: ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆ ಶಾಲಾ ಮಕ್ಕಳ ಕೈಗೆ ಸಿಕ್ಕು ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದೇನಹಳ್ಳಿಯಲ್ಲಿ ನಡೆದಿದೆ.

ತುಮಕೂರು (ಜ.5): ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆ ಶಾಲಾ ಮಕ್ಕಳ ಕೈಗೆ ಸಿಕ್ಕು ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದೇನಹಳ್ಳಿಯಲ್ಲಿ ನಡೆದಿದೆ.

ಕಾಡು ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆ. ಶಾಲೆ ಪಕ್ಕದಲ್ಲೇ ಎಸೆದುಹೋಗಿರುವ ದುಷ್ಕರ್ಮಿಗಳು. ಬೆಳಗ್ಗೆ ಶಾಲೆಗೆ ಬಂದ ಮಕ್ಕಳು ಮದ್ದಿನ ಉಂಡೆ ನೋಡಿದ್ದಾರೆ. ಯುವರಾಜ್, ಶ್ರೀನಿವಾಸ ಎಂಬ ಶಾಲಾ ಬಾಲಕರು ಮೊದಲು ನೋಡಿದ್ದಾರೆ. ಬಳಿಕ ಸಿಡಿಮದ್ದಿನ ಉಂಡೆ ಬಾಲ್ ನಂತೆ ಕಾಣಿಸಿತೋ ಏನೋ ಜೀವಂತ ಮದ್ದಿನ ಹುಂಡೆಯನ್ನು ಕೈಯಲ್ಲಿಡಿದು ಓಡಾಡಿದ್ದಾನೆ. ಇತರೆ ಮಕ್ಕಳಿಗೆ ತೋರಿಸಿದ್ದಾನೆ. ದುರಾದೃಷ್ಟವಶಾತ್ ಬಾಲ್ ಎಂದು ಆಟವಾಡಿಲ್ಲ ಹೀಗಾಗಿ ಸ್ಫೋಟಗೊಳ್ಳದೆ ಹಾಗೆ ಉಳಿದುಕೊಂಡಿದೆ. 

ಕುಡುಕಿಯಾಗಲು ಅಪ್ಪ-ಅಮ್ಮನೇ ಕಾರಣ ಎಂದಿದ್ದ ನಟಿ ಶ್ರುತಿ ಹಾಸನ್​ ಡ್ರಗ್ಸ್​ ಕುರಿತು ಹೇಳಿದ್ದೇನು?

ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗಿರುವ ಶ್ರೀನಿವಾಸ ಆ ಸ್ಪೋಟಕ ಉಂಡೆಯನ್ನು ತಂದೆ ಕೈಗೆ ಕೊಟ್ಟಿದ್ದಾನೆ. ಆದರೆ ಅದು ಬಾಲ್ ಅಲ್ಲ, ಇದು ಯಾವುದೋ ಮಾಟ ಮಂತ್ರದ ಉಂಡೆ ಇರಬೇಕು ಎಂದು ಭಾವಿಸಿ ಅದನ್ನು ದೂರಕ್ಕೆ ಎಸೆದಿರುವ ಶ್ರೀನಿವಾಸ ತಂದೆ. ಉಂಡೆ ಎಸೆಯುತ್ತಿದ್ದಂತೆ ಅದನ್ನ ಹಿಡಿಯಲು ಹೋದ ಬೀದಿ ನಾಯಿ. ಕಚ್ಚಿ ಹಿಡಿಯುವಾಗ ನಾಯಿಯ ಬಾಯಿಯಲ್ಲೇ ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಮದ್ದಿನ ಉಂಡೆ ಸ್ಫೋಟಕ್ಕೆ ಬಾಯಿ ಛಿದ್ರಗೊಂಡ ಸ್ಥಳದಲ್ಲೇ ಪ್ರಾಣ ಬಿಟ್ಟ ಬೀದಿ ನಾಯಿ.

ನೈಂಟಿ ಕೊಡಿಸದ್ದಕ್ಕೆ ಹಿರಿಯ ನಾಗರಿಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಪುಂಡ!

ಬೆಚ್ಚಿಬಿದ್ದ ತಂದೆ:

ಮಗನ ಕೈಯಲ್ಲಿದ್ದ ಮದ್ದಿನ ಉಂಡೆ ಬಾಲ್‌ ಅಲ್ಲ, ಸ್ಫೋಟಕ ಎಂದು ತಿಳಿಯುತ್ತಿದ್ದಂತೆ ಬೆಚ್ಚಿಬಿದ್ದ ಬಾಲಕನ ತಂದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಳಿಕ ಶಾಲೆಗೆ ಸುದ್ದಿ ತಿಳಿಸಿದ ಬಾಲಕನ ತಂದೆ. ಇದೀಗ ಶಾಲೆ ಬಳಿ ಮದ್ದಿನ ಉಂಡೆ ಎಸೆದವರು ಯಾರು ಎಂಬ ಬಗ್ಗೆ ಅನುಮಾನ ಉಂಟುಮಾಡಿದೆ. ಸ್ಥಳಕ್ಕೆ ಬುಕ್ಕಾಪಟ್ಟಣ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಗೊಂಡ ಸ್ಥಳ, ಪತ್ತೆಯಾದ ಜಾಗ ಪರಿಶೀಲಿಸಿರುವ ಪೊಲೀಸರು. ಮಕ್ಕಳೊಂದಿಗೆ ಮಾಹಿತಿ ಪಡೆದು ವಿಚಾರಣೆ ಮುಂದುವರೆಸಿದ ಪೊಲೀಸರು. ಅನಾಹುತ ಸೃಷ್ಟಿಸಲೆಂದು ಎಸೆದು ಹೋದರೆ ದುಷ್ಕರ್ಮಿಗಳು?