Asianet Suvarna News Asianet Suvarna News

Bengaluru: ಜಡ್ಜ್ ಮನೆಯನ್ನೂ ಬಿಡದ ಖದೀಮರು: 60ಕ್ಕೂ ಹೆಚ್ಚು ಬಾರಿ ಕಳ್ಳತನ ಮಾಡಿದ್ದ ಮನೆಗಳ್ಳರು ಅರೆಸ್ಟ್‌!

ಅವರು ಅಂತಿಂತಾ ಕಳ್ಳರಲ್ಲ. ಇಬ್ರೂ ಫಿಲ್ಡಿಗಿಳಿದ್ರು ಅಂದ್ರೆ ಜಡ್ಜ್ ಮನೆ ಅಂತಾನೂ ನೋಡ್ದೆ ಕಳ್ಳತನಕ್ಕೆ‌ ಇಳಿತಿದ್ರು. ಕಳ್ಳತನ ಮಾಡಿ ಕಾರು ಹತ್ತುತ್ತಿದ್ದೋರು ಒಂದ್ ಕಡೆ ನಿರ್ತಿರಲಿಲ್ಲ. ಸುಮಾರು ಅರವತ್ತು ಬಾರಿ ಕಳ್ಳತನ ಮಾಡಿದ್ದವರು ಕಳೆದ ಒಂದು ವಾರದ ಹಿಂದೆ ಹೊರಗ್ ಬಂದೋರು ಮತ್ತೆ ಮತ್ತೆ ಸೆರೆ ಮನೆಗೆ ಹೋಗಿದ್ದಾರೆ. 

hennuru police arrested two thief in bengaluru gvd
Author
First Published Jan 25, 2023, 8:01 PM IST

ವರದಿ: ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಜ.25): ಅವರು ಅಂತಿಂತಾ ಕಳ್ಳರಲ್ಲ. ಇಬ್ರೂ ಫಿಲ್ಡಿಗಿಳಿದ್ರು ಅಂದ್ರೆ ಜಡ್ಜ್ ಮನೆ ಅಂತಾನೂ ನೋಡ್ದೆ ಕಳ್ಳತನಕ್ಕೆ‌ ಇಳಿತಿದ್ರು. ಕಳ್ಳತನ ಮಾಡಿ ಕಾರು ಹತ್ತುತ್ತಿದ್ದೋರು ಒಂದ್ ಕಡೆ ನಿರ್ತಿರಲಿಲ್ಲ. ಸುಮಾರು ಅರವತ್ತು ಬಾರಿ ಕಳ್ಳತನ ಮಾಡಿದ್ದವರು ಕಳೆದ ಒಂದು ವಾರದ ಹಿಂದೆ ಹೊರಗ್ ಬಂದೋರು ಮತ್ತೆ ಮತ್ತೆ ಸೆರೆ ಮನೆಗೆ ಹೋಗಿದ್ದಾರೆ. ಇವ್ರಿಬ್ಬರೇ ನೋಡಿ ಆ ಕಳ್ಳ ಜೋಡಿ. ನೋಡೋಕೆ ನನ್ನಾ ಮುನ್ನಾ ಜೋಡಿ ತರ ಇರೋ ಇವ್ರಲ್ಲಿ ಒಬ್ಬನ ಹೆಸರು ಫೈಯಾಜ್ ಇಬ್ನೊಬ್ಬನ ಹೆಸರು ಪ್ರಸಾದ್. ಸೇಮ್ ಏಜ್. ಸೇಮ್ ಟೈಮಲ್ಲಿ ಕಳ್ಳತನಕ್ಕೆ ಇಳಿದಿದ್ದವರು ನಗರದಾದ್ಯಂತ ಮನೆಗಳ್ಳತನ ಮಾಡ್ತಿದ್ರು. 

ನಗರದ ಹಲವು ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದ ಈ ಇಬ್ಬರು ಕುಖ್ಯಾತ ಕಳ್ಳರನ್ನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಅಂತೋರು ಇಂತೋರ್ ಮನೆ ಅಂತಾ ನೋಡ್ದೆ ಕಸುಬಿಗೆ ಇಳಿತ್ತಿದ್ದೋರು ಕೋಲಾರದಲ್ಲಿ ಜಡ್ಜ್ ಮನೆ ಅಂತಾನೂ ನೋಡ್ದೆ ಕಳ್ಳತನಕ್ಕಿಳಿದಿದ್ರು. ಮನೆಗಳನ್ನ ಟಾರ್ಗೆಟ್ ಮಾಡ್ತಿದ್ದ ಆರೋಪಿಗಳು ಸೀದಾ ಕಮಾಯಿ ಮಾಡ್ಕೊಂಡು ಕಾರು ಹತ್ತುತ್ತಿದ್ರು. ಬೇರೆ ಬೇರೆ ರಾಜ್ಯ, ಊರುಗಳಿಗೆ ಹೋಗಿ ಕದ್ದ ಚಿನ್ನ ಅಡಮಾನ ಇಟ್ಟು ಮಜಾ ಉಡಾಯಿಸ್ತಿದ್ರು. ಕಳೆದ ಒಂದು ವಾರದ ಹಿಂದಷ್ಟೇ ಜೈಲಿಗೆ ಹೋಗಿದ್ದ ಇಬ್ರೂ ಮತ್ತೆ ಹೆಣ್ಣೂರು ಠಾಣೆ ಲಿಮಿಟ್ಸ್‌ನಲ್ಲಿ ಕೈಚಳಕ ತೋರಿಸಿದ್ರು. 

ಈಗ ಮತ್ತೆ ಅವ್ರಿಬ್ರನ್ನೂ ಪೊಲೀಸರು ಬಂಧಿಸಿದ್ದು ಅವರಿಂದ 660ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಇನ್ನು ಇದೇ ರೀತಿ ಮನೆಗಳ್ಳತನ ಮಾಡ್ತಿದ್ದಂತಹ ಮೂವರು ಕಳ್ಳರನ್ನ ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ. ಕರಣ್, ಶಂಕರ್, ಕಿರಣ್ ಎಂಬ ಮೂವರನ್ನ ಬಂಧಿಸಿದ್ದು ಅವರಿಂದ ನಾಲ್ಕು ಲಕ್ಷ ಮೌಲ್ಯದ 64gm ಚಿನ್ನ, 1.5kg ಬೆಳ್ಳಿ ಜಪ್ತಿ ಮಾಡಿದ್ದಾರೆ. ಬಂಧಿತರಲ್ಲಿ ಶಂಕರ್ ಡೆಲಿವರಿ ಬಾಯ್ ನೆಪದಲ್ಲಿ ಮನೆಗಳನ್ನ ಗುರುತು ಮಾಡ್ತಿದ್ದ ನಂತರ ಉಳಿದ ಕಿರಣ್ ಮತ್ತು ಕರಣ್ ಇಬ್ಬರೂ ಪ್ಲಾನ್ ಮಾಡಿಕೊಂಡು ನುಗ್ಗಿ ಚಿನ್ನಾಭರಣ, ಹಣ ದೋಚ್ತಿದ್ರು.

ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಿರುವಾಗಲೇ ಕುಸಿಯುತ್ತಿದ್ದ ತಡೆಗೋಡೆ ತೆರವು!

ಫ್ಯಾಮಿಲಿಯಿಂದನೇ ಕಳ್ಳತನದ ಹಿಸ್ಟರಿಯೊಂದಿರೋ ಈ ಮೂವರನ್ನ ಬಂಧಿಸಿರೋ ರಾಮಮೂರ್ತಿ ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ. ಇನ್ನು ಹೆಣ್ಣೂರು ಪೊಲೀಸರು ನಗರದಲ್ಲಿ ಬೈಕ್ ಕಳ್ಳತನ‌ ಮಾಡ್ತಿದ್ದ ಮತ್ತೋರ್ವ ಕುಖ್ಯಾತ ಕಳ್ಳತನನ್ನ ಬಂಧಿಸಿದ್ದು ಅವನಿಂದ ಆರು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಒಟ್ಟಾರೆಯಾಗಿ ಪೂರ್ವ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.

Follow Us:
Download App:
  • android
  • ios