Asianet Suvarna News Asianet Suvarna News

ರಾಷ್ಟ್ರ ರಾಜಧಾನಿಯಲ್ಲಿ ಭಯಾನಕ ಘಟನೆ: ಯುವಕನನ್ನು 60 ಬಾರಿ ಇರಿದು ಕೊಂದ ಕಿರಾತಕರು

25 ವರ್ಷದ ಯುವಕನನ್ನು ಮೂವರು ದುಷ್ಕರ್ಮಿಗಳು ಬರೋಬ್ಬರಿ 6 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಭೀಭತ್ಸ ಕೃತ್ಯದ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ.

cold blooded murder in National Capital: Youth stabbed to death by three akb
Author
First Published Oct 2, 2022, 6:14 PM IST

ನವದೆಹಲಿ: 25 ವರ್ಷದ ಯುವಕನನ್ನು ಮೂವರು ದುಷ್ಕರ್ಮಿಗಳು ಬರೋಬ್ಬರಿ 6 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಭೀಭತ್ಸ ಕೃತ್ಯದ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬೆಚ್ಚಿ ಬೀಳಿಸುವಂತಿದೆ. ಕೊಲೆಯಾದ ಯುವಕನನ್ನು ಮನೀಶ್ ಎಂದು ಗುರುತಿಸಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ ಎಂದು ವೈದ್ಯರು ಘೋಷಿಸಿದ್ದರು. 

ಈಶಾನ್ಯ ದೆಹಲಿಯ ಸುಂದರ್ ನಗರ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳು ಆತನ ಸುತ್ತಲೂ ನಿಂತು ಒಂದೇ ಸಮನೆ ಚಾಕುವಿನಿಂದ 60 ಬಾರಿ ಇರಿದಿದ್ದಾರೆ. ಮೃತ ಯುವಕ ಹಾಗೂ ಹೀಗೆ ಭಯಾನಕವಾಗಿ ಹತ್ಯೆ ಮಾಡಿದ ಮೂವರು ಕೂಡ ಒಂದೇ ಪ್ರದೇಶದವರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮ್ಮದ್ ಅಲಂ, ಮೊಹಮ್ಮದ್ ಬಿಲಾಲ್, ಮೊಹಮ್ಮದ್ ಫೈಜನ್ ಎಂದು ಗುರುತಿಸಲಾಗಿದೆ. 

 

ಸುಂದರ್‌ ನಗರದ ಬ್ಲಾಕ್ 6 (Sundar nagar Block 6) ರಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಹತ್ಯೆಯಾದ ಯುವಕನ ಕುಟುಂಬದವರು ಹೇಳುವಂತೆ ವರ್ಷದ ಹಿಂದೆ ನಡೆದ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ ಆರೋಪಿಗಳು ಮೃತ ಮನೀಶ್ ಜೊತೆ ವೈರತ್ವವನ್ನು ಹೊಂದಿದ್ದರು. ಆ ಪ್ರಕರಣದಲ್ಲಿ ಮನೀಶ್ ಅನ್ನು ಅಮಾನುಷವಾಗಿ ಥಳಿಸಲಾಗಿತ್ತು. ಅಲ್ಲದೇ ಚಾಕುವಿನಿಂದ ಮನೀಷ್ ದೇಹದ ಮೇಲೆ ಗುರುತು ಮಾಡಿ ಹೋಗಿದ್ದರು. ನಂತರ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಹೇಳಿಕೆ ಆಧರಿಸಿ ಪೊಲೀಸರು(Police) ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೇ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

 

Bengaluru Crime News: 'ಏನೋ‌ ಮಗ, ನೀರು ಕೊಡೋ' ಅಂದಿದ್ದಕ್ಕೆ ಯುವಕನ ಕೊಲೆ!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್28 ರಂದು ಕೋರ್ಟ್‌ನಲ್ಲಿ ವಿಚಾರಣೆ ಇತ್ತು. ಹೀಗಾಗಿ ಮನೀಶ್ (Manish) ಕುಟುಂಬ ಸದಸ್ಯರ ಮೇಲೆ ವಿರೋಧಿ ಬಣದವರು ಕೇಸು ಹಿಂಪಡೆಯುವಂತೆ ಭಾರಿ ಒತ್ತಡ ಹೇರಿದ್ದರು. ಕೇಸು ಹಿಂಪಡೆದಲ್ಲಿ ಅವರು ಆರಾಮವಾಗಿ ಓಡಾಡುತ್ತಿರಬಹುದು ಕೋರ್ಟ್(Court) ಕೇಸ್ ಅಂತ ಅಲೆಯಬೇಕಾಗಿಲ್ಲ ಎಂದು ಅವರು ಕೇಸು ಹಿಂಪಡೆಯಲು ಭಾರಿ ಒತ್ತಾಯಿಸಿದ್ದರು. ಆದರೆ ಮನೀಶ್ ಮಾತ್ರ ಕೇಸ್ ಹಿಂಪಡೆಯಲು ಯಾವುದೇ ಕಾರಣಕ್ಕೂ ಒಪ್ಪಿರಲಿಲ್ಲ. ಅಲ್ಲದೇ ಕೋರ್ಟ್‌ ಮುಂದೆ ಈತನೇ ಹಲ್ಲೆ ಮಾಡಿದವ ಎಂದು ಸಾಕ್ಷಿ ಹೇಳಿದ್ದ. ಇದು ಆ ದುಷ್ಕರ್ಮಿಗಳನ್ನು ಮತ್ತಷ್ಟು ಉರಿಯುವಂತೆ ಮಾಡಿತ್ತು. ಹೀಗಾಗಿ ಕುಪಿತಗೊಂಡ ಅವರು ಆತನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಮನೀಶ್ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಕೊಲೆಯ ಹಿನ್ನೆಲೆಯಲ್ಲಿ ಸುಂದರ್‌ ನಗರದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ ಘಟನೆಯ ಬಳಿಕ ಮನೀಶ್ ಕುಟುಂಬದವರು ಕೊಲೆಗಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ (Protest) ನಡೆಸಿದ ಹಿನ್ನೆಲೆಯಲ್ಲಿ ಅಲ್ಲಿ ವ್ಯಾಪಕ ಬಂದೋಬಸ್ತ್ ನಡೆಸಲಾಗಿದೆ.

Belagavi; ಹಳೆ ವೈಷಮ್ಯ ಹಾಗೂ ಹವಾ ಮೆಂಟೇನ್ ಮಾಡಲು ಜೈಲಿಂದ ಹೊರ ಬಂದಿದ್ದವನ ಬರ್ಬರ ಹತ್ಯೆ!

Follow Us:
Download App:
  • android
  • ios