ಆನ್ ಲೈನ್​ನಲ್ಲಿ ವೇಶ್ಯಾವಾಟಿಕೆ ಹೆಸರಿನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದವರು ಲಾಕ್

ಇಂಟರ್‌ನೆಟ್‌ ಬಳಕೆದಾರರನ್ನು ಟಾರ್ಗೆಟ್ ಮಾಡಿ ಆನ್ ಲೈನ್​ನಲ್ಲಿ ವೇಶ್ಯಾವಾಟಿಕೆ ಹೆಸರಿನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ದಂಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

couple arrested for honeytrap in online prostitution at Bengaluru rbj

ಬೆಂಗಳೂರು, (ಫೆ.04): ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ದಂಪತಿಯನ್ನು ಬೆಂಗಳೂರಿನ ವೈಟ್​​ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

ಆನ್ ಲೈನ್​ನಲ್ಲಿ ವೇಶ್ಯಾವಾಟಿಕೆಗೆ ಯುವತಿಯರನ್ನ ಕಳಿಸುವುದಾಗಿ ದಂಪತಿ ಪೊಸ್ಟ್ ಹಾಕುತ್ತಿದ್ದು, ನಂಬರ್ ಗಳು ಹಾಗೂ ಫೋಟೊಗಳನ್ನ ಅಪ್ಲೋಡ್ ಮಾಡುತ್ತಿದ್ದರು.

ತೀಟೆ ತಿರಿಸಿಕೊಂಡು ವರಸೆ ಬದಲಿಸಿದ: ವಿದ್ಯಾರ್ಥಿನಿ ಜತೆ ಲೆಕ್ಚರರ್​ ಪುತ್ರನ ಕಾಮಪುರಾಣ

ನಂತರ ಬಂದ ಗಿರಾಕಿಗಳಿಂದ ಹಣವನ್ನು ಪಡೆದು ಯುವತಿಯರನ್ನ ಕಳಿಸುತ್ತಿದ್ದರು. ಬಳಿಕ ಆ ಸ್ಥಳಕ್ಕೆ ಹೋಗಿ ಗಿರಾಕಿಗಳಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು.

ದೂರುದಾರನಿಂದ 94000 ಹಣವನ್ನ ಗೂಗಲ್ ಪೇ ಮಾಡಿಸಿಕೊಂಡಿದ್ದ ಕಿರಣ್ ರಾಜ್ ಮತ್ತು ಭಾಸ್ವತಿ ದತ್ತಾ ನಂತರ 150 ಗ್ರಾಂ ಚಿನ್ನಾಭರಣವನ್ನ ದೋಚಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Latest Videos
Follow Us:
Download App:
  • android
  • ios