Asianet Suvarna News Asianet Suvarna News

ಇವಳು ಹೆಂಡ್ತೀನಾ ರಾಕ್ಷಸಿನಾ?: ಮೂಳೆ ಮುರಿಯೋ ಹಾಗೆ ಗಂಡನಿಗೆ ಹೊಡೆದ ಪತ್ನಿ..!

*  ಬೆಂಗಳೂರಿನಲ್ಲಿ ನಡೆದ ಘಟನೆ
*  ಪತ್ನಿಯಿಂದ ಏಟು‌ ತಿಂದು ಆಸ್ಪತ್ರೆ ಸೇರಿದ ಪತಿರಾಯ
*  ನಾಪತ್ತೆಯಾದ ಹೆಂಡತಿ ಹಾಗೂ ಮಗಳಿಗಾಗಿ ಜಾಲಬೀಸಿದ ಪೊಲೀಸರು
 

Wife Assault on Husband in Bengaluru grg
Author
Bengaluru, First Published Oct 29, 2021, 11:22 AM IST
  • Facebook
  • Twitter
  • Whatsapp

ಬೆಂಗಳೂರು(ಅ.29):  ಗಂಡ ಅಂತಾನೂ‌ ನೋಡದೆ ಮೂಳೆ ಮುರಿಯೋ ಹಾಗೆ ಹೊಡೆದಿದ್ದರಿಂದ(Assault) ವ್ಯಕ್ತಿಯೊಬ್ಬ ಆಸ್ಪತ್ರೆಗೆ(Hospital) ದಾಖಲಾದ ಘಟನೆ ನಗರದಲ್ಲಿ(Bengaluru) ನಡೆದಿದೆ. ಅ.9 ರಂದು ಘಟನೆ ನಡೆದಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ನಗರದ ಮಲ್ಯ ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ(Treatment) ಪಡೆಯುತ್ತಿರುವ ಗಾಯಾಳು ಚಂದ್ರನ್ ಅವರಿಗೆ ಆಪರೇಷನ್ ಮಾಡಿದ್ರೂ ಸರಿ ಆಗೋದು ಡೌಟ್ ಅಂತ ವೈದ್ಯರು(Doctors) ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕೆ.ಆರ್ ಪುರಂ ಪೊಲೀಸ್(Police) ಠಾಣೆಯಲ್ಲಿ ಎಫ್‌ಐಆರ್‌(FIR) ದಾಖಲಾಗಿದೆ. ಪತಿ ಚಂದ್ರನ್ ಮೇಲೆ ಹಲ್ಲೆ ಮಾಡಿ ಸತ್ತಿದ್ದಾನೆಂದು ಪತ್ನಿ ಅರುಣ್ ಕುಮಾರಿ ಎಸ್ಕೇಪ್(Abscond) ಆಗಿದ್ದಾಳೆ. ಮನೆ ಲಾಕ್ ಮಾಡಿ ಪತ್ನಿ ಅರುಣ್ ಕುಮಾರಿ ಪರಾರಿಯಾಗಿದ್ದಾಳೆ ಎಂದು ತಿಳಿದು ಬಂದಿದೆ.  ಹೆಂಡತಿಯಿಂದ ಏಟು ತಿಂದು ಚಂದ್ರನ್ ಮೂರು ದಿನಗಳ ಕಾಲ ಮನೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಮೂರು ದಿನಗಳ ಬಳಿಕ ಎಚ್ಚರಗೊಂಡು ಕಿರುಚಾಡುತ್ತಿದ್ದ ಚಂದ್ರನ್ ನನ್ನ ನೋಡಿ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. 

ಫ್ರೆಂಡ್‌ ಹೆಂಡ್ತಿ ಜತೆ ಅನೈತಿಕ ಸಂಬಂಧ: ಮಾರಕಾಸ್ತ್ರಗಳಿಂದ ಕೊಚ್ಚಿ ಸ್ನೇಹಿತನನ್ನೇ ಕೊಂದರು..!

ಗಂಡನ ಮೇಲೆ ಹಲ್ಲೆ ಮಾಡಿದ್ಯಾಕೆ?

ಹಣದ ವಿಚಾರವಾಗಿ ಚಂದ್ರನ್ ಹಾಗೂ ಅರುಣ್ ಕುಮಾರಿ ಆಗಾಗ ಜಗಳವಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಆಸ್ತಿ ಬರೆದುಕೊಡು ಹಾಗೂ ಎರಡು ಲಕ್ಷ ಹಣಕಕ್ಕಾಗಿ ಗಂಡ ಚಂದ್ರನ್ ಅವರಿಗೆ ಹೆಂಡತಿ  ಅರುಣ್ ಕುಮಾರಿ ಕಿರುಕುಳ(Harassment) ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. 

ಪತಿಯೊಬ್ಬನ ಕಣ್ಣೀರಿನ ಕಥೆ

ಇದೀಗ ಆಸ್ಪತ್ರೆಯಲ್ಲಿ ಘಟನೆ ಬಗ್ಗೆ ಚಂದ್ರನ್ ಅವರು ವಿಡಿಯೋ(Video) ಮಾಡಿ ನೋವು ತೋಡಿಕೊಂಡಿದ್ದಾರೆ. ಹೆಂಡತಿ ಹೇಗೆಲ್ಲಾ ಹಲ್ಲೆ ಮಾಡಿದ್ರೂ ಅಂತ ವಿಡಿಯೋದಲ್ಲಿ ಚಂದ್ರನ್ ವಿವರವಾಗಿ ಹೇಳಿದ್ದಾರೆ. ಚಂದ್ರನ್‌ಗೆ ಅರುಣ ಕುಮಾರಿ ಎರಡನೇ ಹೆಂಡತಿಯಾಗಿದ್ದಾರೆ. ಮೊದಲ ಹೆಂಡತಿಯಿಂದ ದೂರವಾದ ಬಳಿಕ ಅರುಣ ಕುಮಾರಿ ಎಂಬಾಕೆಯನ್ನ  ಚಂದ್ರನ್‌ ಮದುವೆಯಾಗಿದ್ದರಂತೆ. ದಂಪತಿಗೆ 15 ವರ್ಷದ ಮಗಳು ಸಹ ಇದ್ದಾಳೆ, ತಾಯಿ ಮಗಳು ಇಬ್ಬರೂ ಸೇರಿ ಹಲ್ಲೆ ಮಾಡಿದ್ದಾರೆ ಅಂತ ಚಂದ್ರನ್‌ ವಿಡಿಯೋದಲ್ಲಿ ಆರೋಪಿಸಿದ್ದಾರೆ(Allegation). ಚಂದ್ರನ್ ಹೆಸರಲ್ಲಿ ಸುಮಾರು 2 ಕೋಟಿ ಜಮೀನಿದ್ದು, ಅದನ್ನು ತಮ್ಮ ಹೆಸರಿಗೆ ಬರೆದುಕೊಡಿ ಅಂತ ಹೆಂಡತಿ ಟಾರ್ಚರ್ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.  ಅ.9 ರಂದು ಘಟನೆ ನಡೆದಿದ್ರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ(Arrest). ಸದ್ಯ ನಾಪತ್ತೆಯಾದ ಹೆಂಡತಿ ಹಾಗೂ ಮಗಳಿಗಾಗಿ ಪೊಲೀಸರ ಹುಡುಕಾಟ ಶುರು ಮಾಡಿದ್ದಾರೆ. 
 

Follow Us:
Download App:
  • android
  • ios