Husband Kills Wife : ಬಾ ನಲ್ಲೆ ಮಧುಚಂದ್ರಕೆ..... ಗೋವಾಕ್ಕೆ ಕರೆದುಕೊಂಡು ಹೋಗಿ ಪತ್ನಿ ಹತ್ಯೆ!
* ಅಕ್ರಮ ಸಂಬಂಧ ಶಂಕೆ, ಪತ್ನಿಯನ್ನು ಹೊಡೆದು ಕೊಂದ
* ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು
* ಮರಣೋತ್ತರ ಪರೀಕ್ಷೆ ವೇಳೆ ಗಾಯದ ಗುರುತು ಪತ್ತೆ
ಪಣಜಿ (ಡಿ. 22) ಬಾ ನಲ್ಲೆ ಮಧುಚಂದ್ರಕೆ ಕನ್ನಡ (Sandalwood) ಸಿನಿಮಾದ ಕತೆಯೇ ಇಲ್ಲಿ ಪುನರಾವರ್ತನೆಯಾಗಿದೆ. ಪತ್ನಿಯನ್ನು(Wife) ನಂಬಿಸಿ ಪ್ರವಾಸಕ್ಕೆ ಕರೆದುಕೊಂಡು ಬಂದು ಕೊಲೆ (Murder) ಮಾಡಿದ್ದವ ಸಿಕ್ಕಿಬಿದ್ದಿದ್ದಾನೆ.
ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ 29 ವರ್ಷದ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗೋವಾ ಪಣಜಿ ಮಾರ್ಗೋವ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸಾಗರ್ ತಿಂಬಾಡಿಯಾ ಎಂದು ಗುರುತಿಸಲಾಗಿದ್ದು, ಗೋವಾದ (Goa) ರಾವನ್‌ಫೊಂಡ್ ಪ್ರದೇಶದಲ್ಲಿ ನೆಲೆಸಿದ್ದ.
ಗುಜರಾತ್ ಮೂಲದ ಸಾಗರ್ ವೃತ್ತಿಯಲ್ಲಿ ಸೆರಾಮಿಕ್ ಟೈಲ್ಸ್ ಡೀಲರ್. ಈತನ ಪತ್ನಿ ಸಾವನ್ನಪ್ಪಿದ ನಂತರ, ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಸಂದರ್ಭ ಮೃತ ಮಹಿಳೆಯ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು. ಮದುವೆಯಾಗಿ ಸರಿಯಾಗಿ ಎರಡು ವರ್ಷದ ನಂತರ ಆಕೆ ಸಾವನ್ನಪ್ಪಿದ್ದಳು.
ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಒಂದೊಂದೆ ಅಂಶಗಳು ಬಹಿರಂಗವಾಗಿವೆ. ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು ಗಂಡನೇ ಕೊಲೆ ಮಾಡಿದ್ದು ಗೊತ್ತಾಗಿದೆ. ಸಾಗರ್ ತಿಂಬಾಡಿಯ ವಿರುದ್ಧ ಎಸ್‌ಡಿಎಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಡಿ ಆತನ ಮೇಲೆ ಕೊಲೆ ಆರೋಪ ದಾಖಲಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ನೀಡಿಲಾಗಿದೆ.
ಶಿವಮೊಗ್ಗ; ಮಾವನೊಂದಿಗೆ ಮಂಚ ಏರಿದ್ದಳು.. ಕಾಮದಾಟ ಕಣ್ಣಾರೆ ಕಂಡ ಗಂಡ!
ಹಾವಿನಿಂದ ಕಚ್ಚಿಸಿ ಪತ್ನಿ ಕೊಲೆ: ಸರ್ಪದಿಂದ(Cobra) ಕಚ್ಚಿಸಿ ಹೆಂಡತಿಯನ್ನು(Wife) ಭೀಕರವಾಗಿ ಕೊಲೆ (Murder)ಮಾಡಿದ ಪ್ರಕರಣದ ತೀರ್ಪು ಹೊರಬಿದ್ದಿತ್ತು ಪತ್ನಿಯನ್ನು ಕೊಂದಿದ್ದ ಗಂಡ ಅಪರಾಧಿ (found guilty)ಎಂದು ಸಾಬೀತಾಗಿದ್ದು ಕೋಲಂ ಅಡಿಶನಲ್ ಸೆಶನ್ಸ್ ಕೋರ್ಟ್ IPC ಸೆಕ್ಷನ್ 302, 307, 328 ಮತ್ತು 201 ಅಡಿಯಲ್ಲಿ ದೋಷಿ ಎಂದು ಪ್ರಕಟ ಮಾಡಿತ್ತು.
ಸರ್ಕಾರಿ ಕೆಲಸದಲ್ಲಿದ್ದ ಸೂರಜ್ ಎಂಬಾತನನ್ನು ಹೆಂಡತಿ ಉತ್ರಾಳನ್ನು ಕೊಲೆ ಮಾಡಿದ್ದ. ವಿಷ ಸರ್ಪದಿಂದ ಹೆಂಡತಿಯನ್ನು ಎರಡು ಸಾರಿ ಕೊಚ್ಚಿಸಿ ಕೊಲೆ ಮಾಡಿದ್ದ. ಹಾವನ್ನು ತೆಗೆದುಕೊಂಡ ಬಂದ್ ಜಾರ್ ಪತ್ತೆ ಮಾಡಲಾಗಿದ್ದು ಪೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು. ಹಾವು ಕಚ್ಚಿ ಮೇ 7 ರಂದು ಉತ್ರಾ ಸಾವನ್ನಪ್ಪಿದ್ದರು. ಇದಾದ ಮೇಲೆ ಪೊಲೀಸರು ವಿಚಾರಣೆ ನಡೆಸಿದಾಗ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಸೂರಜ್ ಒಪ್ಪಿಕೊಂಡಿದ್ದ. 10 ಸಾವಿರ ರೂ. ಕೊಟ್ಟು ಎರಡು ಹಾವು ತಂದಿದ್ದಾಗಿಯೂ ಹೇಳಿದ್ದ. ಮೇ 2 ರಂದೇ ಕೊಲೆ ಮಾಡಲು ಯತ್ನ ಮಾಡಿದ್ದ ಆದರೆ ಹಾವು ಕೈಕೊಟ್ಟಿತ್ತು. ಹಾವಿನಿಂದ ಕಚ್ಚಿಸಿ ಸಾಯಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಸೂರಜ್ ಭಾವಿಸಿದ್ದ,
ಸುಸೈಡ್ ಎಂದು ಬಿಂಬಿಸಿದ್ದ: ತಾಲೂಕಿನ ಉಪ್ಪಿನಪಟ್ಟಣದಲ್ಲಿ ಮಂಗಳವಾರ ರಾತ್ರಿ ವ್ಯಕ್ತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸುವ ನಾಟಕವಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕತಗಾಲ ಸಮೀಪದ ಉಪ್ಪಿನಪಟ್ಟಣದ ಮಮತಾ ಮಂಜುನಾಥ ಶಾನಭಾಗ (38) ಹತ್ಯೆಗೀಡಾದವರು. ಈಕೆಯ ಪತಿ ಮಂಜುನಾಥ ಶಾನಭಾಗ ಹತ್ಯೆ ಮಾಡಿದ ಆರೋಪಿ.
ಮಂಗಳವಾರ ರಾತ್ರಿ ಪತ್ನಿ ಮಮತಾಳೊಂದಿಗೆ ಜಗಳವಾಡಿ, ಆಕೆಯ ಕತ್ತು ಹಿಸುಕಿದಾಗ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆನಂತರ ಆಕೆಯ ಕತ್ತಿಗೆ ಟವೆಲ್ ಬಿಗಿದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಮೀಪದವರಿಗೆ ತಿಳಿಸಿದ್ದಾನೆ. ಇದಲ್ಲದೆ, ಕುಮಟಾ ಪೊಲೀಸ್ ಠಾಣೆಗೆ ತೆರಳಿ ಪತ್ನಿಯ ಮಾನಸಿಕ ಸ್ಥಿತಿ ಸರಿಯಾಗಿ ಇರಲಿಲ್ಲ. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿವರ ನೀಡಿದ್ದ.