Shivamogga: ವಾಟ್ಸಪ್‌ನಲ್ಲಿ ಪಾಕಿಸ್ತಾನ ಧ್ವಜ ಚಿತ್ರ ಪೋಸ್ಟ್: ವಿದ್ಯಾರ್ಥಿ ವಿರುದ್ಧ ದೂರು
* ಈ ಸಂಬಂಧ ಪೊಲೀಸರಿಗೆ ದೂರು ನೀಡಿದ ಕಾಲೇಜು
* ಈ ಬಗ್ಗೆ ದೃಢಪಡಿಸಿದ ಕುವೆಂಪು ವಿವಿ ಕುಲಸಚಿವೆ ಜಿ.ಅನುರಾಧ
* ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯ
ಶಿವಮೊಗ್ಗ(ಮಾ.10): ನಗರದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಪ್(WhatsApp) ಗ್ರೂಪ್‌ವೊಂದರಲ್ಲಿ ತಿಂಗಳ ಹಿಂದೆ ವಿದ್ಯಾರ್ಥಿಯೊಬ್ಬ ಪಾಕಿಸ್ತಾನ(Pakistan) ಧ್ವಜದ(National Flag) ಚಿತ್ರವನ್ನು ಪೋಸ್ಟ್ ಮಾಡಿದ್ದು, ಈ ಸಂಬಂಧ ಕಾಲೇಜು ವತಿಯಿಂದ ಮಂಗಳವಾರ ಸಿಇಎನ್ ಪೊಲೀಸರಿಗೆ(Police) ದೂರು ನೀಡಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಕುವೆಂಪು ವಿವಿ ಕುಲಸಚಿವೆ ಜಿ.ಅನುರಾಧ ಈ ಬಗ್ಗೆ ದೃಢಪಡಿಸಿದರು. ತಿಂಗಳ ಹಿಂದೆ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳ(Students) ವಾಟ್ಸಪ್ ಗ್ರೂಪ್‌ನಲ್ಲಿ ವಿಷಯವೊಂದರ ಕುರಿತು ಚರ್ಚೆ ನಡೆಯುತ್ತಿತ್ತು. ಈ ವೇಳೆ ಭಾರತದ ಧ್ವಜದ(National Flag of India) ಚಿತ್ರ ಪೋಸ್ಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ತಕ್ಷಣವೇ ಇನ್ನೊಬ್ಬ ವಿದ್ಯಾರ್ಥಿ ಪಾಕಿಸ್ತಾನದ ಧ್ವಜದ ಚಿತ್ರ ಪೋಸ್ಟ್ ಮಾಡಿದ. ಈ ಕುರಿತು ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದ ಎಬಿವಿಪಿ(ABVP) ಕಾರ್ಯಕರ್ತರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಆದರೆ ಈ ಸಂಬಂಧ ಯಾವುದೇ ಕ್ರಮ ಜರುಗಿರಲಿಲ್ಲ ಎಂದರು.
ಕೆಂಪುಕೋಟೆ ಮೇಲೆ ಕೇಸರಿ ಧ್ವಜ: ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡುವಂತೆ ಡಿಕೆಶಿ ಆಗ್ರಹ
ತಿಂಗಳು ಕಳೆದರೂ ಆರೋಪಿಗಳ(Accused) ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದರು. ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ(Treason) ಪ್ರಕರಣ ದಾಖಲಿಸುವಂತೆ ಕಾಲೇಜು ಪ್ರಾಂಶುಪಾಲರಾದ ವಾಗ್ದೇವಿ ಅವರಿಗೆ ಒತ್ತಾಯಿಸಿದ್ದರು. ಇದಾದ ಬಳಿಕ ವಿವಿ ಸೂಚನೆ ಮೇರೆಗೆ ಕಾಲೇಜು ಆಡಳಿತ ಮಂಡಳಿಯವರು ಸಿಇಎನ್ ಪೊಲೀಸರಿಗೆ ದೂರು ನೀಡಿದರು. ಈ ಸಂಬಂಧ ವರದಿ ಸಿದ್ಧಪಡಿಸಲು ಕಾಲೇಜಿನಲ್ಲಿ ಸಮಿತಿಯೊಂದನ್ನು ಕೂಡ ರಚಿಸಲಾಗಿದೆ ಎಂದು ವಿವಿ ಕುಲಸಚಿವೆ ಹೇಳಿದರು.
ಕರ್ನಾಟಕದಲ್ಲೇ ಹೆಚ್ಚು ದೇಶದ್ರೋಹ ಕೇಸ್ ದಾಖಲು..!
ನವದೆಹಲಿ: 2019ರಲ್ಲಿ ದೇಶದ ವಿವಿಧ ಭಾಗಗಳಲ್ಲಿ 93 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು, 96 ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಕರ್ನಾಟಕದಲ್ಲಿ ದೇಶದ್ರೋಹದ ಅತ್ಯಧಿಕ ಕೇಸ್‌ಗಳು (22 ಪ್ರಕರಣ) ದಾಖಲಾಗಿದ್ದು 18 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಖಾತೆ ರಾಜ್ಯಸಚಿವ ಜಿ.ಕೃಷ್ಣ ರೆಡ್ಡಿ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದರು.
‘ದೇಶದ್ರೋಹಿ’ ಸಿಧು ಮೇಲೆ ಕಾಂಗ್ರೆಸ್ ಕ್ರಮ ಏನು?: ಬಿಜೆಪಿ ಪ್ರಶ್ನೆ
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, 2019ರಲ್ಲಿ ದೇಶದ್ರೋಹ ಪ್ರಕರಣಗಳಿಗೆ ಸಂಬಂಧಿಸಿದಂತೆ 76 ಜನರ ವಿರುದ್ಧ ಆರೋಪಪಟ್ಟಿ ದಾಖಲಿಸಿಕೊಳ್ಳಲಾಗಿದ್ದು, 29 ಮಂದಿ ಖುಲಾಸೆಗೊಂಡಿದ್ದಾರೆ. ಇನ್ನು ಅಸ್ಸಾಂನಲ್ಲಿ 17, ಜಮ್ಮು- ಕಾಶ್ಮೀರದಲ್ಲಿ 11, ಉತ್ತರ ಪ್ರದೇಶದಲ್ಲಿ 10 ಕೇಸ್‌ಗಳು ದಾಖಲಾಗಿವೆ ಎಂದು ತಿಳಿಸಿದ್ದರು.
ಮೋದಿ ಅಧಿಕಾರಕ್ಕೇರಿದ ನಂತರ 800 ದೇಶದ್ರೋಹ ಪ್ರಕರಣ ದಾಖಲು
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ 800 ಜನರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದ್ದು, ಅದರಲ್ಲಿ 4 ಕ್ಕೆ ಮಾತ್ರ ಚಾಜ್‌ರ್‍ಶೀಟ್ ಹಾಕಿದ್ದಾರೆ. ಇಷ್ಟರ ಮಟ್ಟಿಗೆ ಯಾವ ಕಾಲದಲ್ಲೂ ದೇಶದ್ರೋಹ ಪ್ರಕರಣಗಳು ದಾಖಲಾಗಿರಲಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದರು.
ಕಾಂಗ್ರೆಸ್ ಭವನದಲ್ಲಿ ಫೆ.16 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಜನರ ಧ್ವನಿ ಅಡಗಿಸುವ ನಿಟ್ಟಿನಲ್ಲಿ ಆಯುಧವಾಗಿ ದೇಶದ್ರೋಹ ಪ್ರಕರಣವನ್ನು ಕೇಂದ್ರ ಸರ್ಕಾರ ಬಳಸುತ್ತಿದೆ. ಪರಿಸರವಾದಿ ದಿಶಾ ರವಿಯನ್ನು ದೆಹಲಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಕರ್ನಾಟಕ ಪೊಲೀಸರ ಅನುಮತಿ ಪಡೆಯದೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಮ್ಮ ರಾಜ್ಯದವರನ್ನು ಸರ್ಕಾರ ಅಥವಾ ಪೊಲೀಸರ ಅನುಮತಿ ಪಡೆಯದೇ ಬಂಧಿಸಿರುವುದು ದುರಂತ ಎಂದು ಕಿಡಿಕಾರಿದ್ದರು.