Crime News| ಆಟೋ ಚಾಲಕನ ವಿವಸ್ತ್ರಗೊಳಸಿ, ಮೂತ್ರ ವಿಸರ್ಜಿಸಿ ವೈದ್ಯರ ವಿಕೃತಿ

*  ಕ್ಷುಲ್ಲಕ ಕಾರಣಕ್ಕೆ ಪರಿಚಿತ ಚಾಲಕನ ಮೇಲೆ ಹಲ್ಲೆ
*  ಚಾಲಕನ ಜತೆಯಲ್ಲಿ ಪಾರ್ಟಿ ಮಾಡಿದ್ದ, ವೈದ್ಯ ಮತ್ತು ಸ್ನೇಹಿತರು
*  ಆಸ್ಪತ್ರೆಯಲ್ಲಿ ಕೆಟ್ಟದಾಗಿ ವರ್ತಿಸಿದ ಎಂದು ಚಾಲಕನ ಮೇಲೆ ಹಲ್ಲೆ
 

Doctors Misbehave With Auto Driver in Bengaluru grg

ಬೆಂಗಳೂರು(ನ.13):  ಕ್ಷುಲ್ಲಕ ಕಾರಣಕ್ಕೆ ಪರಿಚಿತ ಆಟೋ ಚಾಲಕನನ್ನು(Auto Driver) ಶೌಚಾಲಯಕ್ಕೆ ಎಳೆದೊಯ್ದು ವಿವಸ್ತ್ರಗೊಳಿಸಿ, ಬಳಿಕ ಆತನ ಮೇಲೆ ಮೂತ್ರ ವಿಸರ್ಜಿಸಿ ಹಲ್ಲೆ ಮಾಡಿದ ಆರೋಪದಡಿ ಖಾಸಗಿ ಆಸ್ಪತ್ರೆಯ ವೈದ್ಯ ಸೇರಿ ಇಬ್ಬರನ್ನು ಬಾಗಲೂರು ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಬಾಗಲೂರಿನ ಖಾಸಗಿ ಆಸ್ಪತ್ರೆ ವೈದ್ಯ ರಾಕೇಶ್‌ ಶೆಟ್ಟಿ(45) ಮತ್ತು ಭರತ್‌(30) ಬಂಧಿತರು(Arrest). ಯಲಹಂಕದ ಆಟೋ ಚಾಲಕ ಮುರಳಿ (26) ಹಲ್ಲೆಗೊಳಗಾದವರು. ಈತ ನೀಡಿದ ದೂರಿನ(Complaint) ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಹಲ್ಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಇತರೆ ನಾಲ್ವರು ಆರೋಪಿಗಳು(Accused) ತೆಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವಳು ಹೆಂಡ್ತೀನಾ ರಾಕ್ಷಸಿನಾ?: ಮೂಳೆ ಮುರಿಯೋ ಹಾಗೆ ಗಂಡನಿಗೆ ಹೊಡೆದ ಪತ್ನಿ..!

ಆರೋಪಿ ವೈದ್ಯ ರಾಕೇಶ್‌ ಶೆಟ್ಟಿ ಹಾಗೂ ಆಟೋ ಚಾಲಕ ಮುರಳಿ ಪರಿಚಿತರು. ದೀಪಾವಳಿ(Deepavali) ಪ್ರಯುಕ್ತ ನ.4ರಂದು ವೈದ್ಯ ರಾಕೇಶ್‌ ಶೆಟ್ಟಿ ಹಾಗೂ ಸ್ನೇಹಿತರು ಕಂಟ್ರಿ ಕ್ಲಬ್‌ನಲ್ಲಿ(Coutry Club) ಪಾರ್ಟಿ ಮಾಡಿದ್ದರು. ಆಟೋ ಚಾಲಕ ಮುರಳಿ ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದ. ಈ ವೇಳೆ ಬಿರಿಯಾನಿ(Biryani) ಪಾರ್ಸೆಲ್‌ ತರಲು ಮುರಳಿಯನ್ನು ಕಳುಹಿಸಲಾಗಿದೆ. ಲ್ಯಾಬ್‌ ಟೆಕ್ನಿಶಿಯನ್‌ ಮಹೇಶ್‌ ಹಾಗೂ ಮುರಳಿ ಬಿರಿಯಾನಿ ಪಾರ್ಸೆಲ್‌ ತಂದಿದ್ದಾರೆ. ಬಳಿಕ ಮುರಳಿ ಮನೆಗೆ ಹೋಗಲು ಮುಂದಾದಾಗ ಆಸ್ಪತ್ರೆಯಲ್ಲಿರುವ ಡಾ.ಸ್ವಾಮಿಯನ್ನು ಕರೆತರುವಂತೆ ಸೂಚಿಸಲಾಗಿದೆ. ಅದರಂತೆ ಮುರಳಿ ಆಸ್ಪತ್ರೆಗೆ ತೆರಳಿ ಸ್ವಾಮಿಯನ್ನು ಕರೆತಂದಿದ್ದಾನೆ.

ಕೆಲ ಸಮಯದ ಬಳಿಕ ಆಸ್ಪತ್ರೆಯಲ್ಲಿ ರೋಗಿಗಳ ಎದುರು ಮುರಳಿ ಕೆಟ್ಟದಾಗಿ ನಡೆದುಕೊಂಡ ಎಂದು ಡಾ.ಸ್ವಾಮಿ ಆರೋಪಿಸಿದ್ದಾರೆ. ಇದರಿಂದ ಕೆರಳಿದ ಡಾ.ರಾಕೇಶ್‌ ಶೆಟ್ಟಿಹಾಗೂ ಇತರರು ಮುರಳಿ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಶೌಚಾಲಯಕ್ಕೆ(Toilet) ಎಳೆದೊಯ್ದು ವಿವಸ್ತ್ರಗೊಳಿಸಿ ಆತನ ಮೇಲೆ ಮೂತ್ರ ವಿಸರ್ಜಿಸಿ ಪರಾರಿಯಾಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಬಾಗಲೂರು ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಬಲೆ ಬೀಸಿದ್ದಾರೆ.

ಪ್ರೀತ್ಸೆ..ಪ್ರೀತ್ಸೆ.. ಅಂತ ಸ್ಯಾಂಡಲ್‌ವುಡ್ ನಟಿ ಹಿಂದೆ ಬಿದ್ದ ಟೆಕ್ಕಿ ಅರೆಸ್ಟ್

ಸವತಿ ಮಕ್ಕಳಿಂದ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಯತ್ನ: ದೂರು

ಫೋರ್ಜರಿ ದಾಖಲೆ(Forgery Record) ಸೃಷ್ಟಿಸಿ ಆಸ್ತಿ ಕಬಳಿಸಲು ಯತ್ನ ಹಾಗೂ ಜೀವ ಬೇದರಿಕೆ(Life Threatening) ಆರೋಪದಡಿ ಸಿ.ಸುರೇಶ್‌ ಕುಮಾರ್‌ ಎಂಬಾತನ ವಿರುದ್ಧ ಶ್ರೀರಾಮಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌(FIR) ದಾಖಲಾಗಿದೆ.

ರಾಜಾಜಿನಗರ 1ನೇ ಬ್ಲಾಕ್‌ನ ನಿವಾಸಿ ಕೆ.ಬಿ.ಭೋಜಮ್ಮ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಸಿ.ಸುರೇಶ್‌ಕುಮಾರ್‌ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ನನ್ನ ಪತಿ ಚೆನ್ನಪ್ಪ ಅವರಿಗೆ ಇಬ್ಬರು ಪತ್ನಿಯರು. ಮೊದಲ ಹೆಂಡತಿ ಲಕ್ಷ್ಮಮ್ಮ 1983ರಲ್ಲಿ ಮೃತಪಟ್ಟಿದ್ದಾರೆ. ಇವರಿಗೆ ಸಿ.ಸುರೇಶ್‌ಕುಮಾರ್‌, ಸಿ.ಹರೀಶ್‌ಕುಮಾರ್‌ ಹಾಗೂ ಸಿ.ಮಹೇಶ್‌ ಕುಮಾರ್‌ ಎಂಬ ಮೂವರು ಮಕ್ಕಳಿದ್ದಾರೆ. ಎರಡನೇ ಹೆಂಡತಿಯಾದ ನನಗೆ ಸಿ.ರಾಜೇಶ್‌ ಕುಮಾರ್‌ ಎಂಬ ಪುತ್ರನಿದ್ದಾನೆ. ಸೊಸೆ ಕಾವ್ಯ ಹಾಗೂ ಮೊಮ್ಮಗಳು ಸಮೀಕ್ಷಾ ಒಟ್ಟಿಗೆ ವಾಸವಾಗಿದ್ದೇವೆ. ನನ್ನ ಪತಿ ಚೆನ್ನಪ್ಪ ಅವರು ಜೀವಿತಾವಧಿಯಲ್ಲಿ ನಗರದಲ್ಲಿ ಕೆಲ ಆಸ್ತಿಗಳನ್ನು ಸಂಪಾದಿಸಿದ್ದರು. ಅದರಲ್ಲಿ ಲಕ್ಷ್ಮೇ ಫೈನಾನ್ಸ್‌ ಎಂಬ ಸಂಸ್ಥೆಯನ್ನು ಸಾಯುವವರೆಗೂ ಅವರೇ ನಡೆಸುತ್ತಿದ್ದರು. ತಾವು ಬದುಕಿದ್ದಾಗಲೇ ಯಾವ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ವಿಲ್‌ ಮಾಡಿದ್ದರು. 2019ರಲ್ಲಿ ಪತಿ ಮೃತಪಟ್ಟಿದ್ದರು. ವಿಲ್‌ ಆಧಾರದ ಮೇಲೆ ಈ ಫೈನಾನ್ಸ್‌ ಲೈಸೆನ್ಸ್‌ ನಮ್ಮ ಹೆಸರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಸುರೇಶ್‌ ಕುಮಾರ್‌ ಅವರು ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯಕ್ಕೆ(Court) ದಾವೆ ಹೂಡಿದ್ದರು. ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿತ್ತು.

ಇದೀಗ ಸುರೇಶ್‌ ನಕಲಿ ವಿಲ್‌ ಸೃಷ್ಟಿಸಿ ಲಕ್ಷ್ಮೇ ಫೈನಾನ್ಸ್‌ನಲ್ಲಿರುವ ಲಕ್ಷಾಂತರ ರು. ಹಣವನ್ನು ಲಪಟಾಯಿಸಲು ಮುಂದಾಗಿದ್ದಾರೆ. ಅಂತೆಯೇ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸುರೇಶ್‌ ಕುಮಾರ್‌ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡು, ತಮ್ಮ ಮನೆ ಹಾಗೂ ಆಸ್ತಿಗಳಿಗೆ ರಕ್ಷಣೆ ನೀಡುವಂತೆ ಭೋಜಮ್ಮ ದೂರಿನಲ್ಲಿ ಕೋರಿದ್ದಾರೆ.
 

Latest Videos
Follow Us:
Download App:
  • android
  • ios