ಖೋಟಾ ನೋಟಿನ ದಂಧೆ: ಖತರ್ನಾಕ್ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಉತ್ತರ ಕನ್ನಡ ಪೊಲೀಸರು

ದೊಡ್ಡ ದೊಡ್ಡ ನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ಚಲಾವಣೆಯಲ್ಲಿರುವ ನಕಲಿ ನೋಟಿನ ಜಾಲ ಇದೀಗ ಸಣ್ಣ ಪುಟ್ಟ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಕೂಡಾ ತನ್ನ ಕಬಂದ ಬಾಹು ಚಾಚಲು ಪ್ರಾರಂಭಿಸಿದೆ.‌ 

Fake Notes Racket Busted In Uttara Kannada Many Arrested gvd

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಮೇ.10): ದೊಡ್ಡ ದೊಡ್ಡ ನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ಚಲಾವಣೆಯಲ್ಲಿರುವ ನಕಲಿ ನೋಟಿನ (Fake Notes) ಜಾಲ ಇದೀಗ ಸಣ್ಣ ಪುಟ್ಟ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಕೂಡಾ ತನ್ನ ಕಬಂದ ಬಾಹು ಚಾಚಲು ಪ್ರಾರಂಭಿಸಿದೆ.‌ ಸಣ್ಣ ಪುಟ್ಟ ವ್ಯಾಪಾರಸ್ಥರನ್ನು ಟಾರ್ಗೆಟ್ ಮಾಡಿ, ಅವರಿಗೆ ಖೋಟಾ ನೋಟು ನೀಡಿ ಚಲಾವಣೆ ಮಾಡಿಸ್ತಾ ಇದ್ದ ಖದೀಮರು, ಇದರಲ್ಲಿ ಕೈಜೋಡಿಸ್ತಿದ್ದವರಿಗೆ ಪರ್ಸಂಟೇಜ್ ಕೂಡಾ ನೀಡ್ತಾರೆ. ಇಂತದ್ದೇ ಒಂದು ಜಾಲವನ್ನು ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸರು (Police) ಬೇಧಿಸಿದ್ದು, ಖತರ್ನಾಕ್ ಆರೋಪಿಗಳನ್ನು ಸೆರೆಮನೆಗೆ (Arrest) ಅಟ್ಟಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. 

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಚಲಾವಣೆಯಾಗ್ತಿರುವ ನಕಲಿ ನೋಟಿನ ಜಾಲವನ್ನು ಮಟ್ಟ ಹಾಕಲು ಪೊಲೀಸರು ತಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಇದ್ದಾರೆ. ದೊಡ್ಡ ದೊಡ್ಡ ನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ಚಲಾವಣೆಯಲ್ಲಿರುವ ಈ ನಕಲಿ ನೋಟಿನ ಜಾಲ ಇದೀಗ ಸಣ್ಣ ಪುಟ್ಟ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಕೂಡಾ ತನ್ನ ಕಬಂದ ಬಾಹು ಚಾಚಲು ಪ್ರಾರಂಭಿಸಿದೆ.‌ ಸಣ್ಣ ಪುಟ್ಟ ವ್ಯಾಪಾರಸ್ಥರನ್ನು ಟಾರ್ಗೆಟ್ ಮಾಡಿ, ಅವರಿಗೆ ಖೋಟಾ ನೋಟು ನೀಡಿ ಚಲಾವಣೆ ಮಾಡಿಸ್ತಿದ್ದ ಖದೀಮರು, ಇದರಲ್ಲಿ ಕೈ ಜೋಡಿಸ್ತಿದ್ದವರಿಗೆ ಪರ್ಸಂಟೇಜ್ ಕೂಡಾ ನೀಡ್ತಾರೆ. 

ಟಿಕ್‌ಟಾಕ್‌ ಮೂಲಕ ಯುವಕನ ಮೋಹಕ್ಕೆ ಮನಸೋತು ಬಂದ 2 ಮಕ್ಕಳ ತಾಯಿ, ಇದೀಗ ಕಂಗಾಲು

ಇಂತದ್ದೇ ಒಂದು ಜಾಲವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬೇಧಿಸಿದ್ದು, ಈ ಸೆರೆಸಿಕ್ಕ ಖತರ್ನಾಕ್ ಆರೋಪಿಗಳನ್ನು ಪೊಲೀಸರು ಸೆರೆಮನೆಗೆ ಅಟ್ಟಿದ್ದಾರೆ. ಹೌದು! ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಖೋಟಾ ನೋಟಿನ ದಂಧೆ ಸಕತ್ ಆಕ್ಟಿವ್ ಆಗಿದ್ದು, ತಾಲೂಕಿನ ಖಾಸಗಿ ಹೋಟೆಲ್ ಬಳಿ ನಡೆಯಲಿದ್ದ ಖೋಟಾ ನೋಟು ಖರೀದಿಯ ವ್ಯವಹಾರವನ್ನು ಪೊಲೀಸರು ದಾಳಿ ನಡೆಸಿ ವಿಫಲಗೊಳಿಸಿದ್ದಾರೆ. ಗೋವಾದಿಂದ ಬಂದ ಮೂವರಿಗೆ ಈರ್ವರು ಖೋಟಾ ನೋಟು ನೀಡಲು ಬಂದಿದ್ದ ವೇಳೆ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿದ್ದು, ಪ್ರವೀಣ್ ಲೋಯ್ಡ್, ಲಾರ್ಸನ್ ಲೂಯಿಸ್, ಪ್ರನೋಯ್ ಫೆರ್ನಾಂಡೀಸ್‌ನನ್ನು ಬಂಧಿಸಿದ್ದಾರೆ. 

ಆದರೆ, ಪ್ರಮುಖ ಆರೋಪಿ ಮುಸ್ತಾಕ್ ಹಸನ್ ಬೇಗ ವಾಹನ ಬಿಟ್ಟು ಪರಾರಿಯಾಗಿದ್ದು, ಆತನ ವಾಹನ ವಶಕ್ಕೆ ಪಡೆದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಅಲ್ಲದೇ, ಇವರಿಂದ 500ರೂ. ಮುಖಬೆಲೆಯ 26 ಖೋಟಾ ನೋಟುಗಳನ್ನು (13000ರೂ.) ಹಾಗೂ 20,000ರೂ. ಅಸಲಿ ನೋಟುಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.  ಈ ನಕಲಿ ನೋಟಿನ ದಂಧೆ ಕೇವಲ ಸಣ್ಣಪುಟ್ಟ ವ್ಯಾಪಾರಸ್ಥರನ್ನು ಅಷ್ಟೇ ಟಾರ್ಗೆಟ್ ಮಾಡುತ್ತಿರಲಿಲ್ಲ, ಪರಿಚಯಸ್ಥರಿಗೆ 25000 ರೂ. ಮುಖಬೆಲೆಯ ಖೋಟಾ ನೋಟನ್ನು ಕೊಟ್ಟು ಅವರಿಂದ 5000 ರೂ. ಅಸಲಿ ನೋಟನ್ನು ಪಡೆದುಕೊಳ್ಳುತ್ತಿದ್ರಂತೆ. ಜತೆಗೆ 500ಕ್ಕೆ ಶೇ.10 ಕಮಿಷನ್ ಪಡೆದುಕೊಂಡು ತನ್ನ ವ್ಯವಹಾರದ ಕಬಂದ ಬಾಹುವನ್ನು ಚಾಚುತ್ತಾ ಬಂದಿದ್ದಾರೆ. 

ದಾಂಡೇಲಿ ವಾಟರ್ ಸ್ಪೋರ್ಟ್ಸ್: ಪರವಾನಗಿ ಪಡೆದು ಮತ್ತೆ ಪ್ರಾರಂಭಿಸಲು ಜಿಲ್ಲಾಡಳಿತ ಸೂಚನೆ

ಈ ಖೋಟಾ ನೋಟು ಬಹುತೇಕ ಗೋವಾ ಮೂಲದಿಂದ ಬಂದಿರುವ ಶಂಕೆಯನ್ನು ಪೊಲೀಸ್ ಅಧಿಕಾರಿಗಳು ‌ವ್ಯಕ್ತಪಡಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಲ್ಲದೇ, ಈ ಜಾಲದ ಕಿಂಗ್ ಪಿನ್‌ಗಾಗಿ ಹುಡುಕಾಟ‌ ನಡೆಸಿದ್ದಾರೆ. ಈ ಹಿಂದೆ ಜಿಲ್ಲೆಯ ದಾಂಡೇಲಿಯಲ್ಲಿ ವರದಿಯಾಗಿದ್ದ ಖೋಟಾ ನೋಟಿನ ಜಾಲ ಇದೀಗ ಅಂಕೋಲಾದಲ್ಲಿ ಕಂಡಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ವ್ಯಾಪಾರಸ್ಥರು 500 ರೂ. ಮುಖಬೆಲೆಯ ನೋಟನ್ನು ಪಡೆಯಲು ಭಯ ಪಡುವಂತಾಗಿದ್ದು, ಜನರು ಆದಷ್ಟು ಜಾಗ್ರತೆಯಲ್ಲಿರಬೇಕು ಅಂತಾರೆ ಅಧಿಕಾರಿಗಳು.‌ ಒಟ್ಟಿನಲ್ಲಿ ದೇಶದ ಆರ್ಥಿಕತೆಯ ಮೇಲೆ ಹೊಡೆತ ನೀಡುವಂತಹ ಖೋಟಾ ನೋಟಿನ ಜಾಲ ಅಲ್ಲಲ್ಲಿ ಪತ್ತೆಯಾಗುತ್ತಿದ್ದು, ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿ ಜೈಲಿಗಟ್ಟುತ್ತಿದ್ದಾರೆ. ಈ ಕಾರಣದಿಂದ‌ ಜನರು ಬುದ್ಧಿವಂತಿಕೆಯಿಂದ ವ್ಯವಹಾರ ನಡೆಸಬೇಕಿದ್ದು, ಇಲ್ಲವಾದಲ್ಲಿ ಪಂಗನಾಮ ಗ್ಯಾರಂಟಿ. 

Latest Videos
Follow Us:
Download App:
  • android
  • ios