ಹೊಟೇಲ್‌ನಲ್ಲಿ ಡೆಕೋರೆಟ್ ಮಾಡಲು ಬಂದಿದ್ದ ವ್ಯಕ್ತಿ ಕಳ್ಳತನ ಮಾಡಿರುವ ಶಂಕೆ. ಸುಂದರ್ ಎಂಬ ವ್ಯಕ್ತಿಯ ಮೇಲೆ ದೂರು ದಾಖಲಾಗಿದೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. 

ಬೆಂಗಳೂರು(ಜ.28):  ಐಪಿಎಸ್ ಅಧಿಕಾರಿ ಮೆಲ್ವಿನ್ ವರ್ಗೀಸ್ ಮದುವೆ ಕಾರ್ಯಕ್ರಮದಲ್ಲಿ ಚಾಲಾಕಿ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ್ದಾನೆ. ಹೌದು, ಮದುವೆ ಸಮಾರಂಭದಲ್ಲಿ ಇಟ್ಟಿದ್ದ ಉಡುಗೊರೆಗಳನ್ನ ಕಳ್ಳರು ಕದ್ದೊಯ್ದಿದ್ದಾನೆ. ನಗರದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ಸಮಾರಂಭ ನಡೆದಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರ್ಯಕ್ರಮದಲ್ಲಿ ವಾಚ್, ಎನ್ವಲಪ್ ಕವರ್‌ಗಳು ಸೇರಿ ಸುಮಾರು ಒಂದು ಲಕ್ಷ ಬೆಲೆ ಬಾಳುವ ಉಡುಗೊರೆಗಳು ಬಂದಿದ್ದವು. ಜನವರಿ 14 ರಂದು ವಸಂತನಗರದ ಐಷಾರಾಮಿ ಹೋಟೆಲ್‌ನಲ್ಲಿ ಮದುವೆ ಕಾರ್ಯಕ್ರಮ ನಡೆದಿತ್ತು. ಮನೆಗೆ ತೆರಳಿ ಗಿಫ್ಟ್‌ಗಳನ್ನ ಪರಿಶೀಲನೆ ವೇಳೆ ಘಟನೆ ಬೆಳಕಿಗೆ ಬಂದಿದೆ. 

Bengaluru: ಜಡ್ಜ್ ಮನೆಯನ್ನೂ ಬಿಡದ ಖದೀಮರು: 60ಕ್ಕೂ ಹೆಚ್ಚು ಬಾರಿ ಕಳ್ಳತನ ಮಾಡಿದ್ದ ಮನೆಗಳ್ಳರು ಅರೆಸ್ಟ್‌!

ಹೋಟೆಲ್‌ನಲ್ಲಿ ಡೆಕೋರೆಟ್ ಮಾಡಲು ಬಂದಿದ್ದ ವ್ಯಕ್ತಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುಂದರ್ ಎಂಬ ವ್ಯಕ್ತಿಯ ಮೇಲೆ ದೂರು ದಾಖಲಾಗಿದೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಐಪಿಎಸ್ ಅಧಿಕಾರಿ ಮೆಲ್ವಿನ್ ವರ್ಗೀಸ್ ಅವರು ಸದ್ಯ ಹೈದರಾಬಾದ್‌ನಲ್ಲಿ ತರಬೇತಿಯಲ್ಲಿದ್ದಾರೆ ಅಂತ ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.