Asianet Suvarna News Asianet Suvarna News

ಪ್ರೀತ್ಸೆ..ಪ್ರೀತ್ಸೆ.. ಅಂತ ಸ್ಯಾಂಡಲ್‌ವುಡ್ ನಟಿ ಹಿಂದೆ ಬಿದ್ದ ಟೆಕ್ಕಿ ಅರೆಸ್ಟ್

* ಪ್ರೀತ್ಸೆ ಪ್ರೀತ್ಸೆ ಅಂತ ನಟಿ ಹಿಂದೆ ಬಿದ್ದ ಟೆಕ್ಕಿ ಅರೆಸ್ಟ್...!

* ಚಂದನ್ ಬಂಧನಕ್ಕೆ ಒಳಗಾದ ಪಾಗಲ್ ಪ್ರೇಮಿ

*  ನಟಿಗೆ ತನ್ನನ್ನು ಪ್ರೀತಿಸು ಎಂದು  ಒತ್ತಾಯ ಮಾಡುತ್ತಿದ್ದ ಟೆಕ್ಕಿ

* ಇಷ್ಟ ಇಲ್ಲದೇ ಇದ್ದರು ನಟಿಯ ಹಿಂದೆ ಬಿದ್ದು ಒತ್ತಡ

obsessive lover held for assault sandalwood actress crime news mah
Author
Bengaluru, First Published Oct 26, 2021, 6:47 PM IST
  • Facebook
  • Twitter
  • Whatsapp

ಬೆಂಗಳೂರು( ಅ.  26) ಪ್ರೀತ್ಸೆ ಪ್ರೀತ್ಸೆ ಅಂತ ನಟಿ ಹಿಂದೆ ಬಿದ್ದ ಟೆಕ್ಕಿಯನ್ನು ಬಂಧಿಸಲಾಗಿದೆ.  ಪಾಗಲ್ ಪ್ರೇಮಿ ಚಂದನ್ ಬಂಧನವಾಗಿದೆ.  ನಟಿಗೆ ತನ್ನನ್ನು ಪ್ರೀತಿಸು ಎಂದು ಬೆನ್ನ ಹಿಂದೆ ಬಿದ್ದಿದ್ದ.  ಇಷ್ಟ ಇಲ್ಲದೇ ಇದ್ದರೂ ನಟಿಯ ಹಿಂದೆ ಬಿದ್ದು ಒತ್ತಡ ಹಾಕುತ್ತಿದ್ದ. ಕಾಲೇಜು ಓದುತ್ತಾ ಇದ್ದಾಗಿನಿಂದ ಪ್ರೀತಿಸುವಂತೆ ಪೀಡಿಸುತ್ತಾ ಇದ್ದ.

ಕಾಲೇಜು ದಿನಗಳಿಂದ ಪರಿಚಯ ಆಗಿದ್ದ ಇಬ್ಬರು  ಎರಡು ಮೂರು ತಿಂಗಳು ಇಬ್ಬರೂ ಒಟ್ಟಿಗೆ ಓಡಾಡಿದ್ದರು ನಂತರ ಲವ್ ಮಾಡಲು ಇಷ್ಟವಿಲ್ಲದೆ ಬ್ರೇಕ್ ಅಪ್ ಆಗಿತ್ತು. ಇದರಿಂದ ಚಂದನ್ ಕೋಪಗೊಂಡಿದ್ದ. ಪ್ರಿಯಕರನ ಕಾಟ ತಾಳಲಾರದೆ ನಟಿ ಮನೆ ಬದಲಾಯಿಸಿದ್ದರು.

ನಿಶ್ಚಿತಾರ್ಥವಾದ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ

ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಾಗಿದ್ದ ನಟಿ  ಮನೆಗೆ ಬಂದು  ಧಮ್ಕಿ ಹಾಕಿದ್ದ. ನನ್ನನ್ನು ಪ್ರೀತಿ ಮಾಡಬೇಕು ಇಲ್ಲದೆ ಹೋದರೆ ಕೊಲ್ಲುತ್ತೇನೆ  ಎಂದು ಬೆದರಿಕೆ  ಹಾಕಿದ್ದ. ತನ್ನ ಸ್ನೇಹಿತೆ ಮನೆಗೆ ಹೋಗಲು ಕ್ಯಾಬ್ ನಲ್ಲಿ ತೆರಳುತ್ತಿದ್ದ ನಟಿಯನ್ನು ಅಡ್ಡ ಹಾಕಿ ಹಲ್ಲೆ ಮಾಡಿದ್ದ ಎನ್ನುವ ಆರೋಪವೂ ಇದೆ.  ಕಾರಿನ ಒಳಹೊಕ್ಕು ಹಲ್ಲೆ ಮಾಡಿದ್ದರ ಪರಿಣಾಮ ನಟಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ದೂರು ನೀಡಿದ್ದು ಪಾಗಲ್ ಪ್ರೇಮಿಯನ್ನು ಬಂಧಿಸಲಾಗಿದೆ. 

ಚಾಕು ಇರಿದಿದ್ದ ಪಾಗಲ್ ಪ್ರೇಮಿ; ಪ್ರೇಯಸಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ ನಂತರ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಘಟನೆ ಉಡುಪಿ ಅಂಬಾಗಿಲು ಸಮೀಪದ ಸಂತೆಕಟ್ಟೆಯ ಪೆಟ್ರೋಲ್‌ ಬಂಕ್‌ ಬಳಿಯಲ್ಲಿ ಘಟನೆ ನಡೆದಿತ್ತು. ಸೌಮ್ಯಶ್ರೀ ಭಂಡಾರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದಳು ಪಾಗಲ್ ಪ್ರೇಮಿ ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ.

 

Follow Us:
Download App:
  • android
  • ios