Asianet Suvarna News Asianet Suvarna News

Dharwad; ಇದು ಕೊಲೆನಾ? ಅಹಜ ಸಾವಾ? ಅನುಮಾನಕ್ಕೆ ಎಡೆ ಮಾಡಿಕೊಟ್ಟ ಸಿಸಿಟಿವಿ ದೃಶ್ಯಗಳು!

ಜಗಳ ಆಡಬೇಡಿ ಎಂದು ಬುದ್ದಿ ಹೇಳಿದಕ್ಕೆ ಮೂವರು ಯುವಕರು ಹೋಟೆಲ್ ಮಾಲೀಕನ ಮೆಲೆ ಹಲ್ಲೆ ಮಾಡಿರುವ ಘಟನೆ ಧಾರವಾಡದ ಸಾಯಿ  ಹೋಟೆಲ್ ನಲ್ಲಿ ನಡೆದಿದ್ದು,  ಮೂವರು ಯುವಕರು ಏಕಾಏಕಿ ಹಲ್ಲೆ‌ ಮಾಡಿದ ಬಳಿಕ  ಹೋಟೆಲ್ ಮಾಲೀಕ ಮೃತಪಟ್ಟಿದ್ದಾನೆ

dharwad restaurant owner suspicious death after fighting with youths gow
Author
First Published Oct 21, 2022, 5:03 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಅ.21): ಜಗಳ ಆಡಬೇಡಿ ಎಂದು ಬುದ್ದಿ ಹೇಳಿದಕ್ಕೆ ಮೂವರು ಯುವಕರು ಹೋಟೆಲ್ ಮಾಲೀಕನ ಮೆಲೆ ಹಲ್ಲೆ ಮಾಡಿರುವ ಘಟನೆ ಧಾರವಾಡ ಹೊಸ ಬಸ್ ನಿಲ್ದಾಣದ ಎದುರು ಇರುವ ಸಾಯಿ ಹೋಟೆಲ್ ನಲ್ಲಿ ನಡೆದಿದೆ. ಇನ್ನು ಮೂವರು ಯುವಕರು ಏಕಾಏಕಿ ಹಲ್ಲೆ‌ ಮಾಡಿದ ಬಳಿಕ ಹೋಟೆಲ್ ಮಾಲೀಕ ರಾಮಲಿಂಗಪ್ಪ ಮ್ಯಾಗೇರಿ ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ 4 ಘಂಟೆಗೆ ಹೊಸ ಬಸ್ ನಿಲ್ದಾಣದ ಬಳಿ ಇರುವ ಸಾಯಿ ಹೋಟೆಲ್ ನಲ್ಲಿ ಮೂವರು ಯುವಕರು ಟೀ ಕುಡಿಯಲಿಕ್ಕೆ ಬಂದಿರುತ್ತಾರೆ ಆದರೆ ಅವರು ವಯಕ್ತಿಕವಾಗಿ ಮೂವರು ಜಗಳಾ ವಾಡಿಕ್ಕೊಂಡಿದ್ದಾರೆ. ಈ ಕುರಿತು ಮೂವರಿಗೂ ಬುದ್ದಿ ಹೇಳಿದಕ್ಕೆ ಆ ಮೂವರು ಯುವಕರು ರಾಮಲಿಂಗಪ್ಪ ಮತ್ತು ಅವರ ಹೋಟೆಲ್ ಸಿಬ್ಬಂದಿಗಳನ್ನ ಹಿಗ್ಗಾ ಮುಗ್ಗಾ ಹೊಡೆದಿರುತ್ತಾರೆ. ಹೊಡೆದ ಎಲ್ಲ ವಿಡಿಯೋ ಗಳು ಸಿಸಿಟಿವಿಯಲ್ಲಿ ಸೆರೆ ಯಾಗಿದೆ. ಎಲ್ಲ ವಿಡಿಯೋಗಳು ಕೂಡಾ ಪೋಲಿಸರು ವಶಕ್ಕೆ ಪಡೆದುಕ್ಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನು ಹಲ್ಲೆ ಮಾಡಿದ ಬಳಿ ರಾಮಲಿಂಗಪ್ಪ‌ ಮ್ಯಾಗೇರಿ ಏಕಾ ಏಕಿ ಕುಸಿದು ಬಿದ್ದು ಸಾವನ್ನಪ್ಪುತ್ತಾನೆ.

ಆದರೆ ಹಲ್ಲೆ‌ವಿಡಿಯೋ, ಮತ್ತು ರಾಮಲಿಂಗಪ್ಪ ಕುಸಿದು ಬಿದ್ದಿರುವ ವಿಡಿಯೋ ನೋಡಿದ್ರೆ ಇದು ಕೊಲೆ ನಾ ಅಥವಾ ಅಹಜ ಸಾವಾ ಎಂದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸ್ಥಳಕ್ಕೆ ಬಂದ ಉಪನಗರ ಪೋಲಿಸರು ಬೇಟಿ ನೀಡಿ ಪ್ರಕರಣವನ್ನ‌ ದಾಖಲಸಿಕ್ಕೊಂಡು ತನಿಖೆಯನ್ನ ನಡೆಸುತ್ತಿದ್ದಾರೆ‌‌. ಆದರೆ ಮೆಲ್ನೋಟಕ್ಕೆ‌ಇದು ಕೊಲೆ ಎಂದು ಕಂಡು ಬರುತ್ತಿದೆ ಆದರೆ ಪೋಲಿಸ್ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆನಾ ಅಥವಾ ಹೃದಯಾಘಾತ ದಿಂದ ಸಾವನ್ನಪ್ಪಿದ್ದಾರಾ ಎಂಬುದು ಪೋಲಿಸ್ ತನಿಖೆಯಿಂದ ಹೊರ ಬರಬೇಕಿದೆ.

ಬೆಡ್ ಶೀಟ್ ಮಾರುವ ನೆಪದಲ್ಲಿ ಬಂದು ಮಹಿಳೆ ಅತ್ಯಾಚಾರ ಯತ್ನಿಸಿದ ಯುವಕರಿಗೆ ಥಳಿತ

ಇನ್ನು ಪ್ರಕರಣವನ್ನ‌ ದಾಖಲಸಿಕ್ಕೊಂಡ ಉಪನಗರ ಪೋಲಿಸರು ಮೂವರನ್ನ‌ ವಶಕ್ಕೆ ಪಡೆದುಕ್ಕೊಂಡು ತನಿಖೆಯನ್ನ ನಡೆಸುತ್ತಿದ್ದಾರೆ ಮೃತ ರಾಮಲಿಂಗಪ್ಪ‌ ಮ್ಯಾಗೇರಿ ಅವರ ಕುಟುಂಬಸ್ಥರಿಂದ ಪ್ರಕರಣವನ್ನ ಮಾಹಿತಿ ಪಡೆದುಕ್ಕೊಂಡು ಮುಂದಿನ ವಿಚಾರಣೆಯನ್ನ ಪೊಲಿಸರು ಮಾಡುತ್ತಿದ್ದಾರೆ. ರಾಮಲಿಂಗಪ್ಪನ ಸಾವು ಅಸಹಜ ಸಾವೋ, ಅಥವಾ ಹಲ್ಲೆ ಮಾಡಿದಕ್ಕೆ‌ ಹೆದರಿ ಸಾವನ್ನಪ್ಪಿದ್ದಾರಾ..? ಇವೆಲ್ಲವೂ ಪೋಲಿಸರ ಪಾರದರ್ಶಕ ತನಿಖೆಯಿಂದ ಹೊರಬರಬೇಕಿದೆ.

Teacher Recruitment scam: ಬಂಧಿತ 38 ಶಿಕ್ಷಕರಿಗೆ ಪೊಲೀಸ್‌ ಕಸ್ಟಡಿ

 

Follow Us:
Download App:
  • android
  • ios