ಬೆಂಗಳೂರು, (ಫೆ.03): ಇದು ಕಾಲೇಜಿನ ಲೆಕ್ಚರರ್​ರೊಬ್ಬರ ಮಗನ ಕಾಮಪುರಾಣ ಸುದ್ದಿ. ತನ್ನ ಲೆಕ್ಚರರ್​ನನ್ನು ನೋಡೋಕೆ ಮನೆ ಬಂದ ವಿದ್ಯಾರ್ಥಿಯನ್ನೇ ಮಗ ಕ್ಯಾಚ್ ಹಾಕಿದ್ದಾನೆ.

ಅಲ್ಲದೇ ಬಣ್ಣ-ಬಣ್ಣದ ಮಾತುಗಳಿಂದ ತನ್ನ ತಾಯಿಯ ವಿದ್ಯಾರ್ಥಿಯನ್ನು ಪ್ರೇಮಪಾಶಕ್ಕೆ ಬೀಳಿಸಿಕೊಂಡು ಮಾಡಬಾರದನೆಲ್ಲ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು...ಬೆಂಗಳೂರಿನ ಕಾಲೇಜ್‌ವೊಂದರ ಲೆಕ್ಚರರ್​ರೊಬ್ಬರ ಮಗ ಚಂದನ್‌ ಎನ್ನುವಾತ ಮದ್ವೆಯಾಗುವುದಾಗಿ ನಂಬಿಸಿ ತನ್ನ ಕಾಮದ ತೀಟೆ ತೀರಿಸಿಕೊಂಡು ಇದೀಗ ಹೊಸ ವರಸೆ ಬದಲಿಸಿದ್ದಾನೆ.

ಗಂಡ ಇದ್ರೂ ಮತ್ತೊಬ್ಬನ ಸಂಗ: ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪತ್ನಿ-ಪ್ರಿಯಕರನ ಲೈಫೇ ಕ್ಲೋಸ್‌..! 

ಈ ಹಿನ್ನೆಲೆಯಲ್ಲಿ ಯುವತಿ  ನ್ಯಾಯಕ್ಕಾಗಿ ವಿದ್ಯಾರಣ್ಯಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಇದರ ಮೇರೆಗೆ ಲೆಕ್ಟರರ್ ಪತ್ರ ಚಂದನ್ ಎನ್ನುವಾತನನ್ನು ಪೊಲೀಸ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವಿದ್ಯಾರ್ಥಿನಿಯ ಆರೋಪ
ಚಂದನ್​ ತಾಯಿ ಬೆಂಗಳೂರಿನ ಕಾಲೇಜೊಂದರ ಲೆಕ್ಚರರ್. ಆ ಯುವತಿಯೂ ಅದೇ ಕಾಲೇಜಿನ ವಿದ್ಯಾರ್ಥಿನಿ. ಲೆಕ್ಚರರ್​ನನ್ನು ನೋಡೋಕೆ ಎಂದು ವಿದ್ಯಾರ್ಥಿನಿ ಮನೆಗೆ ಬಂದ ವೇಳೆ ಚಂದನ್​ ಪರಿಚಯವಾಗಿತ್ತು. 2018ರಲ್ಲಿ ಇವರಿಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿಗೆ ತಿರುಗಿತ್ತು. 

ಬಳಿಕ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಅಲ್ಲದೇ  ಮದುವೆಯಾಗುವುದಾಗಿ ನಂಬಿಸಿದ್ದ ಚಂದನ್​, ಯುವತಿ ಜತೆ ಮೂವರು ವರ್ಷಗಳಿಂದ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದ. ಎರಡು ಬಾರಿ ಗರ್ಭಿಣಿಯಾದರೂ ಬಲವಂತವಾಗಿ ಅಬಾರ್ಷನ್​ ಮಾಡಿಸಿದ್ದಾನೆ. ಅಲ್ಲದೆ ಮದುವೆಗಾಗಿ 5-6ರಿಂದ ಲಕ್ಷ ಹಣವನ್ನೂ ಪಡೆದಿದ್ದ. ಇದೀಗ ಮದುವೆ ಆಗಲ್ಲ ಎಂದು ವಂಚಿಸಿದ್ದಾನೆ ಎಂದು ಸಂತ್ರಸ್ತೆ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.