Bengaluru Crime News: ಮೋಜು ಮಸ್ತಿಗಾಗಿ ಬೈಕ್ ಕದಿಯುತ್ತಿದ್ದ ಗ್ಯಾಂಗ್ ಬಂಧನ

Gang of Bike Thieves Arrested: ಮೋಜು- ಮಸ್ತಿಗಾಗಿ ಬೈಕ್​ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಎರಡು ಗ್ಯಾಂಗ್​ಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ 
 

Gang of Bike Thieves arrested in Bengaluru mnj

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್‌ ಬೆಂಗಳೂರು 

ಬೆಂಗಳೂರು (ಸೆ. 17): ಮೋಜು- ಮಸ್ತಿಗಾಗಿ ಬೈಕ್​ಗಳನ್ನು ಕದ್ದು (Bike Theft) ಮಾರಾಟ ಮಾಡುತ್ತಿದ್ದ ಎರಡು ಗ್ಯಾಂಗ್​ಗಳನ್ನು ಬೆಂಗಳೂರು (Bengaluru) ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಧರ್ಮಪುರಿಯಲ್ಲಿ ಫಾರೆಸ್ಟ್ ಅಧಿಕಾರಿಯಾಗಿರುವ ಜಯಬಾಲ್ ಎಂಬುವರಿಗೆ ಸೇರಿದ ರಾಯಲ್ ಎನ್ ಫೀಲ್ಡ್ ಸೇರಿದಂತೆ 29 ಬೈಕುಗಳನ್ನ ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಶೌನ್​, ರಂಜಿತ್ ಕುಮಾರ್, ಶಾಹೇಂಶಾ ಹಾಗೂ ಶಿವ ಬಂಧಿತರು. 

ಬಂಧಿತರಿಂದ 15 ಲಕ್ಷ ಮೌಲ್ಯದ ಒಂದು ಆಟೋ ಸೇರಿ 29 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕದ್ದ ಬೈಕ್​ಗಳನ್ನು ಆರೋಪಿಗಳು ತಮಿಳುನಾಡಿನ (Tamil Nadu) ತಿರುವಣ್ಣಾಮಲೈ ಹಾಗೂ  ಗ್ರಾಮಾಂತರ ಭಾಗದ  ವಿವಿಧೆಡೆ ಮಾರಾಟ ಮಾಡುತ್ತಿದ್ದರು. ಇನ್ನು ಬಂಡೇಪಾಳ್ಯ ಪೊಲೀಸರು ಸಹ ಇಬ್ಬರು ಅಂತಾರಾಜ್ಯ ಬೈಕ್​ ಕಳ್ಳರನ್ನ ಬಂಧಿಸಿದ್ದು, ಅವರಿಂದ 15 ಲಕ್ಷ ಮೌಲ್ಯದ 9 ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಸೂರ್ಯನಗರ, ಹೆಬ್ಬಗೋಡಿ , ಬಂಡೆಪಾಳ್ಯ, ಎಸ್ ಆರ್ ನಗರ ಸೇರಿದಂತೆ ಹಲವೆಡೆ ವಾಹನಗಳನ್ನ ಕದಿಯುತ್ತಿದ್ದರು. ಅವುಗಳನ್ನು ಗ್ರಾಮಾಂತರ ಭಾಗದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. 

ಬೈಕ್‌ ಕಳ್ಳರ ಜಾಲ ಭೇದಿಸಿದ ರಾಯಚೂರು ಪೊಲೀಸ್ರು, ಖದೀಮರ ಖತರ್ನಾಕ್ ಐಡಿಯಾ ಕೇಳಿ ಪೊಲೀಸರೇ ಶಾಕ್

ಶಿವಮೊಗ್ಗ: ನಕಲಿ ಇಟ್ಟು ಅಸಲಿ ಚಿನ್ನ ಕದ್ದ ಮಹಿಳೆಯರು:  ಬುರ್ಖಾ ಧರಿಸಿ ಬಂದಿದ್ದ ಇಬ್ಬರು ಮಹಿಳೆಯರು ಆಭರಣದ ಅಂಗಡಿಯಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು ನಕಲಿ ಬಂಗಾರ ಇರಿಸಿ, ಅಸಲಿ ಬಂಗಾರದ ಒಡವೆ ಕಳ್ಳತನ ಮಾಡಿರುವ ಘಟನೆ ನಡೆದಿದೆ.ಗಾಂಧಿ ಬಜಾರ್‌ ಆಭರಣದ ಮಳಿಗೆಯೊಂದರಲ್ಲಿ ಘಟನೆ ಸಂಭವಿಸಿದ್ದು, ಅಂಗಡಿಯಲ್ಲಿ ಪರಿಶೀಲನೆ ಮಾಡುತ್ತಿದ್ದಾಗ ಟ್ರೇನಲ್ಲಿ ನಕಲಿ ಬಂಗಾರದ ಒಡವೆಗಳು ಇರುವುದು ಗೊತ್ತಾಗಿದೆ. ಸಿಸಿಟಿವಿಯನ್ನು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಆಭರಣ ಕದ್ದ ಮಹಿಳೆಯರೊಂದಿಗೆ ಬಂದಿದ್ದ ಓರ್ವ ಪುರುಷ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಏನಿತ್ತು ಸಿಸಿಟಿವಿಯಲ್ಲಿ?: ಆಗಸ್ಟ್‌ 20ರ ಮಧ್ಯಾಹ್ನ ಘಟನೆ ಸಂಭವಿಸಿದೆ. ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಅಂಗಡಿಗೆ ಬಂದಿದ್ದರು. ಒಂದು ಚಿನ್ನದ ಉಂಗುರ ಮತ್ತು ಒಂದು ಜೊತೆ ಕವಿಯೋಲೆ ಖರೀದಿಸಿದ್ದರು. ಈ ವೇಳೆ ಮಾಲೀಕನ ಗಮನವನ್ನು ಬೇರೆಡೆ ಸೆಳೆದು ಟ್ರೇನಲ್ಲಿದ್ದ ಒಂದು ಚಿನ್ನದ ಉಂಗುರ ಮತ್ತು ಎರಡು ಜೊತೆ ಕಿವಿಯೋಲೆಗಳನ್ನು ಕದ್ದಿದ್ದಾರೆ. 

ಚಿಕ್ಕಬಳ್ಳಾಪುರ: ಕಾರಿನಲ್ಲಿ ಬಂದು ಬೈಕ್‌ ಕಸಿದು ಪರಾರಿಯಾದ ಖದೀಮರು

ಆ ಜಾಗಕ್ಕೆ ತಾವು ತಂದಿದ್ದ ನಕಲಿ ಬಂಗಾರದ ಉಂಗುರ ಮತ್ತು ಕಿವಿಯೋಲೆಗಳನ್ನು ಇಟ್ಟು ತೆರಳಿದ್ದಾರೆ. ಕಳ್ಳರು 11 ಸಾವಿರ ರು. ಮೌಲ್ಯದ ಬಂಗಾರ ಖರೀದಿಸಿ, ಸುಮಾರು 85 ಸಾವಿರ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios