‘ದೇಶದ್ರೋಹಿ’ ಸಿಧು ಮೇಲೆ ಕಾಂಗ್ರೆಸ್ ಕ್ರಮ ಏನು?: ಬಿಜೆಪಿ ಪ್ರಶ್ನೆ
* ದೇಶದ್ರೋಹಿ ಎಂದು ಸ್ವತಃ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರಿಂದಲೇ ಗಂಭೀರ ಆರೋಪ
* ‘ದೇಶದ್ರೋಹಿ’ ಸಿಧು ಮೇಲೆ ಕಾಂಗ್ರೆಸ್ ಕ್ರಮ ಏನು?: ಬಿಜೆಪಿ ಪ್ರಶ್ನೆ
ನವದೆಹಲಿ(ಸೆ.20): ದೇಶದ್ರೋಹಿ ಎಂದು ಸ್ವತಃ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರಿಂದಲೇ ಗಂಭೀರ ಆರೋಪಕ್ಕೆ ತುತ್ತಾಗಿರುವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್‌ಸಿಂಗ್ ಸಿಧು ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ಪ್ರಶ್ನಿಸಿದೆ.
ಸಿಂಗ್ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ ಪ್ರಕಾಶ್ ಜಾವಡೇಕರ್ ‘ಅಮರೀಂದರ್ ಸಿಂಗ್ ಮಾಡಿರುವ ಆರೋಪ ಅತ್ಯಂತ ಗಂಭೀರವಾದುದು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ವಿರುದ್ಧವೇ ಮುಖ್ಯಮಂತ್ರಿಗಳೇ ಇಂಥ ಆರೋಪ ಮಾಡಿದ್ದಾರೆ.
ಆದರೆ ಕಾಂಗ್ರೆಸ್ ಮೌನಕ್ಕೆ ಶರಣಾಗಿದೆ. ಸೋನಿಯಾ, ರಾಹುಲ್, ಪ್ರಿಯಾಂಕಾ ಕೂಡಾ ಮೌನಕ್ಕೆ ಶರಣಾಗಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಪ್ರತಿಕ್ರಿಯೆ ನೀಡಬೇಕು ಮತ್ತು ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ’ ಎಂದು ಹೇಳಿದ್ದಾರೆ.