Bengaluru: ಡ್ಯೂಟಿಯಲ್ಲಿದ್ದ ಕಂಡಕ್ಟರ್‌ಗೆ ಗುದ್ದಿದ ಬಿಎಂಟಿಸಿ ಬಸ್‌: ಗೋಡೆಗೆ ಅಪ್ಪಚ್ಚಿಯಾಗಿ ಸಾವು!

ಬೆಂಗಳೂರಿನ ಯಲಹಂಕ ನಾಲ್ಕನೇ ಹಂತದಲ್ಲಿ ಬಿಎಂಟಿಸಿ ಬಸ್‌ ಭೀಕರ ಅಪಘಾತವಾಗಿದ್ದು, ಬಸ್‌ನ ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Driver spot death after BMTC bus accident in Yalahanka sat

ಬೆಂಗಳೂರು (ಮೇ 09): ರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕ ನಾಲ್ಕನೇ ಹಂತದ ಬಸ್‌ ನಿಲ್ದಾಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್‌ ಕಟ್ಟಡಕ್ಕೆ ಗುದ್ದಿದೆ. ಇನ್ನು ಕಟ್ಟಡಕ್ಕೆ ಬಸ್‌ ವೇಗವಾಗಿ ಹೋಗಿ ಗುದ್ದಿದ್ದರಿಂದ ಬಸ್‌ ಮತ್ತು ಗೋಡೆಯ ಮಧ್ಯೆ ಸಿಲುಕಿ ಕಂಡಕ್ಟರ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಭೀಕರ ಅಪಘಾತ ಸಂಭವಿಸಿದೆ. ಯಲಹಂಕ ನಾಲ್ಕನೇ ಹಂತದ ಬಸ್ ಸ್ಟಾಪ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಬಿಎಂಟಿಸಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಬಸ್‌ನಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಬಸ್‌ ಗುದ್ದಿದ ರಭಸಕ್ಕೆ ಬಸ್‌ ನಿಲ್ದಾಣದ ಬಳಿ ಇದ್ದ ಕಟ್ಟಡದ ಗೋಡೆ ಬಿದ್ದಿದೆ. 

Bengaluru- ಸ್ಲಂಗಳಲ್ಲಿ ಸಿಕ್ತು 20 ಕೋಟಿ ಮೌಲ್ಯದ ಡ್ರಗ್ಸ್! ಚುನಾವಣೇಲಿ ಡ್ರಗ್ಸ್‌ ನಶೆಯಲ್ಲಿ ತೇಲಾಡಲು ಪ್ಲ್ಯಾನ್‌!

ತುಂಡು ತುಂಡಾದ ದೇಹ: ಬಿಎಂಟಿಸಿ ಬಸ್‌ನ ಚಾಲಕನ ಕಂಟ್ರೋಲ್ ತಪ್ಪಿದ ಬಸ್‌ ಸೀದಾ ಹೋಗಿ ಕಂಡಕ್ಟರ್ ಡಿಕ್ಕಿ ಹೊಡೆದಿದೆ. ಸೋಮಪ್ಪ ಮೃತ ಕಂಡಕ್ಟರ್ ಎಂದು ಗುರುತಿಸಲಾಗಿದೆ. ಯಲಹಂಕ ನಾಲ್ಕನೇ ಹಂತದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಸ್‌ ನಿಲ್ದಾಣದಲ್ಲಿ ಟಿಕೆಟ್‌ ಕಲೆಕ್ಟರ್‌ಗೆ ಬಸ್ ಟಿಕೇಟ್ ಹಣದ ಸಂಗ್ರಹಣೆ ಬಗ್ಗೆ ಲೆಕ್ಕನೀಡಿ ವಾಪಾಸ್ ಆಗುತ್ತಿದ್ದ ವೇಳೆ ಘಟನೆ ನಡೆದಿದೆ. ಇನ್ನು ಬಸ್‌ ಹತ್ತಲು ಹೋಗುವಾಗ ಚಾಲಕ ಕೂಡ ಬಸ್‌ ಚಾಲನೆಯಲ್ಲಿ ಇಟ್ಟುಕೊಂಡಿದ್ದನು. ಇನ್ನು ಕಂಡಕ್ಟರ್‌ ಬಸ್‌ ಬಳಿ ಬಂದಾಗ ಚಾಲನೆಯಲ್ಲಿದ್ದ ಬಸ್‌ ಕಂಡಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಆಗ ಬ್ರೇಕ್‌ ಹಾಕುವ ಬದಲು ಚಾಲಕ ಆಘಾತಕ್ಕೆ ಒಳಗಾಗಿ ಬಸ್‌ ನಿಯಂತ್ರಣ ಕಳೆದುಕೊಂಡಿದ್ದಾನೆ. ನಂತರ ಕಂಡಕ್ಟರ್‌ನನ್ನು ಕಟ್ಟಡದ ಗೋಡೆಗೆ ಅಪ್ಪಚ್ಚಿ ಆಗುವಂತೆ ಮಾಡಿದೆ. ಡಿಕ್ಕಿಯ ರಭಸಕ್ಕೆ ಕಂಡಕ್ಟರ್‌ನ ದೇಹದ ಅಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಯಲಹಂಕ ಪೊಲೀಸರಿಂದ ಸ್ಥಳ ಪರಿಶೀಲನೆ: ಈ ಘಟನೆ ಕುರಿತು ತಕ್ಷಣವೇ ಯಲಹಂಕ ಸಂಚಾರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನು ಸುತ್ತಲೂ ಬ್ಯಾರಿಕೇಡ್‌ ಹಾಕಿದ್ದು, ಸಾರ್ವಜನಿಕರು ಘಟನೆ ಸ್ಥಳಕ್ಕೆ ಬರದಂತೆ ತಡೆಗಟ್ಟಿದ್ದಾರೆ. ಪೊಲೀಸರು ಮೃತ ದೇಹದ ಭಾಗಗಳನ್ನು ಒಗ್ಗೂಡಿಸಿಕೊಂಡು ಆಸ್ಪತ್ರೆಗೆ ರವಾನಿಸಲು ಆಸ್ಪತ್ರೆ ಸಿಬ್ಬಂದಿಗೆ ನೆರವಾಗಿದ್ದಾರೆ. ಇನ್ನು ಕಂಡಕ್ಟರ್‌ ಸೋಮಪ್ಪ ಅವರ ಮನೆಯವರಿಗೆ ವಿಚಾರ ತಿಳಿಸಲಾಗಿದೆ. 

ನಿವೃತ್ತಿಗೆ ಒಂದು ತಿಂಗಳು ಮಾತ್ರ ಬಾಕಿ:  ತಾನು ದಿನಪೂರ್ತಿ ಕಾರ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ಬಸ್‌ ಅಪಘಾತದಲ್ಲಿಯೇ ಸಾವನ್ನಪ್ಪಿದ ಕಂಡಕ್ಟರ್ ಸೋಮಶೇಖರ್ (59) ಮುಂದಿನ ತಿಂಗಳು ನಿವೃತ್ತಿ ಹೊಂದುತ್ತಿದ್ದರು. ಆದರೆ, ತಾನು ಕರ್ತವ್ಯ ನಿರ್ವಹಿಸ್ತಿದ್ದ ಬಸ್ ಗೆ ಬಲಿಯಾಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಇನ್ನು ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್ ಚಾಲಕ ಮೌನೇಶ್ ತಳವಾರ್ ಪರಾರಿ ಆಗಿದ್ದಾರೆ. ಆರೋಪಿ ಚಾಲಕನಿಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಈ ಘಟನೆ ಕುರಿತಂತೆ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆರವಿನ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದವನ ಮರ್ಮಾಂಗ ಕತ್ತರಿಸಿದ ಮಹಿಳೆ!

ಎಲೆಕ್ಟ್ರಿಕ್‌ ಬಸ್‌ ಮೊದಲ ಭೀಕರ ಅಪಘಾತ: ಕಳೆದ ವರ್ಷವಷ್ಟೇ ಬಿಎಂಟಿಸಿಗೆ 90ಕ್ಕೂ ಎಲೆಕ್ಟ್ರಿಕ್‌ ಬಸ್‌ಗಳು ಆಗಮಿಸಿದ್ದವು. ನಗರದಲ್ಲಿ ಮಾಲಿನ್ಯರಹಿತ ವಾಹನ ಸಂಚಾರಕ್ಕೆ ಈ ಬಸ್‌ಗಳು ಕೂಡ ಅನುಕೂಲ ಆಗಿದ್ದವು. ಆದರೆ, ಬಿಎಂಟಿಸಿ ಡಿಪೋ- 30 ಯಲಹಂಕಕ್ಕೆ ಸೇರಿದ ಎಲೆಕ್ಟ್ರಿಕ್ ಬಸ್‌ ಈಗ ಭೀಕರ ಅಪಘಾತಕ್ಕೆ ಒಳಗಾಗಿದೆ. ಎಲೆಕ್ಟ್ರಿಕ್ ಬಸ್ ಸಂಖ್ಯೆ- ಕೆಎ- 51 AH 2558 ಆಗಿದ್ದು, ಕಂಡಕ್ಟರ್‌ ಸಾವನನ್ನಪ್ಪಿದ್ದಾನೆ. ಇನ್ನು ಘಟನೆ ತಿಳಿದ ಕಂಡಕ್ಟರ್‌ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 

Latest Videos
Follow Us:
Download App:
  • android
  • ios