Dharwad: ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ 3 ವರ್ಷ ಶಿಕ್ಷೆ

ಧಾರವಾಡ ನಗರದ ವಿವಿದೆಡೆ 4 ಪ್ರಕರಣಗಳಲ್ಲಿ ಬಂಗಾರ ಹಾಗೂ ನಗದು ಕಳ್ಳತನಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ. ಚಂದ್ರಕಾಂತ ಅವರು ಡಿಸೆಂಬರ್ 3 ರಂದು ಶಿಕ್ಷೆ ಪ್ರಕಟಿಸಿದ್ದಾರೆ.

Dharwad court sentenced the accused who were involved in four theft cases to 3 years gow

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್  

ಧಾರವಾಡ (ಡಿ.3): ಧಾರವಾಡ ನಗರದ ವಿವಿದೆಡೆ 4 ಪ್ರಕರಣಗಳಲ್ಲಿ ಬಂಗಾರ ಹಾಗೂ ನಗದು ಕಳ್ಳತನಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ. ಚಂದ್ರಕಾಂತ ಅವರು ಡಿಸೆಂಬರ್ 3 ರಂದು ಶಿಕ್ಷೆ ಪ್ರಕಟಿಸಿದ್ದಾರೆ. ಧಾರವಾಡ ನಗರದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನವಲೂರಿನ ಎಲ್.ಎಮ್.ಸಿ ಚಾಳಿನಲ್ಲಿ ವಾಸವಾಗಿರುವ ಶ್ರೀ ಮಹೇಶ ರಘು ನಾಯ್ಕ ಇವರ ಮನೆಯ ಕೀಲಿಯನ್ನು ಹಗಲು ಹೊತ್ತಿನಲ್ಲಿ ಕಳ್ಳರು ಮುರಿದು ಒಟ್ಟು 89 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 100 ಗ್ರಾಂ ತೂಕದ ಬೆಳ್ಳಿ ಒಡವೆಗಳನ್ನು ಅಂದಾಜು ಬೆಲೆ ರೂ.2,24,000/- ರಷ್ಟು ಕಳ್ಳರು ಕಳ್ಳತನ ಮಾಡಿದ್ದರು. ಧಾರವಾಡ ನಗರದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೆ.ಎಮ್.ಎಫ್. ಹತ್ತಿರ ನಂದಿನಿ ಲೇಔಟನಲ್ಲಿ ವಾಸವಾಗಿರುವ ಸತೀಶ ಸಿದ್ದಪ್ಪ ಹೆಗ್ಗಣವರ ಇವರ ಮನೆಯ ಕೀಲಿಯನ್ನು ಹಗಲು ಹೊತ್ತಿನಲ್ಲಿ ಕಳ್ಳರು ಮುರಿದು ಒಟ್ಟು 20 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 130 ಗ್ರಾಂ ತೂಕದ ಬೆಳ್ಳಿ ಒಡವೆಗಳನ್ನು ಹಾಗೂ 20,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದರು.

ಧಾರವಾಡ ನಗರದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕೆ.ಎಮ್.ಎಫ್. ಬಾಲತ್ರಿಪುರಸುಂದರಿ ದೇವಸ್ಥಾನದ ಹತ್ತಿರ ವಾಸವಾಗಿರುವ ಮಲ್ಲಿಕಾರ್ಜುನಯ್ಯ ಎನ್ ಅಳಗುಂಡಿಮಠ ಇವರ ಮನೆಯ ಇಂಟರ್ ಲಾಕನ್ನು ರಾತ್ರಿ ವೇಳೆಯಲ್ಲಿ ಕಳ್ಳರು ಮುರಿದು ಒಟ್ಟು 12 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 2,500 ಗ್ರಾಂ ತೂಕದ ಬೆಳ್ಳಿ ಒಡವೆ ರೂ 1,24,000/- ಅಂದಾಜು ಕಿಮ್ಮತ್ತಿನವುಗಳನ್ನು ಹಾಗೂ 3,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದರು..

ಧಾರವಾಡ ನಗರದ  ಶಿವಾಜಿನಗರದಲ್ಲಿ ವಾಸವಾಗಿರುವ ಶ್ರೀ ಸುಭಾಸ ಕೃಷ್ಣಾ ಶಿಂಧೆ  ಇವರ ಮನೆಯ ಕೀಲಿಯನ್ನು ರಾತ್ರಿವೇಳೆಯಲ್ಲಿ ಕಳ್ಳರು ಮುರಿದು ಒಟ್ಟು 142 ಗ್ರಾಂ ತೂಕದ ಬಂಗಾರದ ಒಡವೆ ರೂ 3,52,000/- ಅಂದಾಜು ಕಿಮ್ಮತ್ತಿನವುಗಳನ್ನು ಹಾಗೂ 7,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದರು.

ಧಾರವಾಡ ನಗರದ ನವಲೂರಿನ ವಿನಾಯಕನಗರದಲ್ಲಿ ವಾಸವಾಗಿರುವ ಶ್ರೀ ಭೀಮಸಿ ಎಮ್ ಬೆಂಗೇರಿ  ಇವರ ಮನೆಯ ಕೀಲಿ ಹಾಕಿದ ಚಿಲಕದ ಕೊಂಡಿಯನ್ನು ರಾತ್ರಿವೇಳೆಯಲ್ಲಿ ಕಳ್ಳರು ಮುರಿದು ಒಟ್ಟು 50 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 65,000/- ರೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

ಧಾರವಾಡ ವಿದ್ಯಾಗಿರಿ ಪೊಲೀಸರು ಒಬ್ಬ ವೆಂಕಟೇಶರೆಡ್ಡಿ ಅಲಿಯಾಸ ಇಮ್ತಿಯಾಜ ಶೇಖ ತಂದೆ ನಾಗರಾಜನ್, ವನ್ನಾರ. ಅಲಿಯಾಸ ಅಜಮೀರ ಶೇಖ ವಾಸ: ಹೊಸೂರ, ಶಾಂತಿನಗರ, ತಮಿಳುನಾಡು ರಾಜ್ಯ ಹಾಲಿವಾಸ: ಜನ್ನತನಗರ ಧಾರವಾಡ ಎಂಬ ವ್ಯಕ್ತಿಯನ್ನು ಬಂಧಿಸಿ ಸಮಗ್ರ ತನಿಖೆ ಮಾಡಿದಾಗ ಈ ಮೇಲ್ಕಾಣಿಸಿದ ಪ್ರದೇಶಗಳ ಮನೆಗಳ ಕೀಲಿಯನ್ನು ಮುರಿದು ಬಂಗಾರ, ಬೆಳ್ಳಿಯ ಒಡವೆಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿರುತ್ತದೆ. ಅಲ್ಲದೇ ಸದರಿ ಆರೋಪಿ ತಾನು ಕಳ್ಳತನ ಮಾಡಿದ ಮಾಲನ್ನು ಶಬ್ಬೀರ ರೆಹಮಾನಸಾಬ ಶೇಖ, ಜನ್ನತನಗರ ಧಾರವಾಡ ಇತನಿಗೆ ಮಾರಾಟ ಮಾಡಲು ಕೊಡುತ್ತಿರುವ ಸಂಗತಿ ತಿಳಿದು ಬಂದಿರುತ್ತದೆ.

ಹಾಸನ: ಸೊಸೆಗೆ ಲೈಂಗಿಕ ಕಿರುಕುಳ, ಸುಪಾರಿ ಕೊಟ್ಟು ಮಾವನ ಕಥೆ ಫಿನಿಷ್‌ ಮಾಡಿದ

ಪೊಲೀಸರು ಸದರಿ ಇಬ್ಬರು ಆರೋಪಿತರ ವಶದಿಂದ ಕಳ್ಳತನವಾದ ಒಡವೆಗಳನ್ನು ಜಪ್ತಿ ಮಾಡಿದ್ದು, ಮೇಲ್ಕಾಣಿಸಿದ ಪ್ರಕರಣಗಳ ಪಿರ್ಯಾದಿದಾರರು ಅವುಗಳನ್ನು ಗುರುತಿಸಿರುತ್ತಾರೆ. ಧಾರವಾಡ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ. ಚಂದ್ರಕಾಂತ ಇವರು 
1) ಸಿ.ಸಿ ನಂ.1088/2019 
2) ಸಿ.ಸಿ ನಂ.2537/2018 
3) ಸಿ.ಸಿ ನಂ.3376/2018 
4) ಸಿಸಿ ನಂ.1125/2019.
ಈ ಪ್ರಕರಣಗಳಲ್ಲಿ 1ನೇ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 454 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಅದೇರೀತಿ, ಭಾರತೀಯ ದಂಡ ಸಂಹಿತೆ ಕಲಂ 380 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಹಾಗೂ 02 ನೇ ಆರೋಪಿಗೆ ಭಾರತೀಯ.ದಂಡ.ಸಂಹಿತೆ ಕಲಂ 411 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 2 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಉಳಿದ ಇನ್ನೊಂದು ಪ್ರಕರಣ ಸಂಖ್ಯೆ 5) ಸಿಸಿ 3142/2018 ರಲ್ಲಿ 1ನೇ ಆರೋಪಿಗೆ ಭಾರತೀಯ.ದಂಡ.ಸಂಹಿತೆ ಕಲಂ 454 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ  ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಅದೇರೀತಿ ಭಾರತೀಯ.ದಂಡ.ಸಂಹಿತೆ ಕಲಂ 380 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಿದೆ ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಆಸ್ತಿ ಮತ್ತು ಪ್ರೇಮಿಗಾಗಿ ಗಂಡನಿಗೆ ಸ್ಲೋ ಪಾಯಿಸನ್ ಹಾಕಿ ಕೊಂದ ಪತ್ನಿ ಅರೆಸ್ಟ್!

ಸದರಿ ಪ್ರಕರಣಗಳಲ್ಲಿ ಬಿ.ಎಮ್.ಅಂಗಡಿ. ಎ.ಎಸ್.ಐ ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ,   ಎಸ್.ಕೆ.ಯಾವಗಲ್ಲಮಠ. ಎ.ಎಸ್.ಐ ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ,  ಎನ್.ಕೆ.ಗುರ್ಲಹೋಸೂರ ಪಿ.ಎಸ್.ಐ ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ ರವರು ಆರೋಪಿತರ ವಿರುದ್ದ ದೂರಗಳನ್ನು ಸ್ವೀಕರಿಸಿ ಪ್ರಕರಣಗಳನ್ನು ದಾಖಲಿಸಿಕೊಂಡು ಭಾಗಶ: ತನಿಖೆ ಮಾಡಿರುತ್ತಾರೆ. ಹಾಗೂ ಎಮ್.ವಿ.ಹೊಸಪೇಟಿ, ಪೊಲೀಸ ಇನ್ಸಪೆಕ್ಟರ್, ವಿದ್ಯಾಗಿರಿ ಪೊಲೀಸ ಠಾಣೆ ಧಾರವಾಡ ರವರು ಆರೋಪಿತರ ವಿರುದ್ದ ಮುಂದಿನ ತನಿಖೆಯನ್ನು ಕೈಗೊಂಡು ದೋಷಾರೋಪಣ ಪಟ್ಟಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯ ಸರ್ಕಾರಿ ವಕೀಲ (ಅಭಿಯೋಜಕರು) ರಾದ   ಅನಿಲಕುಮಾರ ಆರ್ ತೊರವಿ ಇವರು ವಕಾಲತ್ತು ಮಂಡಿಸಿದ್ದರು.

Latest Videos
Follow Us:
Download App:
  • android
  • ios