ನವದೆಹಲಿ(ಜು.  12)  ಕೊಲೆ ಮಾಡಲು ಎರಡು ತಿಂಗಳಿನಿಂದ ಸಂಚು ಮಾಡಲಾಗಿತ್ತು... ಹೌದು ಈ ಅಪರಾಧ ಕಹಾನಿ ಬಲು ರೋಚಕವಾಗಿದೆ.

ಕೊಲೆಯಾಗಿ ಅದೆಷ್ಟೋ ದಿನಗಳು ಕಳೆದ ವ್ಯಕ್ತಿಯ ಶವವೊಂದು ನವದೆಹಲಿಯ ಮೋರಿ ಒಂದರಲ್ಲಿ ಪೊಲೀಸರಿಗೆ ಸಿಕ್ಕಿತ್ತು. ದೇಹದ ಮೇಲೆ ST ಎಂದು ಬರೆದುಕೊಂಡಿದ್ದ ಟ್ಯಾಟೂ ಒಂದನ್ನು ಬಿಟ್ಟರೆ ಬೇರೆ ಯಾವ ಸುಳಿವು ಇರಲಿಲ್ಲ. 

ಈ ಟ್ಯಾಟೂ ಪೊಲೀಸರನ್ನು ಸತ್ತ ವ್ಯಕ್ತಿಯ ಪತ್ನಿ ಮತ್ತು ಮಗಳ ಬಳಿ ತಂದು ನಿಲ್ಲಿಸಿತ್ತು. ಇದಕ್ಕೆ ಸಹಕಾರ ನೀಡಿದ್ದ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಜುಲೈ 2  ರಂದು ಚರಂಡಿಯೊಂದರಲ್ಲಿ ಕೊಲೆಯಾದ ವ್ಯಕ್ತಿಯ ಶವ ಭಾಟಿ ವಿಲೇಜ್ ಬಳಿ ದೊರಕುತ್ತದೆ.  ಅಲ್ಲಿಂದ ಒಂದು ಕಿಮೀ ದೂರಲ್ಲಿ ಕಾರೊಂದು ದೊರೆಯುತ್ತದೆ. ಕಾರಿನ ನೋಂದಣಿ ಸಂಖ್ಯೆ ಪರಿಶೀಲನೆ ಮಾಡಲಾಗುತ್ತದೆ.  ಮಾಹಿತಿ ಪಡೆದುಕೊಂಡು ಈ ಎಸ್ ಮತ್ತಿ ಟಿ ಅಂದರೆ ಏನು ಎಂಬುದನ್ನು ಪತ್ತೆ ಮಾಡಲಾಗುತ್ತದೆ ಎಂದು ಡಿಸಿಪಿ ಅತುಲ್ ಕುಮಾರ್ ಕಹಾನಿ ತಿಳಿಸುತ್ತಾರೆ.

ಟಿಕ್ ಟಾಕ್ ಹೆಂಡತಿ, ಟಿಪ್ ಟಾಪ್ ಬಾಯ್ ಫ್ರೆಂಡ್.. !

ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರ ಬಂಧನವಾಗುತ್ತದೆ.  ಕೊಲೆಯಾದ ವ್ಯಕ್ತಿ ಒಬ್ಬ ಟ್ಯಾಕ್ಸಿ ಚಾಲಕ, ಆತನ ಪತ್ನಿ ಇನ್ನೊಬ್ಬಾತನೊಂದಿಗೆ ಹತ್ತಿರವಾಗುತ್ತಿದ್ದುದ್ದು ಚಾಲಕನಿಗೆ ಸಿಟ್ಟು ತರಿಸಿತ್ತು.. ಇದು ಗೊತ್ತಾಗಿ ಗಂಡ ಹೆಂಡತಿ ನಡುವೆ ದಿನೇ ದಿನೇ ಜಗಳ ನಡೆಯುತ್ತಿತ್ತು ಎಂದು ಕೊಲೆಯಾದ ವ್ಯಕ್ತಿಯ ಸಹೋದರ ತಿಳಿಸಿದ್ದಾರೆ.

ಹೆಂಡತಿಗೆ ಹತ್ತಿರವಾಗುತ್ತಿದ್ದ ವ್ಯಕ್ತಿ ಆಗಾಗ ಮನೆಗೆ ಬರುತ್ತಿದ್ದ. ಇದು ಟ್ಯಾಕ್ಸಿ ಚಾಲಕನ ಕೋಪ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಸಂದರ್ಭ ಸಿಕ್ಕಾಗ ಎಲ್ಲ ಟ್ಯಾಕ್ಸಿ ಚಾಲಕ ಹೆಂಡಿ ಮತ್ತುನ ಅಪ್ರಾಪ್ತ ಮಗಳನ್ನು ಮನಬಂದಂತೆ ದಂಡಿಸುತ್ತಿದ್ದ. 

ಗಂಡನ ಕಾಟ ತಾಳಲಾರದೇ ಹೆಂಡತಿ ಮತ್ತು ಮಕ್ಕಳು ಸೇರಿಯೇ ಕೊಲೆ ಮಾಡುವ ತೀರ್ಮಾನಕ್ಕೆ ಬಂದಿದ್ದರು ಅವಕಾಶಕ್ಕಾಗಿ ಕಾಯುತ್ತಿದ್ದರು. ಒಂದು ದಿನ ಕಂಠಪೂರ್ತಿ ಕುಡಿದು ಮನೆಗೆ ಬಂದ ಟ್ಯಾಕ್ಸಿ ಚಾಲಕನಿಗೆ ಅದೇ ತನ್ನ ಅಂತಿಮ ದಿನ ಆಗುತ್ತದೆ ಎಂದು ಗೊತ್ತಿರಲಿಲ್ಲ.

ಹೆಂಡತಿಯೇ ಕುಡಿದ ಗಂಡನ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಾಳೆ. ತಪ್ಪಿಸಿಕೊಳ್ಳಲು ಚಾಲಕ ಯತ್ನ ಮಾಡಿದಾಗ ಮಗಳು ಆತನ ಕಣ್ಣಿಗೆ ಉಪ್ಪು ಎಸೆದಿದ್ದಾಳೆ. ಹೆಂಡತಿ ಮಕ್ಕಳಿಂದಲೇ ಹಲ್ಲೆಗೊಳಗಾದ ವ್ಯಕ್ತಿ ಸತ್ತು ಬಿದ್ದಿದ್ದಾನೆ.  ಆತನ ಶವವನ್ನು ಕಾರ್ ನಲ್ಲಿ ತುಂಬಿ ಮೋರಿಗೆ ಎಸೆದು ಬರಲಾಗಿದೆ.