ನವದೆಹಲಿ(ಜು. 24)  ಅಲಿಘಡ  ದೀನ್ ದಯಾಳ್ ಆಸ್ಪತ್ರೆಯ  30  ವರ್ಷದ ವೈದ್ಯರೊಬ್ಬರನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. ಕೊರೋನಾ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೇಲೆ ವೈದ್ಯರು ಅತ್ಯಾಚಾರಕ್ಕೆ ಯತ್ನ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಆಸ್ಪತ್ರೆ ಆವರಣದಲ್ಲಿಯೇ ನನಗೆ ಲೈಂಗಿಕ ಶೋಷಣೆ ನೀಡಲಾಗುತ್ತಿದೆ ಎಂಬ ದೂರು ಮಹಿಳೆಯಿಂದ ಬಂದ ತಕ್ಷಣ ಪೊಲೀಸ್ ತಂಡವೊಂದನ್ನು ಕಳುಹಿಸಿಕೊಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಗಳವಾಡಿ ತಾಯಿ ಊರಿಗೆ, ಸ್ವಂತ ಮಗಳನ್ನೇ ರೇಪ್ ಮಾಡಿದ ಪಾಪಿ ತಂದೆ

ರೇಪ್ ಆರೋಪದ ಮೇಲೆ ಡಾಕ್ಟರ್ ತುಫೇಲ್ ಅಹಮದ್  ಎಂಬುವರನ್ನು ಬಂಧಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮಾಹಿತಿಯನ್ನು ಕಲೆ ಹಾಕಿದ್ದಾರೆ.  ಐಸೋಲೇಶನ್ ವಾರ್ಡ್ ನಲ್ಲಿ ಸಂತ್ರಸ್ತ ಮಹಿಳೆ ಇದ್ದರು. ಕೋವಿಡ್ ಡ್ಯೂಟಿಯಲ್ಲಿದ್ದ ವೈದ್ಯ ಅಹಮದ್ ಪರೀಕ್ಷೆ ನೆಪದಲ್ಲಿ ಎರಡು ಸಾರಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಸೆಕ್ಷನ್  354 (ಲೈಂಗಿಕ ದೌರ್ಜನ್ಯ) ಮತ್ತು ಸೆಕ್ಷನ್ 376 (ಪರಿಸ್ಥಿತಿ ಲಾಭ ಪಡೆದುಕೊಂಡು ಅತ್ಯಾಚಾರಕ್ಕೆ ಯತ್ನ)  ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. 

ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ  25  ವರ್ಷದ ಮಹಿಳೆ ಕೆಲಸದ ನಿಮಿತ್ತ ಅಲಿಘಡಕ್ಕೆ ಬಂದಿದ್ದರು. ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಮಡಿಕಲ್ ಸುಪರಿಟೆಂಟಂಟ್ ಅವರಿಂದಲೂ ಸ್ಥಳೀಯ ಆಡಳಿತ ಈ ಬಗ್ಗೆ ವರದಿ ನೀಡಲು ತಿಳಿಸಿದೆ.