Asianet Suvarna News Asianet Suvarna News

ಧಾರವಾಡ: ಮಹಿಳೆಗೆ ಲೈಂಗಿಕ ಕಿರುಕುಳ, ಕಾಂಗ್ರೆಸ್‌ ಮುಖಂಡನ ಬಂಧನ

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡ ಮನೋಜ ಕರ್ಜಗಿ ಬಂಧನ

Congress Leader Arrested For Sexual Harassment of Woman in Dharwad grg
Author
First Published Sep 18, 2022, 10:46 AM IST

ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಸೆ.18):  ಯುವತಿಯ ಜೊತೆ ಅಸಭ್ಯವಾಗಿ ನಡೆದುಕೊಂಡ ಹಿನ್ನಲೆ ಕಾಂಗ್ರೆಸ್ ಮುಖಂಡನೊಬ್ಬ ಅಂದರ್‌ ಆಗಿದ್ದಾನೆ. ಹೌದು, ಧಾರವಾಡದಲ್ಲಿ ವಿದ್ಯಾನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಲೇ ಮೋರ್ಜಾ ಸ್ಪಾ ದಲ್ಲಿ ನಿನ್ನೆ(ಶನಿವಾರ) ಘಟನೆ ನಡೆದಿದೆ. ಇನ್ನು ಕಾಂಗ್ರೆಸ್ ಮುಖಂಡ ಮನೋಜ್ ಖರ್ಜಿಗಿ ಎಂಬುವನು ಸ್ಪಾ ದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬಳ ಜೊತೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಎಂದು ಯುವತಿ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. 

Bengaluru Crime News: ಮೋಜು ಮಸ್ತಿಗಾಗಿ ಬೈಕ್ ಕದಿಯುತ್ತಿದ್ದ ಗ್ಯಾಂಗ್ ಬಂಧನ

ಇನ್ನು ಕಳೆದ 20 ವರ್ಷದಿಂದ ಸ್ಪಾ ನಡೆಸಿಕೊಂಡು ಹೋಗುತ್ತಿದ್ದ ಮನೋಜ್ ಖರ್ಜಗಿ ಕೆಲಸಕ್ಕೆ ಅಂತ ಯುವತಿಯೊಬ್ಬಳನ್ನ ತೆಗೆದುಕೊಂಡಿರುತ್ತಾನೆ. ಆದರೆ ನಿನ್ನೆ ಮಧ್ಯಾಹ್ನದ ಸಮಯದಲ್ಲಿ ಸ್ಪಾ ಸ್ವಚ್ಚತೆಯಿಂದ ಇಟ್ಡುಕೊಂಡಿಲ್ಲ ಅಂತ ಗರಂ ಆಗಿ ಯುವತಿಯನ್ನು ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ. ಇನ್ನು ಹಿಂದಿನಿಂದ ಬಂದು ನನ್ನನ್ನ ಗಟ್ಡಿಯಾಗಿ ತಬ್ಬಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನ ಮಾಡಿದ್ದಾನೆ ಎಂದು ಮನೋಜ್ ಖರ್ಜಿಗಿ ಮೇಲೆ‌ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ಇನ್ನು ದೂರು ದಾಖಲಿಸಿ ಸುಮ್ಮನಾಗದ ಯುವತಿ ತನ್ನ ಸಹಚರರನ್ನ ಕರೆಸಿ ಸ್ಪಾಗೆ ನುಗ್ಗಿಸಿ ಮನೋಜ್ ಖರ್ಜಿಗಿ ಮತ್ತು ಆತನ  ಸಹುದ್ಯೋಗಿಗೆ ಹಿಗ್ಗಾ ಥಳಿಸಿದ್ದಾರೆ. ನಂತರ ಓರ್ವನಿಗೆ ಚಾಕು ಇರಿತ ಕೂಡಾ ಆಗಿದೆ. ಬಳಿಕ ಓರ್ವನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಇನ್ನು ಯುವತಿ ಕಡೆಯಿಂದ ಪ್ರಕರಣವನ್ನ ದಾಖಲಿಸಿಕೊಂಡ ಪೋಲಿಸರು ಕಾಂಗ್ರೆಸ್ ಮುಖಂಡ ಮನೋಜನನ್ನ ಬಂಧಿಸಿದ್ದಾರೆ. 

ಇನ್ನು ಯುವತಿಯ ದೂರಿನ ಆಧಾರದ ಮೇಲೆ ಮನೋಜ್ ಖರ್ಜಿಗಿ ಅವರನ್ನ‌ ಬಂಧಿಲಾಗಿದೆ. ನಂತರ ಮನೋಜ್ ನ ಸ್ಪಾ ಸಿಬ್ಬಂದಿ ಆಯಾನ್ ನಧಾಪ್ ಅವನು ಕೂಡಾ ಸ್ಪಾ ಮೇಲೆ ಏಕಾಏಕಿ ನುಗ್ಗಿ ದಾಂಧಲೆ ಮಾಡಿದ ಹಲ್ಲೆ ಮಾಡಿದ ಮೂವರ ವಿರುದ್ಧ ವಿದ್ಯಾಗಿರಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕಡೆಯವರಾದ ಮನೋಜ್ ಗೂಂಡೂರು, ಆನಂದ‌ ತಳವಾರ ಉದಯ ಕೆಲಗೇರಿ. ಮೂವರನ್ನ ಸದ್ಯ ವಿದ್ಯಾಗಿರಿ ಪೋಲಿಸರು ಬಂಧಿಸಿದ್ದಾರೆ. ಎರಡೂ ಕಡೆ ಪ್ರಕರಣವನ್ನ ದಾಖಲಿಸಿಕೊಂಡ ವಿದ್ಯಾಗಿರಿ ಪೋಲಿಸರು ಸದ್ಯ ನಾಲ್ವರನ್ನ ಅಂದರ್‌ ಮಾಡಿದ್ದಾರೆ. 

Follow Us:
Download App:
  • android
  • ios