*  ವಿದ್ಯಾರ್ಥಿಗಳಿಗೆ ಅಶ್ಲೀಲ ಚಿತ್ರ ರವಾನೆ *  ಪ್ರಾಧ್ಯಾಪಕ ಡಾ. ಅಶೋಕ ಹುಲಿಬಂಡಿ ಅವರಿಗೆ ಕರೆ ಮಾಡಿದ್ದ ವಂಚಕ*  ಈ ಸಂಬಂಧ ಹುಬ್ಬಳ್ಳಿ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು 

ಹುಬ್ಬಳ್ಳಿ(ಸೆ.12): ಆನ್‌ಲೈನ್‌ನಲ್ಲಿ ಹಣ ದೋಚುವ ಉದ್ದೇಶ ಫಲಿಸದ ಹಿನ್ನೆಲೆಯಲ್ಲಿ ಪ್ರಾಧ್ಯಾಪಕರ ನಂಬರ್‌ನಿಂದ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಅವರ ವಿದ್ಯಾರ್ಥಿಗಳಿಗೆ ಅಶ್ಲೀಲ ಚಿತ್ರವನ್ನು ರವಾನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಹುಬ್ಬಳ್ಳಿ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಯುಡಿಯ ಆಂಗ್ಲ ಪ್ರಾಧ್ಯಾಪಕ ಡಾ. ಅಶೋಕ ಹುಲಿಬಂಡಿ ಅವರಿಗೆ ಕರೆ ಮಾಡಿದ ವಂಚಕ ಮೊದಲು ಸಿಮ್‌ ಬ್ಲಾಕ್‌ ಆಗುತ್ತದೆ ಎಂದು ನಂಬಿಸಿ, ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿದ್ದಾನೆ. ಅದನ್ನು ಒತ್ತಿ ಟೀಮ್‌ ವೀವರ್‌ ಆ್ಯಪ್‌ ಡೌನ್ಲೋಡ್‌ ಮಾಡಲು ಹೇಳಿ, ಅದರ ಐಡಿ ಮತ್ತು ಒಟಿಪಿ ಪಡೆದು ಯೊನೊ ಆ್ಯಪ್‌ ಮೂಲಕ ಆಕ್ರ್ಯೂಬ್‌ ಪ್ಲಾನೆಟ್‌ ಹೆಸರಿಗೆ 11 ರಿಚಾರ್ಜ್‌ ಮಾಡಿಸಿಕೊಂಡಿದ್ದ.

900 ರೂ. ಸಲ್ವಾರ್ ಖರೀದಿ ಮಾಡಲು ಹೋಗಿ ಲಕ್ಷ ರೂ. ಕಳಕೊಂಡಳು!

ಬಳಿಕ ಮೊಬೈಲ್‌ಗೆ ಬಂದ ಮತ್ತೊಂದು ಒಟಿಪಿ ಹೇಳುವಂತೆ ಪೀಡಿಸಿದ್ದಾನೆ. ಇದರಿಂದ ಅನುಮಾನಗೊಂಡ ಡಾ. ಅಶೋಕ ನಿರಾಕರಿಸಿದ್ದಕ್ಕೆ ಅವರ ಮೊಬೈಲ್‌ ನಂಬರ್‌ ಬಳಸಿ ನಕಲಿ ವಾಟ್ಸ್‌ಆ್ಯಪ್‌ ಗ್ರುಪ್‌(4ನೇ ಸೆಮ್‌ ಆನ್ಲೈನ್‌ ಕ್ಲಾಸೆಸ್‌) ರಚಿಸಿ ಅಶ್ಲೀಲ ಚಿತ್ರ ಕಳುಹಿಸಿದ್ದಾನೆ. ಮತ್ತೆ ಕರೆ ಮಾಡಿ, ಖಾತೆಗೆ ಹಣ ಹಾಕದಿದ್ದರೆ ಟೆಲಿಗ್ರಾಂ, ಫೇಸ್ಬುಕ್‌ಗೆ ಅಶ್ಲೀಲ ಚಿತ್ರ ಶೇರ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂದು ದಾಖಲಾಗಿದೆ.