹೇಳಿದ್ದಾರೆ.
ಲಾಡ್ಜ್‌ನಲ್ಲಿ BCA ವಿದ್ಯಾರ್ಥಿನಿಗೂಢ ಸಾವು ಕೇಸ್: ಸ್ನೇಹ ಬೆಳೆಸಿದ್ದಕ್ಕೆ ಕೊಲೆ
“ಒಂದೆರಡು ದಿನಗಳ ಹಿಂದೆ, ತಂದೆ ಮತ್ತು ಮಕ್ಕಳು ತಮ್ಮ ಕನಸಿನಲ್ಲಿ ದೇವಿಯನ್ನು ಕಂಡಿದ್ದಾರೆಂದು ಗ್ರಾಮಸ್ಥರಿಗೆ ಹೇಳಲು ಪ್ರಾರಂಭಿಸಿದರು. ಆಕೆ ತನ್ನ ಹೊಲದಲ್ಲಿ ವಿಗ್ರಹವನ್ನು ಹೂತಿದ್ದಾಳೆ ಎಂದು ನಮಗೆ ಹೇಳಿದ್ದಾಳೆ ಎಂದು ತಿಳಿಸಿದ್ದರು, ವಿಗ್ರಹಗಳು ದೊರೆತ ಸ್ಥಳದಲ್ಲಿ ಇವರು ನೆಲವನ್ನು ಅಗಿಯಲು ಆರಂಭಿಸಿದ್ದರು. ಈ ವೇಳೆ ಈ ವಿಗ್ರಹಗಳು ದೊರೆತಿದೆ. ಬಳಿಕ ಅದೇ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ಬಯಸಿದ್ದರು. ಒಟ್ಟಾರೆ ಹಣ ಮಾಡುವುದೊಂದೇ ಅವರ ಉದ್ದೇಶವಾಗಿತ್ತು. ವಿಗ್ರಹಗಳನ್ನು ನೋಡಿ ಜನ ಹಣವನ್ನು ಖಂಡಿತಾ ಕೊಡುತ್ತಾರೆ ಎಂದು ಅವರು ನಂಬಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳನ್ನು ಒಪ್ಪಿಸದಿದ್ದರೆ ‘ಸರ್ ತನ್ ಸೆ ಜುದಾ: ಹಿಂದೂ ಕುಟುಂಬಕ್ಕೆ ಮುಸ್ಲಿಂ ಯುವಕ ಬೆದರಿಕೆ
ಅಪಾರ ಜನಸ್ತೋಮ ಜಮಾಯಿಸಿದ ಬಳಿಕ ಪೊಲೀಸ್ ತಂಡಗಳು ಕೂಡ ಸ್ಥಳಕ್ಕೆ ಆಗಮಿಸಿದವು. "ಈ ವಿಗ್ರಹಗಳನ್ನು 169 ರೂ.ಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲಾಗಿದೆ ಮತ್ತು ತಂದೆ ಮತ್ತು ಇಬ್ಬರು ಪುತ್ರರು ಮೋಸ ಮಾಡಿದ್ದು ಕಂದು ಬಂದಿದೆ' ಎಂದು ಪೊಲೀಸರು ಹೇಳಿದ್ದಾರೆ.