900 ರೂ. ಸಲ್ವಾರ್ ಖರೀದಿ ಮಾಡಲು ಹೋಗಿ ಲಕ್ಷ ರೂ. ಕಳಕೊಂಡಳು!

* ಆನ್ ಲೈನ್ ಪೋರ್ಟಲ್ ನಲ್ಲಿ ಹಣ ಕಳೆದುಕೊಂಡ ಮಹಿಳೆ
*900 ರೂ ಮೌಲ್ಯದ ಸಲ್ವಾರ್ ಸೂಟ್ ಖರೀದಿಸಲು  ಮುಂದಾದಾಗ ವಂಚನೆ
* ವಂಚಕರು ಹೇಳಿದಂತೆ  ತುಂಬಿ ಕಳಿಸಿದ ಮಹಿಳೆ

Ahmedabad Woman ends up losing Rs 1 lakh while placing order on shopping portal mah

ಅಹಮದಾಬಾದ್ (ಜು. 22)  ಆನ್‌ಲೈನ್ ಶಾಪಿಂಗ್ ಪೋರ್ಟಲ್‌ನಿಂದ 900 ರೂ.ಗಳ ಸಲ್ವಾರ್ ಸೂಟ್ ಖರೀದಿಸಲು ಹೋಗಿ ಒಂದು ಲಕ್ಷ ರೂ. ಕಳೆದುಕೊಂಡಿದ್ದಾರೆ.

ಗೋಟಾದ ಮಹಿಳೆಯೊಬ್ಬಳು ಸೈಬರ್  ವಂಚನೆಗೆ ಒಳಗಾಗಿದ್ದಾರೆ. ಗೋಟಾದ ವೀರ್ ಸಾವರ್ಕರ್ ಹೈಟ್ಸ್ ನಿವಾಸಿ 35 ವರ್ಷದ ಭಾವನಾ ದವೆ ಜೂನ್ 20  ರಂದು ಆನ್ ಲೈನ್ ಅಪ್ಲಿಕೇಶನ್ ಡೌನ್ ಲೋಡ್   ಮಾಡಿಕೊಂಡಿದ್ದಾರೆ. 900 ರೂ ಮೌಲ್ಯದ ಸಲ್ವಾರ್ ಸೂಟ್ ಖರೀದಿಸಲು  ಮುಂದಾಗಿದ್ದಾರೆ. 

ಜೂನ್ 22 ರಂದು ಈ ಅಪ್ಲಿಕೇಶನ್‌ ಕಡೆಯಿಂದ ಪೂಜಾ ಎನ್ನುವವರು ಕರೆ ಮಾಡಿದ್ದಾರೆ.  ನಿಮ್ಮ ಹೆಸರಿನಲ್ಲಿ ಆರ್ಡರ್ ಒಂದು ಪ್ಲೇಸ್ ಆಗಿದೆ ಎಂದಿದ್ದಾರೆ. ಆದರೆ ನಾನು ಯಾವುದೇ ನಾನು ಯಾವುದೇ ಆರ್ಡರ್ ಮಾಡಿಲ್ಲ ಎಂದು ಹೇಳಿದ್ದಾರೆ. ನಾನು ಈ ಆರ್ಡರ್ ಕ್ಯಾನ್ಸಲ್ ಮಾಡಿ ಎಂದು   ಕೇಳಿಕೊಂಡಿದ್ದೆ. ಹಾಗಾದರೆ  ಒಂದು ಕೆಲಸ ಮಾಡಿ ಒಂದು ಅಕೌಂಟ್ ನೀವು ನಾಮಿನೇಟ್ ಮಾಡಬೇಕು ಎಂದು  ಕೇಳಿಕೊಂಡಿದ್ದಾರೆ. ಆಗ ನಿಮಗೆ ಬಹಳ ಬೇಗ ಡಿಲೆವರಿ ಸಿಗುತ್ತದೆ ಎಂದು ನಂಬಿಸಿದ್ದಾರೆ.

ಲಿಂಗ ಪರಿವರ್ತನೆಗೆ ಮುಂದಾಗಿದ್ದ ಯುವತಿಗೆ ಮಹಿಳೆಯಿಂದಲೇ ದೋಖಾ

ಇದಾದ ಮೇಲೆ ಒಂದು ಫಾರಂ ನ್ನು ಆನ್ ಲೈನ್ ಮೂಲಕ ಕಳಿಸಿಕೊಟ್ಟಿದ್ದು ಅದನ್ನು ತುಂಬಿ ಎಂದು ಕೇಳಿಕೊಂಡಿದ್ದಾರೆ. ಯುಪಿಐ ಐಡಿ ಸೇರಿ ಅನೇಕ ಮಾಹಿತಿಯನ್ನು ಕೇಳಿದ್ದು ನೀಡಿದ್ದಾರೆ.  ಫಿಲ್ ಮಾಡಿ ವಾಪಸ್ ಕಳಿಸಿದಾಗ ಖಾತೆಯಿಂದ ಐದು ರೂ. ಕಟ್ ಆಗಿದೆ.   ಇದಾದ ಮೇಲೆ ಒಂದಾದ ಒಂದು ಟ್ರಾನ್ಸಾಕ್ಷನ್ ಶುರುವಾಗಿದೆ. ಎಂಟು ಸಾರಿ ಹಣ ಕಟ್ ಆಗಿದ್ದು 99,996 ರೂ. ಖಾತೆಯಿಂದ ಕಟ್ ಆಗಿದೆ.

ಹಣ ಕಳೆದುಕೊಂಡ ಮೇಲೆ ಸೈಬರ್ ಪೊಲೀಸರ ಬಳಿ ತೆರಳಿ ಮಹಿಳೆ ದೂರು ದಾಖಲಿಸಿದ್ದಾರೆ. ಐಟಿ ಕಾಯ್ದೆಯ ಅನ್ವಯ ದೂರು  ದಾಖಲು ಮಾಡಿಕೊಳ್ಳಲಾಗಿದ್ದು  ತನಿಖೆ ನಡೆಯುತ್ತಿದೆ. 

 

 

Latest Videos
Follow Us:
Download App:
  • android
  • ios