ಜೈಪುರ, (ಜುಲೈ.15): ಅಪ್ಪ ಎಂದರೆ ಮಕ್ಕಳ ಕೌತುಕ, ಕುತೂಹಲ, ಆಸೆ ಉತ್ಸಾಹಗಳಿಗೆ ಸಂಭ್ರಮದ ಗರಿ ಮೂಡಿಸಿ ಪೊರೆಯುವ ದೊಡ್ಡ ಆಸ್ತಿ. ಅಷ್ಟೇ ಅಲ್ಲ ಅಪ್ಪ ಅಂದ್ರೆ ಆಕಾಶ ಅಂತಾನೆ ಕರೆಯಲಾಗುತ್ತೆ. ಆದ್ರೆ, ಇಲ್ಲೊಬ್ಬ ಕಾಮುಕ ತಂದೆ ತನ್ನ ಹೆತ್ತ ಪುತ್ರಿಯನ್ನೇ ರೇಪ್ ಮಾಡಿ ಕಾಮದ ತೀಟೆ ತೀರಿಸಿಕೊಂಡಿದ್ದಾನೆ. 

ಹೌದು.. ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಉದಯ್‌ಪುರ್ ಜಿಲ್ಲೆಯ ಗೋವರ್ಧನ ವಿಲಾಸ ಠಾಣೆ ವ್ಯಾಪ್ತಿಯ ಸೂರ್ಫಲ ಕಾಯ ಗ್ರಾಮದಲ್ಲಿ ನಡೆದಿದೆ.

ಪ್ರಿಯಕರನ ತೋಳ ತೆಕ್ಕೆಗೆ ಬರಲೊಪ್ಪದ ತಾಯಿ, ಬಲಿಯಾಗಿದ್ದು ಮಾತ್ರ ಪುಟ್ಟ ಮಗು!

ಟೆಂಪೋ ಚಾಲಕನಾಗಿರುವ ತಂದೆ ತನ್ನ 7 ವರ್ಷ ಮಗಳ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ಆರೋಪಿ ಹಾಗೂ ಆತನ ಪತ್ನಿ ಆಗಾಗೆ ಜಗಳವಾಡುತ್ತಿದ್ದರು. ಇದರಿಂದ ಹೆಂಡತಿ ಮಗಳ ಜೊತೆ ತವರು ಸೇರಿದ್ದಳು.

ಬಳಿಕ ಆರೋಪಿ ಮಗಳನ್ನು ಕರೆತಂದು ತನ್ನ ಸೋದರನ ಮನೆಯಲಿಟ್ಟಿದ್ದ. ಕುಡಿತದ ಚಟ ಹೊಂದಿದ್ದ ಈತ ಕುಡಿದ ಮತ್ತಿನಲ್ಲಿ ಮಗಳನ್ನು ಕರೆದುಕೊಂಡು ಹೋಗಿ ಟೆಂಪೋದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಅಲ್ಲಿನ ಗಿರ್ವ ಡಿಎಸ್‍ಪಿ ಪ್ರೇಮ್ ಧಾಂಡೆ  ತಿಳಿಸಿದ್ದಾರೆ.

ಸಂತ್ರಸ್ತೆಯ ಸಂಬಂಧಿಕರು ಹಾಗೂ ಆಕೆಯ ತಾಯಿ ಆರೋಪಿ ವಿರುದ್ಧ ದೂರು ನೀಡಿದ್ದು , ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ತೆಂಪೋವನು ಸಿಜ್ ಮಾಡಿದ್ದಾರೆ.