ಯಾರು ಈ ದಿನೇಶ್ ಕಲ್ಲಹಳ್ಳಿ? ರಮೇಶ್‌ಗೆ ಮಾತ್ರ ಅಲ್ಲ ಡಿಕೆಶಿಗೂ ಕಾಡಿದ್ದರು!

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಸ್ಫೋಟ/ ಯಾರು ಈ ಸಾಮಾಜಿಕ ಕಾರ್ಯಕರ್ತ ದಿನೇಶ್/ ಯಾವ ಜಿಲ್ಲೆಯವರು? ಈ ಹಿಂದೆ ಏನು ಮಾಡಿಕೊಂಡಿದ್ದರು

Who is Social Activist Dinesh Kallahalli History and background mah

ರಾಮನಗರ/ ಬೆಂಗಳೂರು(ಮಾ. 04 )  ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಸೆಕ್ಸ ವಿಡಿಯೋ ಬಹಿರಂಗ ಮಾಡಿ ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿದ ದಿನೇಶ್ ಕಲ್ಲಹಳ್ಳಿ ಯಾರು? ಸಹಜವಾಗಿಯೇ ಈ ಪ್ರಶ್ನೆ ಇಡೀ ರಾಜ್ಯದ ಜನರನ್ನು ಕಾಡುತ್ತಿದೆ

ನನ್ನ ಬಳಿ ಇನ್ನು ಮೂವರ ವಿಡಿಯೋ ಇದೆ ಎಂದು ದಿನೇಶ್ ಬಾಂಬ್ ಬೇರೆ ಸಿಡಿಸಿದ್ದಾರೆ.  ಈ ದಿನೇಶ್ ಯಾರು ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ.

ಕನಕಪುರ ಸನಿಹದ ಕಲ್ಲಹಳ್ಳಿಯ ದಿನೇಶ್ ಈ ಹಿಂದೆ ಹಲವು ವಾರಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ನಂತರ ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಗುರುತಿಸಿಕೊಂಡರು. 

ಮೂವರು ದೊಡ್ಡವರ ಸಿಡಿಗಳಿವೆ; ಸುಳಿವು ಕೊಟ್ಟ ದಿನೇಶ್

ಬೆಂಗಳೂರಿನಲ್ಲಿ ಕ್ರಿಯಾಶೀಲರಾದ ದಿನೇಶ್ ಪ್ರಮುಖ ವಕೀಲರ ಸಂಪರ್ಕ ಸಾಧಿಸಿದರು.  ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ದೂರುದಾರರಾದರು. ಕನಕಪುರ ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದರು.  ಇದೇ ಸಂದರ್ಭ ದಿನೇಶ್ ಹತ್ಯೆಗೂ ಸಂಚು ನಡೆದಿತ್ತು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್, ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ವಿರುದ್ಧ ದೂರು ನೀಡಿ ಪೊಲೀಸರ ರಕ್ಷಣೆಯನ್ನು ದಿನೇಶ್ ಕೋರಿದ್ದರು. ನಂತರ ಡಿಕೆಶಿ ಮೇಲೆ ಐಟಿ ದಾಳಿ ನಡೆದ ಸಂದರ್ಭ ಸ್ಥಳೀಯ ಮುಖಂಡರೊಬ್ಬರ ನೇತೃತ್ವದಲ್ಲಿ ರಾಜಿ ಮಾಡಿಕೊಂಡಿದ್ದರು.

"

ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಇನ್ನೊಂದು ವಿಡಿಯೋ ಇದೆ. ನನ್ನ ಬಳಿ ಸಚಿವರು ಸೇರಿದಂತೆ ಇನ್ನು ಮೂವರ ಸೆಕ್ಸ್ ಹಗರಣದ ವಿಡಿಯೋ ಇದೆ ಎಂದು ಕಲ್ಲಹಳ್ಳಿ ಈಗಾಗಲೇ ಬಾಂಬ್ ಸಿಡಿಸಿದ್ದಾರೆ.  ಈ ಹಿಂದೆ ಬಳ್ಳಾರಿಯ  ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಮೇಟಿ ಅವರ ಸೆಕ್ಸ್ ಸಿಡಿ ಬಹಿರಂಗ ಮಾಡಿದ್ದರು.

 

 

Latest Videos
Follow Us:
Download App:
  • android
  • ios