2 ವರ್ಷಗಳಿಂದ ಶಾರುಖ್‌ನ ಭಯದಲ್ಲೇ ಬದುಕಿದ್ದಳು ಅಂಕಿತಾ, ಶಿಕ್ಷೆಯ ಭಯವಿಲ್ಲದೆ ನಗುತ್ತಲೇ ಬಂದ ಆರೋಪಿ!
ತನ್ನ ಪ್ರೀತಿಯನ್ನು ಒಪ್ಪದ ಕಾರಣಕ್ಕೆ ಹಿಂದೂ ಹುಡುಗಿ ಅಂಕಿತಾಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿ ಶಾರುಖ್ ಹುಸೇನ್‌ನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಬಂಧನ ಮಾಡುವ ವೇಳೆ ಆತ ನಗುತ್ತಲೇ ಪೊಲೀಸ್ ಕಸ್ಟಡಿಗೆ ಬಂದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಸತತ ಎರಡು ವರ್ಷಗಳಿಂದ ಶಾರುಖ್ ಹುಸೇನ್, ಅಂಕಿತಾಗೆ ಕಿರುಕುಳ ನೀಡುತ್ತಿದ್ದ ಎನ್ನುವುದು ಬಹಿರಂಗವಾಗಿದೆ.
ರಾಂಚಿ (ಆ.29): ಪ್ರೀತಿಗಾಗಿ ಪೀಡಿಸಿದ ಮುಸ್ಲಿಂ ಹುಡುಗನಿಂದ 17 ವರ್ಷದ ಹಿಂದೂ ಹುಡುಗಿ ಅಂಕಿತಾಳ ಕೊಲೆಯಾಗಿದೆ. ಐದು ದಿನಗಳ ಹಿಂದೆ ಅಕೆಯ ಮೇಲೆ ಪೆಟ್ರೋಲ್ ಸುರಿದು ಶಾರುಖ್ ಹುಸೇನ್ ಎಂಬಾತ ಬೆಂಕಿ ಹಚ್ಚಿದ್ದ. ಅಂಕಿತಾ ತನ್ನ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಮುಂಜಾನೆಯ ಸವಿನಿದ್ರೆಯಲ್ಲಿದ್ದ ವೇಳೆ ಕಿಟಿಕಿಯಿಂದ ಆಕೆಯ ಕೋಣೆಗೆ ಪೆಟ್ರೋಲ್ ಸುರಿದು ಶಾರುಖ್ ಹುಸೇನ್ ಬೆಂಕಿ ಹಚ್ಚಿದ್ದ. ತಕ್ಷಣವೇ ಆಕೆಯನ್ನು ಧುಮ್ಕಾದ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ತೀವ್ರವಾಗಿ ಗಾಯವಾಗಿದ್ದ ಕಾರಣಕ್ಕೆ ಬಳಿಕ ಆಕೆಯನ್ನು ರಾಂಚಿಯ ರಿಮ್ಸ್‌ಗೆ ದಾಖಲಿಸಲಾಗಿತ್ತು. ಸೋಮವಾರ ಮುಂಜಾನೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾಳೆ. ಐಪಿಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಅಂಕಿತಾ, ಟ್ಯೂಷನ್ ನಡೆಸುವ ಮೂಲಕ ಮನೆಯನ್ನು ಸಂಭಾಳಿಸಿ ತಾನೂ ಕೂಡ ಓದುತ್ತಿದ್ದಳು. ಆದರೆ, ತನ್ನ ಕರೆಯನ್ನು ಸ್ವೀಕರಿಸಲಿಲ್ಲ, ಪ್ರೀತಿಯನ್ನು ಒಪ್ಪಿಲ್ಲ ಎನ್ನುವ ಕಾರಣಕ್ಕೆ ಹುಚ್ಚು ಪ್ರೇಮಿಯೊಬ್ಬ ಆಕೆಗೆ ಬೆಂಕಿ ಇಟ್ಟಿದ್ದ. ಈಕೆಯ ಸಾವಿನ ಬೆನ್ನಲ್ಲಿಯೇ ಇನ್ನಷ್ಟು ವಿವರಗಳು ಹೊರಬಿದ್ದಿದ್ದು, ಕಳೆದ ಎರಡು ವರ್ಷಗಳಿಂದ ಶಾರುಖ್ ಹುಸೇನ್, ಅಂಕಿತಾಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಂಕಿತಾಳ ಕೊಲೆ ಮಾಡಿದ ಯಾವ ಪಶ್ಚಾತಾಪವೂ ಇಲ್ಲದೆ, ಪೊಲೀಸ್ ಕಸ್ಟಡಿಗೆ ಶಾರುಖ್ ಹುಸೇನ್ ನಗುತ್ತಲೇ ಬಂದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಅಂಕಿತಾ ಧುಮ್ಕಾದ ಜರುದಿಹ್ ಪ್ರದೇಶದ ನಿವಾಸಿಯಾಗಿದ್ದು, ಇಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ಮಿಶ್ರ ಜನಸಂಖ್ಯೆಯನ್ನು ಹೊಂದಿದೆ. ಆಕೆಯ ತಂದೆ ಸಂಜೀವ್ ಸಿಂಗ್ ಬಿಸ್ಕೆಟ್ ಕಂಪನಿಯಲ್ಲಿ ಸೇಲ್ಸ್ ಮ್ಯಾನ್. ತಾಯಿ ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಅವಳು ತನ್ನ ತಂದೆ, ಅಜ್ಜ ಮತ್ತು 12 ವರ್ಷದ ಕಿರಿಯ ಸಹೋದರನೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಹಿರಿಯ ಅಕ್ಕನಿಗೆ ಈಗಾಗಲೇ ಮದುವೆಯಾಗಿದೆ. ಕಣ್ಣೀರು ಒರೆಸಿಕೊಳ್ಳುತ್ತಲೇ ಮಾತನಾಡಿದ ಸಂಜೀವ್ ಸಿಂಗ್, ಅಂಕಿತಾ ನನ್ನ ಮೂವರು ಮಕ್ಕಳಲ್ಲಿ ಮಧ್ಯದವಳು. ಓದಿನಲ್ಲಿ ತುಂಬಾ ಮುಂದಿದ್ದಳು. ಧುಮ್ಕಾದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದಳು ಎಂದು ಹೇಳಿದ್ದಾರೆ.
ಅಂಕಿತಾಗೆ ಶಾರುಖ್ (Shahrukh Hussain) ಕಳೆದ ಎರಡು ವರ್ಷದಿಂದ ಕಿರುಕುಳ ನೀಡುತ್ತಿದ್ದ. ಮನೆಯ ಪರಿಸ್ಥಿತಿ ನೋಡಿ ಆಕೆ ಇದನ್ನು ಯಾರಿಗೂ ಹೇಳಿರಲಿಲ್ಲ. 22 ವರ್ಷದ ಶಾರುಖ್‌ಗೆ ಪ್ರತಿದಿನವೂ ರಸ್ತೆಯಲ್ಲಿ ಹೋಗುವ ಹುಡುಗಿಯರನ್ನು ಛೇಡಿಸುವುದೇ ಕೆಲಸವಾಗಿತ್ತು. ಹುಡುಗಿಯರನ್ನು ಪ್ರೇಮದ ಬಲೆಗೆ ಬೀಳುಸುವುದೇ ಆತನ ಕೆಲಸವಾಗಿತ್ತು. ಈಗಾಗಲೇ ಊರಿನ ಸಾಕಷ್ಟು ಹೆಣ್ಣು ಮಕ್ಕಳಿಗೆ ಆತ ಕಿರುಕುಳ ನೀಡಿದ್ದ ಎನ್ನುವುದು ಸ್ಥಳೀಯರ ಮಾತು.
ಶಾರುಖ್‌ನ ವರ್ತನೆಯಿಂದ ಅಂಕಿತಾ ಸಿಟ್ಟಾಗಿದ್ದಳು. ಪೊಲೀಸ್ ಮೆಟ್ಟಿಲೇರಲು ಬಯಸಿದಾಗ, ಶಾರುಖ್‌ನ ಅಣ್ಣ ಮನೆಗೆ ಬಂದು ಕ್ಷಮೆ ಕೇಳಿದ್ದ.ಈಗ ಅವರ ಸಹೋದರ ಎಂದಿಗೂ ತನಗೆ ತೊಂದರೆ ನೀಡುವುದಿಲ್ಲ ಎಂದು ಅವರು ಭರವಸೆ ನೀಡಿದರು. ಸ್ವಲ್ಪ ದಿನ ಎಲ್ಲವೂ ಚೆನ್ನಾಗಿಯೇ ನಡೆದಿತ್ತು, ಆದರೆ ನಂತರ ಶಾರುಖ್ ತನ್ನ ಅಭ್ಯಾಸವನ್ನು ಬಿಡಲಿಲ್ಲ ಎಂದು ಹೇಳಿದ್ದಾರೆ. ಆದರೆ, ಕಳೆದ ಕೆಲವು ತಿಂಗಳಿನಿಂದ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದ. ಅದರಲ್ಲೂ 10-15 ದಿನಗಳಲ್ಲಿ ಪ್ರತಿದಿನವೂ ಆಕೆಯನ್ನು ಸತಾಯಿಸುತ್ತಿದ್ದ. ಆಗಸ್ಟ್ 22 ರಂದು ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಮರು ದಿನವೇ ಈ ಕೆಲಸ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಫೋನ್‌ನಲ್ಲಿ ಮಾತನಾಡಿಲ್ಲವೆಂದು ಪಿಯುಸಿ ವಿದ್ಯಾರ್ಥಿನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ!
ಇಡೀ ಕುಟುಂಬವನ್ನೇ ಕೊಲ್ಲುವ ಬೆದರಿಕೆ: ಸಾವಿಗೂ ಮುನ್ನ ಅಂಕಿತಾ (Ankita) ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಚಂದ್ರಜಿತ್ ಸಿಂಗ್ ಮತ್ತು ಎಸ್‌ಡಿಪಿಒ ನೂರ್ ಮುಸ್ತಫಾ ಅವರ ಮುಂದೆ ಹೇಳಿಕೆ ನೀಡಿದ್ದಾರೆ. ನಾನು ಹೇಳಿದಂತೆ ಕೇಳದೇ ಇದ್ದಲ್ಲಿ, ಇಡೀ ಕುಟುಂಬವನ್ನೇ ಕೊಲೆ ಮಾಡುತ್ತೇನೆ ಎಂದು ಶಾರುಖ್ ಹುಸೇನ್, ಅಂಕಿತಾಗೆ ಬೆದರಿಸಿದ್ದ. ಆತ ಹಲ್ಲೆ ಮಾಡಬಹುದು ಎಂದುಕೊಂಡಿದ್ದೆ. ಆದರೆ, ಪೆಟ್ರೋಲ್ ಹಾಕಿ ಕೊಲ್ಲುವ ಮಟ್ಟಕ್ಕೆ ಇಳಿಯುತ್ತಾನೆ ಎಂದುಕೊಂಡಿರಲಿಲ್ಲ. ಆ. 22ಕ್ಕೆ ಆತ ಬೆದರಿಕೆ ಹಾಕಿದಾಗ ಮನೆಗೆ ಬಂದು ತಂದೆಗೆ ವಿಷಯ ತಿಳಿಸಿದ್ದೆ. ಬೆಳಗ್ಗೆ ಈ ವಿಚಾರವಾಗಿ ಮಾತನಾಡೋಣ ಎಂದು ತಂದೆ ಹೇಳಿದ್ದರು. ಆದರೆ, ಈ ಬಗ್ಗೆ ಚರ್ಚೆ ಮಾಡುವ ಮುನ್ನವೇ ಆತ ಬೆಂಕಿ ಹಾಕಿದ್ದಾನೆ ಎಂದು ಸ್ವತಃ ಅಂಕಿತಾ ಸಾವಿಗೂ ಮುನ್ನ ತಿಳಿಸಿದ್ದಾಳೆ.
ಲಿವ್ ಇನ್ ಸಂಬಂಧದಲ್ಲಿದ್ದ 1350 ಜೋಡಿಗೆ ಏಕಕಾಲದಲ್ಲಿ ಮದುವೆ, ಪಾತ್ರೆ, ಬಟ್ಟೆ ಗಿಫ್ಟ್!
ಪೊಲೀಸ್ ಕಸ್ಟಡಿಯಲ್ಲಿ ನಗುತ್ತಿದ್ದ ಆರೋಪಿ: ತಾನು ಮಾಡಿದ್ದಕ್ಕೆ ಆರೋಪಿಗೆ ಪಶ್ಚಾತ್ತಾಪವಿದ್ದಿರಲಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸುವಾಗ ಆತ ನಗುತ್ತಿದ್ದ. ಆತನ ದೇಹಭಾಷೆಯಿಂದ, ಆತನಿಗೆ ತನ್ನ ಕೃತ್ಯದ ಬಗ್ಗೆ ಯಾವುದೇ ರೀತಿಯ ವಿಷಾದ ಇದ್ದಂತೆ ತೋರಲಿಲ್ಲ. ಆಗಸ್ಟ್ 23 ರಂದು ಶಾರುಖ್ ಅವರನ್ನು ಪೊಲೀಸರು ಬಂಧಿಸಿದ್ದರು. ಅದೇ ಸಮಯದಲ್ಲಿ, ಶಾರುಖ್‌ಗೆ ಪೆಟ್ರೋಲ್ ನೀಡಿದ್ದ ಅವನ ಪಾಲುದಾರ ಛೋಟು ಖಾನ್‌ನನ್ನು ಸಹ ಪೊಲೀಸರು ಬಂಧಿಸಿದ್ದಾರೆ.