Asianet Suvarna News Asianet Suvarna News

ಗಂಡ ಅತ್ತೆ ಮಾವನಿಂದ ವರದಕ್ಷಿಣೆ ಕಿರುಕುಳ; ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ!

ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊಸಕೋಟೆಯಲ್ಲಿ ನಡೆದಿದೆ.

Dowry harassment by husband wife commits suicide by consuming poison at hoskote mysuru rav
Author
First Published Jan 26, 2024, 2:03 PM IST

ನಂಜನಗೂಡು: (ಜ.26): ಗಂಡನ ಮನೆಯವರಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊಸಕೋಟೆಯಲ್ಲಿ ನಡೆದಿದೆ.

ವಿಜಯಲಕ್ಷ್ಮಿ(35) ಆತ್ಮಹತ್ಯೆ ಶರಣಾದ ಗೃಹಿಣಿ. ಹೊಸಕೋಟೆಯ ಹರೀಶ್, ಅತ್ತೆ ಮಲ್ಲಿಗಮ್ಮ, ಮಾವ ಮಹದೇವಮೂರ್ತಿ, ಮೈದುನರಾದ ರಾಘವೇಂದ್ರ, ಮಹೇಂದ್ರ ಕಿರುಕುಳ ನೀಡಿದ್ದ ಆರೋಪಿಗಳು.

ಮೈಸೂರು ತಾಲೂಕಿನ ಬೊಮ್ಮೇನಹಳ್ಳಿಯವರಾದ ವಿಜಯಲಕ್ಷ್ಮಿ, 12 ವರ್ಷಗಳ ಹಿಂದೆ ಹೊಸಕೋಟೆ ಹರೀಶ್‌ನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಚಿನ್ನಾಭರಣ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದ ಪೋಷಕರು. ಮದುವೆಯಾದ ಕೆಲವು ದಿನಗಳು ಸುಖವಾಗಿದ್ದರು. ಸುಖ ದಾಂಪತ್ಯಕ್ಕೆ ಇಬ್ಬರು ಮಕ್ಕಳನ್ನು ಪಡೆದಿದ್ದ ವಿಜಯಲಕ್ಷ್ಮಿ. ಆದರೆ ವರದಕ್ಷಿಣೆ ಆಸೆಗೆ ಬಿದ್ದ ಅತ್ತೆ ಮಾವ ಮೈದುನರು ಗಂಡನ ತಲೆ ಕೆಡಿಸಿ ಸಂಸಾರಕ್ಕೆ ಹುಳಿ ಹಿಂಡಿಬಿಟ್ಟರು.  ಅಲ್ಲಿಂದೀಚೆಗೆ ವಿಜಯಲಕ್ಷ್ಮೀಗೆ ನಿತ್ಯ ಕಿರುಕುಳ ನೀಡಲಾರಂಭಿಸಿದ ಹರೀಶ್ ಕುಟುಂಬ. ವರದಕ್ಷಿಣೆ ವಿಚಾರವಾಗಿ ಪತ್ನಿಯೊಂದಿಗೆ ಆಗಾಗ ಗಂಡನೂ ಗಲಾಟೆ ಮಾಡಿ ಮಾಡಿ ಹಲ್ಲೆ ನಡೆಸಿದ್ದು ಇದೆ. ಗಲಾಟೆ ವಿಚಾರವಾಗಿ ಈ ಹಿಂದೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಹಲವು ಬಾರಿ ದೂರು ನೀಡಿದ್ದ ವಿಜಯಲಕ್ಷ್ಮಿ. ಆದರೂ ಕಿರುಕುಳ ಮುಂದುವರಿಸಿದ್ದ ತುಸು ಹೆಚ್ಚೇ ಗಲಾಟೆ ಮಾಡುತ್ತಿದ್ದರು.

 

ಅಂಬೇಡ್ಕರ್ ಭಾವಚಿತ್ರದ ಪೂಜೆಗೆ ಒಲ್ಲೆ ಎಂದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ

ತವರು ಮನೆಯಿಂದ ಹಣ ತರುವಂತೆ ಅತ್ತೆ, ಮಾವ, ಮೈದುನರಿಂದಲೂ ದಿನನಿತ್ಯ ಕಿರುಕುಳ. ಇವರೊಂದಿಗೆ ಗಂಡನೂ ಸೇರಿ ಜಗಳ ಮಾಡಿದ್ದರಿಂದ ತನ್ನವರು ಯಾರೂ ಇಲ್ಲದಂತಾಗಿ ದುಃಖಿತಗೊಂಡಿದ್ದ ವಿಜಯಲಕ್ಷ್ಮೀ. ಹೀಗಾಗಿ ಇಬ್ಬರು ಮಕ್ಕಳನ್ನು ಬಿಟ್ಟು ಗಂಡನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಆರೋಪಿಗಳು ಪರಾರಿ:

ವರದಕ್ಷಿಣೆ ತರವಂತೆ ದಿನನಿತ್ಯ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದ ಗಂಡ ಹರೀಶ್, ಮಾವ, ಅತ್ತೆ, ಮೈದುನರು ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಪರಾರಿಯಾಗಿದ್ದಾರೆ. ಸದ್ಯ ಘಟನೆ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಮುಂದಾಗಿರುವ ಪೊಲೀಸರು.

ಅಕ್ಕ ಅಕ್ಕ ಅಂದುಕೊಂಡೇ ಅವಳ ಹೆಣ ಹಾಕಿಬಿಟ್ಟಿದ್ದ..! ಅವಳ ಹೆಣ ಸಿಗ್ತಿದ್ದಂತೆ ಅವನೂ ಎಸ್ಕೇಪ್ ..!

Follow Us:
Download App:
  • android
  • ios