Asianet Suvarna News Asianet Suvarna News

ಮಹಿಳೆಯರ ವಿರುದ್ಧ ಅಪರಾಧ: ಬೆಂಗಳೂರು ದೇಶದಲ್ಲೇ ನಂ.3!

ಮಹಿಳೆಯರ ವಿರುದ್ಧ ಎಸಗುವ ಅಪರಾಧ ಪ್ರಕರಣಗಳಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರು, ದೇಶದ ಮೆಟ್ರೋ ನಗರಗಳ ಪೈಕಿ 3ನೇ ಸ್ಥಾನ ಪಡೆದಿದೆ.  ಕಳೆದ ವರ್ಷ ಬೆಂಗಳೂರಿನಲ್ಲಿ 3127 ಪ್ರಕರಣ ದಾಖಲು. ದೆಹಲಿ, ಮುಂಬೈಗೆ ನಂತರದ ಸ್ಥಾನ ಎಂದು ಎನ್‌ಸಿಆರ್‌ಬಿ ದಾಖಲೆ

Crime against women bengaluru registered top 3 place NCRB report gow
Author
First Published Aug 30, 2022, 9:54 AM IST

ನವದೆಹಲಿ (ಆ.30): ಮಹಿಳೆಯರ ವಿರುದ್ಧ ಎಸಗುವ ಅಪರಾಧ ಪ್ರಕರಣಗಳಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರು, ದೇಶದ ಮೆಟ್ರೋ ನಗರಗಳ ಪೈಕಿ 3ನೇ ಸ್ಥಾನ ಪಡೆದಿದೆ. ಮೊದಲ ಎರಡು ಸ್ಥಾನದಲ್ಲಿ ಕ್ರಮವಾಗಿ ದೆಹಲಿ ಮತ್ತು ಮುಂಬೈ ನಗರಗಳಿವೆ. ಈ ಮೂಲಕ ಸತತ ಮೂರನೇ ವರ್ಷ, ಎಲ್ಲಾ ಮೆಟ್ರೋಪಾಲಿಟನ್ ನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪಟ್ಟಿಯಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ. 2021 ರಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳು ಹಿಂದಿನ ವರ್ಷಕ್ಕಿಂತ 40% ರಷ್ಟು ಹೆಚ್ಚಾಗಿದೆ, 1,226 ಅತ್ಯಾಚಾರ ಘಟನೆಗಳು ಮತ್ತು 136 ವರದಕ್ಷಿಣೆ ಸಾವುಗಳು ಸಂಭವಿಸಿವೆ. 2021ನೇ ಸಾಲಿನ ರಾಷ್ಟ್ರೀಯ ಅಪರಾಧ ಬ್ಯೂರೋದ ವರದಿ ಪ್ರಕಟವಾಗಿದ್ದು, ಅದರನ್ವಯ, ಕಳೆದ ವರ್ಷ ದೇಶಾದ 19 ಮೆಟ್ರೋ ನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧದ 43414 ಪ್ರಕರಣ ದಾಖಲಾಗಿವೆ. ಈ ಪೈಕಿ ದೆಹಲಿಯಲ್ಲಿ 13892 ಪ್ರಕರಣ ದಾಖಲಾಗಿದೆ. ದೆಹಲಿ ನಂತರದ ಸ್ಥಾನದಲ್ಲಿ ಮುಂಬೈ (5543) ಮತ್ತು ಬೆಂಗಳೂರು (3127) ನಗರಗಳಿವೆ.ಈ ಎರಡೂ ನಗರಗಳು, 19 ಮೆಟ್ರೋ ನಗರಗಳಲ್ಲಿನ ಇಂಥ ಅಪರಾಧ ಪ್ರಕರಣಗಳ ಪೈಕಿ ಕ್ರಮವಾಗಿ ಶೇ.12.76 ಮತ್ತು ಶೇ.7.2ರಷ್ಟುಪಾಲು ಹೊಂದಿವೆ ಎಂದು ವರದಿ ಹೇಳಿದೆ.  

ಕಳೆದ ವರ್ಷದಲ್ಲಿ ಪ್ರತಿ ದಿನ ಸರಾಸರಿ ಮೂರು ಅತ್ಯಾಚಾರಗಳು ವರದಿಯಾಗುತ್ತಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NRCB) ವರದಿ ತೋರಿಸಿದೆ. 2020ಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಇಂಥ ಪ್ರಕರಣಗಳಲ್ಲಿ ಶೇ.40ರಷ್ಟುಭಾರೀ ಏರಿಕೆಯಾಗಿದೆ. ಜೊತೆಗೆ ದೆಹಲಿಯಲ್ಲಿ ಪ್ರತಿ ದಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಮಹಿಳೆಯರ ಅಪಹರಣ (3948), ಪತಿಯರ ಕ್ರೌರ್ಯ (4674), ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ (833)ದಲ್ಲೂ ದೆಹಲಿ ನಂ.1 ಸ್ಥಾನದಲ್ಲಿದೆ.

19 ಮೆಟ್ರೋ ನಗರಗಳಲ್ಲಿ ದಾಖಲಾದ ಒಟ್ಟಾರೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ದೆಹಲಿ ಪಾಲೇ ಶೇ.32.20ರಷ್ಟಿದೆ. ಈ ಮೂಲಕ ದೇಶದ ರಾಜಧಾನಿ ನವದೆಹಲಿ, ಮೆಟ್ರೋ ನಗರಿಗಳ ಪೈಕಿ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ನಗರವಾಗಿ ಹೊರಹೊಮ್ಮಿದೆ ಎಂದು ವರದಿ ಹೇಳಿದೆ.

ಸತತ ಮೂರನೇ ವರ್ಷ, ಎಲ್ಲಾ ಮೆಟ್ರೋಪಾಲಿಟನ್ ನಗರಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪಟ್ಟಿಯಲ್ಲಿ ದೆಹಲಿ ಅಗ್ರಸ್ಥಾನದಲ್ಲಿದೆ. 2021 ರಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳು ಹಿಂದಿನ ವರ್ಷಕ್ಕಿಂತ 40% ರಷ್ಟು ಹೆಚ್ಚಾಗಿದೆ, 1,226 ಅತ್ಯಾಚಾರ ಘಟನೆಗಳು ಮತ್ತು 136 ವರದಕ್ಷಿಣೆ ಸಾವುಗಳು.'

2 ವರ್ಷಗಳಿಂದ ಶಾರುಖ್‌ನ ಭಯದಲ್ಲೇ ಬದುಕಿದ್ದಳು ಅಂಕಿತಾ, ಶಿಕ್ಷೆಯ ಭಯವಿಲ್ಲದೆ ನಗುತ್ತಲೇ ಬಂದ ಆರೋಪಿ!

ಜುಲೈನಲ್ಲಿ, ಹೊಸದಿಲ್ಲಿ ರೈಲು ನಿಲ್ದಾಣದ ವಿದ್ಯುತ್ ನಿರ್ವಹಣಾ ಕೊಠಡಿಯೊಳಗೆ ನಾಲ್ವರು ರೈಲ್ವೆ ಉದ್ಯೋಗಿಗಳು 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಗರವು ಭಾರೀ ಆಕ್ರೋಶಕ್ಕೆ ಸಾಕ್ಷಿಯಾಯಿತು.

ಬಿಲ್ಕಿಸ್‌ ಬಾನು ಅತ್ಯಾಚಾರಿಗಳ ಬಿಡುಗಡೆ ಖಂಡಿಸಿ ರಾಜ್ಯದಲ್ಲಿ ಸಂಘಟನೆಗಳ ಧರಣಿ

2021ರ ಅಪರಾಧ ನಗರಗಳು

ದೆಹಲಿ 13892

ಮುಂಬೈ 5543

ಬೆಂಗಳೂರು 3127

Follow Us:
Download App:
  • android
  • ios