ಮದುವೆ ಚರ್ಚೆ ವಾಗ್ವಾದಕ್ಕೆ ತಿರುಗಿದ ಪರಿಣಾಮ ಯುವಕನೊಬ್ಬ ತನ್ನ ಲಿವ್-ಇನ್‌ ಸಂಗಾತಿಯ ಗುಪ್ತಾಂಗಕ್ಕೆ ಸ್ಯಾನಿಟೈಸರ್‌ ಹಾಕಿ ಬೆಂಕಿ ಹಚ್ಚಿದ್ದಲ್ಲದೆ, ಲೋಹದ ಬಾಟಲಿಯಿಂದ ಆಕೆಯ ತಲೆಗೆ ಹೊಡೆದು ಸತತ 3 ದಿನಗಳ ಕಾಲ ಚಿತ್ರಹಿಂಸೆ

ಗುರುಗ್ರಾಮ: ಮದುವೆ ಚರ್ಚೆ ವಾಗ್ವಾದಕ್ಕೆ ತಿರುಗಿದ ಪರಿಣಾಮ ಯುವಕನೊಬ್ಬ ತನ್ನ ಲಿವ್-ಇನ್‌ ಸಂಗಾತಿಯ ಗುಪ್ತಾಂಗಕ್ಕೆ ಸ್ಯಾನಿಟೈಸರ್‌ ಹಾಕಿ ಬೆಂಕಿ ಹಚ್ಚಿದ್ದಲ್ಲದೆ, ಲೋಹದ ಬಾಟಲಿಯಿಂದ ಆಕೆಯ ತಲೆಗೆ ಹೊಡೆದು ಸತತ 3 ದಿನಗಳ ಕಾಲ ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಜೀವನ್ಮರಣ ಹೋರಾಟದಲ್ಲಿರುವ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗಿದ್ದೇನು?:

ತ್ರಿಪುರಾ ಮೂಲದ ಯುವತಿ ಮತ್ತು ಆರೋಪಿ ಶಿವಂ (19) ಕಳೆದ ಸೆಪ್ಟೆಂಬರ್‌ನಲ್ಲಿ ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾಗಿದ್ದರು. ಕೆಲವೇ ದಿನಗಳಲ್ಲಿ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು. ಇತ್ತೀಚೆಗೆ ಅವರ ವಿವಾಹದ ಕುರಿತು ಎರಡೂ ಕುಟುಂಬಗಳು ಮಾತುಕತೆ ಶುರು ಮಾಡಿದ್ದವು. ಫೆ.19ರಂದು ಮದುವೆಯ ವಿಚಾರಕ್ಕೆ ಇಬ್ಬರ ನಡುವೆ ತಡರಾತ್ರಿ ವರೆಗೆ ಚರ್ಚೆ ನಡೆದಿದೆ. ಅದು ಜಗಳಕ್ಕೆ ತಿರುಗಿದ ಬಳಿಕ ಸಿಟ್ಟಿಗೆದ್ದ ಯುವಕ ಆಕೆಯ ಗುಪ್ತಾಂಗಕ್ಕೆ ಸ್ಯಾನಿಟೈಸರ್‌ ಸುರಿದು ಬೆಂಕಿ ಹಚ್ಚಿದ್ದಾನೆ.

ತಲೆಗೆ ಹೊಡೆದು, ಪೀಠೋಪಕರಣದಿಂದ ಹಲ್ಲೆ

ನಂತರ ಸತತ 3 ದಿನಗಳ ಕಾಲ ಲೋಹದ ಬಾಟಲಿಯಿಂದ ತಲೆಗೆ ಹೊಡೆದು, ಪೀಠೋಪಕರಣದಿಂದ ಹಲ್ಲೆ ಮಾಡಿ, ಚಾಕುವಿನಿಂದ ಇರಿಯಲೂ ಮುಂದಾಗಿದ್ದಾನೆ. ನಂತರ ಯುವತಿ ತನ್ನನ್ನು ರಕ್ಷಿಸುವಂತೆ ತಾಯಿಗೆ ಮಾಹಿತಿ ನೀಡಿದ್ದಾಳೆ. ತಾಯಿ ಪೊಲೀಸರಿಗೆ ದೂರು ನೀಡಿದ ಬಳಿಕ ಯುವತಿಯನ್ನು ರಕ್ಷಿಸಿ ದೆಹಲಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.