ಮುಂಬೈ(ಜು. 13)  ಬೀದಿಗೆ ಬಂದ ಜೋಡಿ ಜಗಳ ಜನರಿಗೆ ತಾಪತ್ರಯವಾಗಿ ಪರಿಣಮಿಸಿದೆ. ಮನೆಯಲ್ಲಿ ಸಾಲದು ಅಂಥ ಜೋಡಿಯೊಂದು ಮುಂಬೈನಲ್ಲಿ ರಸ್ತೆಗೆ ಬಂದಿ ಕಿತ್ತಾಡಿಕೊಂಡಿದ್ದಾರೆ. ಜನ ಮಾತ್ರ ಪುಕ್ಕಟೆ ಮನರಂಜನೆ  ಕಂಡಿದ್ದು ಟ್ರಾಫಿಕ್ ಸಮಸ್ಯೆ ಅನುಭವಿಸಬೇಕಾಗಿ ಬಂದಿದೆ.

ಬಿಳಿ ಬಣ್ಣದ ಕಾರು ಮತ್ತು ಕಪ್ಪು ಬಣ್ಣದ ಕಾರ್ ನಡುವೆ ಯುದ್ಧ ನಡೆದಿದೆ.  ಮಧ್ಯ ದಾರಿಯಲ್ಲಿ ವಾಹನ ನಿಲ್ಲಿಸಿದ್ದಕ್ಕೆ ಮಹಿಳೆಗೆ ದಂಡ ಹಾಕಲಾಗಿದೆ.

ಟ್ಯಾಟೂ ಬಯಲು ಮಾಡಿದ ರೋಚಕ ಕೊಲೆ ರಹಸ್ಯ

ಮುಂಬೈನ ಪಡ್ಢಾರ್ ರಸ್ತೆಯಲ್ಲಿನ ಘಟನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗಂಡ ಮತ್ತೊಬ್ಬ ಮಹಿಳೆಯೊಂದಿಗೆ ಕಾರಿನಲ್ಲಿದ್ದ.  ಬಿಳಿ ಕಾರಿನಲ್ಲಿ ಬಂದ ಆತನ ಪತ್ನಿ ಗಂಡನ್ ಕಾರು ನಿಲ್ಲಿಸಿ ರಂಪಾಟ ಮಾಡಿದ್ದಾಳೆ. ಕಾರ್ ಮೇಲೆಯೇ ಹತ್ತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ವಿಶ್ವಸಂಸ್ಥೆ ಕಾರಿನಲ್ಲೇ ಕಾಮದಾಟ; ವೈರಲ್ ಆದ ವಿಡಿಯೋ

ಗಂಡನಿಗೆ ಹೊರಬರುವಂತೆ ಪಟ್ಟುಹಿಡಿದಿದ್ದಾಳೆ.  ಬಳಿಕ ಅವರಿಬ್ಬರು ಆಕೆಯ (ಬಿಳಿ) ಕಾರ್‌ ಬಳಿ ಹೋಗಿ ವಾಗ್ವಾದ ನಡೆಸಿದ್ದಾರೆ. ಹೊರಬಂದ ಬಳಿಕ ಮಹಿಳೆ ಮತ್ತೆ ಕಪ್ಪು ಕಾರಿನಲ್ಲಿದ್ದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. 

ಬೇರೆ ಹೆಂಗಸಿನೊಂದಿಗೆ ಗಂಡ ತೆರಳುತ್ತಿದ್ದ ಎನ್ನುವುದು ಮಹಿಳೆಯ ಆರೋಪ ಎನ್ನುವುದು ಪ್ರತ್ಯಕ್ಷದರ್ಶಿಗಳೊಬ್ಬರ ಮಾತು. ನೀವು ಜೋಡಿ ಜಗಳ ನೋಡಿಕೊಂಡು ಬನ್ನಿ..