ಬೆಂಗಳೂರು(ಮಾ. 05)  ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ ಮಾಡಿ ಅಲ್ಲೋಲ-ಕಲ್ಲೋಲಕ್ಕೆ ಕಾರಣವಾಗಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಇದೀಗ ವರಸೆ ಬದಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.

"

ಪೊಲೀಸರ ಮುಂದೆ ತನ್ನ ವರಸೆಯನ್ನೇ ದಿನೇಶ್ ಬದಲಾಯಿಸಿದ್ದಾರೆ ವಿಚಾರಣೆ ವೇಳೆ ಸಂಪೂರ್ಣ ಉಲ್ಟಾ ಹೊಡೆದಿದ್ದಾರೆ. ಮೊದಲು‌ ಸ್ನೇಹಿತ ಸಿಡಿ ಕೊಟ್ಟಿದ್ದಾಗಿ ಹೇಳಿದ್ದ ದಿನೇಶ್ ಕಲ್ಲಳ್ಳಿ ಈಗ  ಯಾರೊ ಅಪರಿಚಿತರು ರಾಮಕೃಷ್ಣ ಲಾಡ್ಜ್ ಬಳಿ ಸಿಡಿ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ.

ಫೆ. 1 ನೇ ತಾರೀಖು ರಾಮಕೃಷ್ಣ ಲಾಡ್ಜ್ ಬಳಿ ಹೋಗಿದ್ದಾಗಿ ಹೇಳಿಕೆ ನೀಡಿದ್ದರು ಅಂದಿನ ಸಿಸಿಟಿವು ಪರಿಶೀಲಿಸಿದಾಗ ಎಲ್ಲೂ ದಿನೇಶ್ ಕಲ್ಲಳ್ಳಿ ಕಾಣಿಸಿರಲಿಲ್ಲ. ಅಲ್ಲೇ ಸೈಡ್ ನಲ್ಲಿ ಇದ್ದಿದ್ದೆ ಎಂದು ಈ ಹಿಂದೆ ಹೇಳಿದ್ದರು. 1 ತಾರೀಖು ಸಿಡಿಯನ್ನು ನನಗೆ ಅಪರಿಚಿತರು ನೀಡಿದರು. ಅದನ್ನ ರಾತ್ರಿ ಲ್ಯಾಪ್ಟಾಪ್ ನಿಂದ ಮೊಬೈಲಿಗೆ ಹಾಕಿಕೊಂಡಿರೋದಾಗಿ ಹೇಳಿಕೆಯನ್ನು ಈಗ ನೀಡಿದ್ದಾರೆ.

ಯಾರು ಈ ದಿನೇಶ್.. ರಮೇಶ್ ಗೆ ಮಾತ್ರವಲ್ಲ ಡಿಕೆಶಿಗೂ ಕಾಡಿದ್ದರು!

ಇನ್ನೊಂದು ಕಡೆ ಪೊಲೀಸ್ ಭದ್ರತಾ ಸಿಬ್ಬಂದಿ  ಯಾಮಾರಿಸಿ ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಮದುವೆ ಇದೆ ಎಂದು ಹೇಳಿ ಕಬ್ಬನ್ ಪಾರ್ಕ್  ಪೊಲೀಸ್ ಠಾಣೆಗೆ ಬಂದಿದ್ದಾರೆ. 9 ನೇ ತಾರೀಖು ವಿಚಾರಣೆಗೆ ಬರೋದಾಗಿ ಹೇಳಿದ್ದ ಕಲ್ಲಳ್ಳಿ ಇಂದೇ (ಶುಕ್ರವಾರ) ಬಂದಿದ್ದಾರೆ ಈಗಾಗಲೆ ಕೊಲೆ ಬೆದರಿಕೆ ಕಾರಣ ಕನಕಪುರ ಗ್ರಾಮಂತರ ಠಾಣೆಯಲ್ಲಿ ಭದ್ರತೆಗಾಗಿ ಮನವಿ ಮಾಡಿದ್ದ ದಿನೇಶ್  ಭದ್ರತೆಯೊಂದಿಗೆ ಬರುತ್ತೇನೆ ಎಂದಿದ್ದರು.

ಎಸಿಪಿ ಯತಿರಾಜ್ ನಂತರ ಡಿಸಿಪಿಯಿಂದ ಎರಡನೇ ಸುತ್ತಿನ ವಿಚಾರಣೆ ನಡೆದಿದ್ದು ಅಲ್ಲಿಯೀ ಹಳೆ ಮಾತನ್ನೇ ಹೇಳಿದ್ದಾರೆ.  ಪೊಲೀಸರು ಏನೇ ಮಾಹಿತಿ ಕೇಳಿದ್ರು ಹೊಸದೇನು ಇಲ್ಲ ದೂರು ನೀಡುವಾಗ ನೀಡಿದ್ದ ಹೇಳಿಕೆಯನ್ನೆ ಪುನಮ ಮತ್ತೆ ನೀಡಿದ್ದಾರೆ. ಯುವತಿ ಮತ್ತು ಕುಟುಂಬಸ್ಥರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಒಂದು ವೇಳೆ ಅವರು ನನ್ನನ್ನು ಸಂಪರ್ಕ ಮಾಡಿದ್ರೆ ಖಂಡಿತ ನಿಮಗೆ ತಿಳಿಸುತ್ತೇನೆ ಸದ್ಯ ನನಗೆ ಅವರ ಜೊತೆ ಯಾವುದೇ ಸಂಪರ್ಕ ಇಲ್ಲ ನೀವು ವಿಚಾರಣೆಗೆ ಕರೆದ್ರಿ ನಾನು ಹಾಜರ್ ಅಗಿದ್ದೇನೆ ಎಂದಿದ್ದಾರೆ.

"