ನೆರವಿನ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದವನ ಮರ್ಮಾಂಗ ಕತ್ತರಿಸಿದ ಮಹಿಳೆ!
ಮಕ್ಕಳಾಗದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ನೆರವು ನೀಡುವ ನೆಪದಲ್ಲಿ ಲೈಂಗಕ ದೌರ್ಜನ್ಯ ಎಸಗುತ್ತಿದ್ದ ಮೌಲ್ವಿಯೊಬ್ಬನಿಗೆ ಮಹಿಳೆ ತಕ್ಕ ಶಾಸ್ತಿ ಮಾಡಿದ ಘಟನೆ ನಡೆದಿದೆ. ಇದೀಗ ಮೌಲ್ವಿ ಸಾವಿ ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಅಸ್ಸಾಂ(ಮೇ.09): ನೆರವು, ಸಹಾಯದ ನೆಪದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಮಾಣ ಹೆಚ್ಚಾಗಿದೆ. ಹಲವು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಆದರೆ ಈ ರೀತಿ ನೆರವಿನ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಮೌಲ್ವಿಯೊಬ್ಬನಿಗೆ ಮಹಿಳೆ ತಕ್ಕ ಶಾಸ್ತಿ ಮಾಡಿದ್ದಾಳೆ. ಮಕ್ಕಳಿಲ್ಲದ ಮಹಿಳೆಯೊಬ್ಬರ ಮನೆಗೆ ಬಂದ ಮೌಲ್ವಿ ಒಸ್ಲಾನ್ ಆಲಿ, ಧಾರ್ಮಿಕತೆ ಒಳಗೊಂಡ ನಾಟಿ ಮದ್ದಿನ ಮೂಲಕ ಮಕ್ಕಳು ಪಡೆಯಲು ಸಾಧ್ಯ ಎಂದು ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗಿದ್ದಾನೆ. ಇದನ್ನು ಅರಿತ ಮಹಿಳೆ ತಕ್ಷಣವೇ ಹರಿತವಾದ ಕತ್ತಿಯಲ್ಲಿ ಮೌಲ್ವಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ನಡೆದಿದೆ.
ದರಂಗ್ ಜಿಲ್ಲೆಯ ದುಲಾ ಗ್ರಾಮದ ಮೌಲ್ವಿ ಒಸ್ಮಾನ್ ಆಲಿ ಒಂದೊಂದು ಗ್ರಾಮಕ್ಕೆ ತೆರಳಿ ಮಕ್ಕಳಾಗದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ನಾಟಿ ಮದ್ದಿನ ಮೂಲಕ ಹಲವರು ಮಕ್ಕಳನ್ನು ಪಡೆದುಕೊಂಡಿದ್ದಾರೆ ಎಂದು ಈತ ಪುಂಗಿ ಊದಿದ್ದ. ಹಳ್ಳಿಯ ಮುಗ್ದ ಜನರು ಇದನ್ನು ನಂಬಿದ್ದರು. ಆದರೆ ಈತನ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಹೀಗೆ ಮೊರಿಗಾಂವ್ ಜಿಲ್ಲೆಯ ಹಳ್ಳಿಗೆ ಭೇಟಿ ನೀಡಿದ ಒಸ್ಮಾನ್ ಆಲಿ, ಮಕ್ಕಳಿಲ್ಲದ ಮಹಿಳೆ ಮನೆಗೆ ಭೇಟಿ ನೀಡಿದ್ದ. ಬಳಿಕ ಆಕೆಯ ಜೊತೆ ಸಮಾಲೋಚನೆ ನಡೆಸುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ.
ಹಾಲು ಮಾರುವ ವ್ಯಕ್ತಿಯಿಂದ 7 ವರ್ಷದ ಬಾಲಕಿಯ ಮೇಲೆ ರೇಪ್!
ಮೌಲ್ವಿ ಒಸ್ಮಾನ್ ಆಲಿ ಒಂದೊಂದೆ ಪಟ್ಟುಗಳನ್ನು ಬಿಗಿಗೊಳಿಸುತ್ತಿದ್ದಂತೆ ಮಹಿಳೆಗೆ ತಾನು ಮೋಸ ಹೋಗುತ್ತಿರುವ ಅರಿವಾಗಿದೆ. ಪ್ರತಿರೋಧಿಸಿದ ಮಹಿಳೆಗೆ ಬೆದರಿಕೆ ಹಾಕುವ ಪ್ರಯತ್ನ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಮಹಿಳೆ ಹರಿತವಾದ ಕತ್ತಿಯಿಂದ ಮೌಲ್ವಿ ಮರ್ಮಾಂಗದತ್ತ ಬೀಸಿದ್ದಾಳೆ. ಈಕೆ ಬೀಸಿದ ರಭಸಕ್ಕೆ ಮೌಲ್ವಿಯ ಮರ್ಮಾಂಗೇ ತುಂಡಗಾಗಿದೆ.
ಹೊರಗಡೆ ಬಂದು ಸಹಾಯಕ್ಕಾಕಿ ಕೂಗಿದ್ದಾಳೆ. ಸ್ಥಳೀಯರು ಆಗಮಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೌಲ್ವಿಯನ್ನು ಮೊರಿಗಾಂವ್ ಜಿಲ್ಲೆಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮೌಲ್ವಿ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಗೌವ್ಹಾಟಿಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಮೌಲ್ವಿ ಪರಿಸ್ಥಿತಿ ಗಂಭೀರವಾಗಿದೆ.
8 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್, ರಕ್ಷಣೆಗೆ ಬಂದ ತಾಯಿಯನ್ನು ವಿವಸ್ತ್ರಗೊಳಿಸಿದ ಕಾಮುಕರು!
ಮೌಲ್ವಿಯ ಅಸಲಿ ಕತೆಯನ್ನು ಮಹಿಳೆ ಬಹಿರಂಗಪಡಿಸಿದ್ದಾಳೆ. ಇದೀಗ ಮೌಲ್ವಿ ಜೊತೆಗೆ ಬರುತ್ತಿದ್ದವರ ಹುಡುಕಾಟ ಶುರುವಾಗಿದೆ. ಒಸ್ಮಾನ್ ಒಲಿ ಇದೇ ರೀತಿ ಹಲವು ಮಹಿಳೆಯರನ್ನು ಮೋಸ ಮಾಡಿರುವುದು ಇದೀಗ ಬಹಿರಂಗವಾಗಿದೆ. ಮೌಲ್ವಿ ವಿರುದ್ಧ ಇದೀಗ ಮಹಿಳೆಯರು ಧೈರ್ಯ ಮಾಡಿ ದೂರು ದಾಖಲಿಸಿದ್ದಾರೆ.