Bengaluru- ಸ್ಲಂಗಳಲ್ಲಿ ಸಿಕ್ತು 20 ಕೋಟಿ ಮೌಲ್ಯದ ಡ್ರಗ್ಸ್! ಚುನಾವಣೇಲಿ ಡ್ರಗ್ಸ್‌ ನಶೆಯಲ್ಲಿ ತೇಲಾಡಲು ಪ್ಲ್ಯಾನ್‌!

ಚುನಾವಣೆ ವೇಳೆ ಮದ್ಯ ನಿಷೇಧದ ಅವಧಿಯಲ್ಲಿ ನಶೆ ಏರಿಸಿಕೊಳ್ಳಲು ಸಂಗ್ರಹಿಸಿದ್ದ 20 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

Planning to consume drugs during elections Drugs seized worth 20 crore in slums sat

ಬೆಂಗಳೂರು (ಮೇ 09): ರಾಜ್ಯದಲ್ಲಿ 16ನೇ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ, ಈ ವೇಳೆ ಸತತವಾಗಿ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಶೆಯಲ್ಲಿ ತೇಲಾಡಬೇಕು ಎಂದು ಸಂಗ್ರಹಣೆ ಮಾಡಿ ಸರಬರಾಜು ಮಾಡಲು ಮುಂದಾಗಿದ್ದ 20 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಮತದಾನದ ದಿನಗಳಲ್ಲಿ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿರುತ್ತದೆ. ಈ ವೇಳೆ ನಶೆಯಲ್ಲಿ ತೇಲುವಂತೆ ಮಾಡುವ ಡ್ರಗ್ಸ್‌ಗೆ ಭಾರಿ ಬೇಡಿಕೆ ಬರಲಿದೆ ಎಂದು ಆಲೋಚನೆ ಮಾಡಿದ್ದ ಡ್ರಗ್ಸ್‌ ಪೆಡ್ಲರ್‌ಗಳು ಮೂಟೆಗಟ್ಟಲೆ ಗಾಂಜಾ, ಕೊಕೇನ್, ಎಲ್ ಎಸ್ ಡಿ, ಎಂಡಿಎಂಎ, ಆಶಿಸ್ ಆಯಿಲ್ ಸಂಗ್ರಹಣೆ ಮಾಡಿಕೊಂಡಿದ್ದರು. ಬರೋಬ್ಬರಿ 20 ಕೋಟಿ ಮೌಲ್ಯದ ಡ್ರಗ್ಸ್‌ ಸಂಗ್ರಹಿಸಿ ಹಂಚಲು ಮುಂದಾಗಿದ್ದ 19 ಡ್ರಗ್ಸ್‌ ಪೆಡ್ಲರ್‌ಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಅವರಿಂದ ಇಪ್ಪತ್ತು ಕೋಟಿ ರೂ. ಮೌಲ್ಯದ ನಶೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮತದಾನಕ್ಕೆ ಕ್ಷಣಗಣನೆ: ಭದ್ರತೆಗೆ 1,56,000 ಪೋಲಿಸರ ನಿಯೋಜನೆ..!

ನೀತಿ ಸಂಹಿತೆ ವೇಳೆಯೇ ಅತ್ಯಧಿಕ ಡ್ರಗ್ಸ್‌ ಸಾಗಣೆ: ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಎಲ್ಲ ಪೊಲೀಸರು ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಈ ವೇಳೆ ಪೊಲೀಸರು ಚೆಕ್‌ಪೋಸ್ಟ್‌ ನಿರ್ಮಿಸಿಕೊಂಡು ಹಣ ಪತ್ತೆ, ಮದ್ಯ ಸಾಗಣೆ ಮತ್ತು ಇತರೆ ವಸ್ತುಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿರುತ್ತಾರೆ. ಆದರೆ, ಡ್ರಗ್ಸ್‌ ಮಾರಾಟದ ಮೇಲೆ ಪೊಲೀಸರು ಹೆಚ್ಚಿನ ನಿಗಾವಹಿಸುವುದಿಲ್ಲ ಎಂದು ಎಗ್ಗಿಲ್ಲದೇ ಡ್ರಗ್ಸ್‌ ಸಾಗಣೆ ಮತ್ತು ಸರಬರಾಜು ಮಾಡಲು ಮುಂದಾಗಿದ್ದಾರೆ. ಹೀಗಾಗಿ, ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಅವಧಿಯಲ್ಲಿಯೇ ಅತ್ಯಂತ ಹೆಚ್ಚು ಡ್ರಗ್ಸ್‌ ಪೆಡ್ಲರ್‌ ಕಾರ್ಯಾಚರಣೆ ಮಾಡಿರುವುದು ಕಂಡುಬಂದಿದೆ. 

ಕೇಂದ್ರ ಚುನಾವಣಾ ಆಯೋಗದಿಂದ ಖಡಕ್‌ ಸೂಚನೆ: ಚುನಾವಣೆ ಟೈಮಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದ ಡ್ರಗ್ ಪೆಡ್ಲರ್ಸ್‌ಗಳ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಅಧಿಕಾರಿಗಳು ಡ್ರಗ್ಸ್‌ ಮಾಫಿಯಾ ಮೇಲೆ ಕಣ್ಣಿಟ್ಟಿದ್ದರು. ನೀತಿ ಸಂಹಿತೆ ಜಾರಿಯಾದ್ಮೇಲೆ ಬರೋಬ್ಬರು 20 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದಾರೆ. ಕೇಂದ್ರ ಚುನಾವಣಾ ಆಯೋಗದಿಂದಲೂ ಡ್ರಗ್ಸ್ ಫೆಡ್ಲರ್ ಗಳ ಮೇಲೆ ತೀವ್ರ ನಿಗಾ ಇಡುವಂತೆ ಸೂಚನೆ ನೀಡಲಾಗಿತ್ತು. ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ವಿಶೇಷ ತಂಡ ರಚನೆ ಮಾಡಿದ್ದ ಸಿಸಿಬಿ, ಹಲವು ವಿಧದದ ಡ್ರಗ್ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಕೊಕೇನ್, ಎಲ್ ಎಸ್ ಡಿ, ಎಂಡಿಎಂಎ, ಆಶಿಸ್ ಆಯಿಲ್ ಜೊತೆಗೆ ಗಾಂಜಾ ಕೂಡ ಜಪ್ತಿ ಮಾಡಿದ್ದಾರೆ.

ಕೊಳೆಗೇರಿಗಳಲ್ಲಿ ಡ್ರಗ್ಸ್‌ ಬಳಕೆ: ಇನ್ನು ಬೆಂಗಳೂರಿನ ಕೊಳೆಗೇರಿಗಳಲ್ಲಿ (ಸ್ಲಂಗಳು) ಹೆಚ್ಚಾಗಿ  ಡ್ರಗ್ಸ್‌ ಬಳಕೆ ಆಗುತ್ತಿರುವುದು ಕಂಡುಬಂದಿದೆ. ಸ್ಲಂಗಳಲ್ಲಿ ಡ್ರಗ್ಸ್ ಬಳಕೆ ಅಗುವ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ವಿಶೇಷ ತಂಡವು, ನಗರದ ವಿವಿಧ ಕೊಳೆಗೇರಿಗಳನ್ನು ಗುರಿಯಾಗಿಸಿಕೊಂಡು 10 ಕಡೆ ಕಾರ್ಯಾಚರಣೆ ಮಾಡಲಾಗಿತ್ತು. ಆಶೋಕನಗರ, ಕೆ.ಆರ್. ಪುರ. ಆರ್.ಟಿ.ನಗರ, ವಿಲ್ಸನ್ ಗಾರ್ಡನ್, ಬಾಣಸವಾಡಿ, ಹೆಣ್ಣೂರು, ಯಲಹಂಕ, ಪುಲಕೇಶಿಯ ನಗರದ ಸಿದ್ದಾಪುರ ಕೊಳೆಗೇರಿ ಪ್ರದೇಶಗಳಲ್ಲಿ ಕಾರ್ಯಾರಣೆ ಮಾಡಿ ಡ್ರಗ್ಸ್‌ ಸೀಜ್‌ ಮಾಡಲಾಗಿದೆ. 

Karnataka Assembly Election 2023 Live Updates: ಮನೆ ಮನೆ ಪ್ರಚಾರದಲ್ಲಿ ಅಭ್ಯರ್ಥಿಗಳು ಬ್ಯುಸಿ

19 ಡ್ರಗ್ಸ್‌ ಪೆಡ್ಲರ್‌ಗಳ ವಶ: ಇನ್ನು ನಗರದಲ್ಲಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಜಪ್ತಿ ಮಾಡಿರುವ ಡ್ರಗ್ಸ್‌ ವಸ್ತುಗಳು ಮತ್ತು ಪ್ರಕರಣದ ವಿವರಗಳನ್ನು ಕೇಂದ್ರ ಚುನಾವಣೆ ಆಯೋಗಕ್ಕೆ ನೀಡಲಾಗಿದೆ. ಒಟ್ಟು 19 ಫೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಜೊತೆಗೆ ಪೆಡ್ಲರ್ಸ್  ಮೊಬೈಲ್ ಗಳ ಮೂಲಕ ಹೆಚ್ಚಿನ ಡೀಟೆಲ್ಸ್ ಕಲೆ ಹಾಕುತ್ತಿದ್ದಾರೆ. ಇನ್ನು ಮತದಾನದ ವೇಳೆ ಮದ್ಯ ಸೇವನೆ ಮಾಡದಿದ್ದರೂ, ನಶೆಯಲ್ಲಿ ತೇಲಾಡುವವರು ಕಂಡುಬಂದರೆ ನೀವು ಕೂಡ ಪೊಲೀಸರಿಗೆ ಮಾಹಿತಿ ನೀಡಿ ಡ್ರಗ್ಸ್‌ ಮಾಫಿಯಾ ಜಾಲ ನಿರ್ಮೂಲನೆಗೆ ಸಹಕಾರ ನೀಡಬಹುದು.

Latest Videos
Follow Us:
Download App:
  • android
  • ios