Belagavi; ಹಳೆ ವೈಷಮ್ಯ ಹಾಗೂ ಹವಾ ಮೆಂಟೇನ್ ಮಾಡಲು ಜೈಲಿಂದ ಹೊರ ಬಂದಿದ್ದವನ ಬರ್ಬರ ಹತ್ಯೆ!

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತನ ಕೊಲೆಗೆ ಸ್ಕೇಚ್ ಹಾಕಿ ಜೈಲು ಸೇರಿ ಬೇಲ್ ಮೂಲಕ ಹೊರಬಂದು ಹುಟ್ಟುಹಬ್ಬ ಆಚರಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಬರ್ಬರವಾಗಿ ಹತ್ಯೆಯಾದ ಚಿಕ್ಕೋಡಿಯ ಯುವಕನ ಕೊಲೆಗೆ ಸಂಬಂಧಿಸಿ 5 ಮಂದಿಯ ಬಂಧನವಾಗಿದೆ. 

birthday youth murder case 5 Accused Arrested arrested in chikkodi gow

ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್

ಚಿಕ್ಕೋಡಿ (ಸೆ.10): ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತನ ಕೊಲೆಗೆ ಸ್ಕೇಚ್ ಹಾಕಿ ನಾಡ ಪಿಸ್ತೂಲ್ ದಿಂದ ಫೈಯರ್ ಮಾಡಿ ಜೈಲು ಕಂಬಿ ಎನಿಸಿ ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದು ಹುಟ್ಟು ಹಬ್ಬ ಆಚರಿಸಿಕೊಂಡು ಗೆಳೆಯರಿಗೆ ಬರ್ತಡೆ ಪಾರ್ಟಿ ಕೊಡಲು ಹೋಗಿದ್ದಾತ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರ ಆರೋಪಿಗಳನ್ನು ಬಂಧಿಸಲಾಗಿದೆ. ರೌಡಿಸಂ ನಲ್ಲಿ ಹೆಸರು ಮಾಡಬೇಕು ಮತ್ತು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ.  ಜಗತ್ತಲ್ಲಿ ಯಾವ್ಯಾವುದೋ ಕಾಣರಕ್ಕೆ ಕೊಲೆ ಆಗುತ್ತಲೇ ಇರ್ತವೆ. ಅದರಲ್ಲೂ ಹೆಣ್ಣು, ಹೊಣ್ಣು ಮಣ್ಣಿಗೋಸ್ಕರವೇ ಹೆಣಗಳು ಬೀಳೋದು ಆದರೆ ಇಲ್ಲೊಂದು ಇನ್ನು ಸರಿಯಾಗಿ ಮೀಸೆ ಚಿಗುರದ ಯುವಕರ ಗುಂಪು ಹಳೆ ವೈಷ್ಯಮ್ಯಕ್ಕೆ ಹಾಗೂ ರೌಡಿಸಂ ನಲ್ಲಿ ಹವಾ ಮೆಂಟೇನ್ ಮಾಡಬೇಕು ಅಂತಾನೆ ಯುವಕನೋರ್ವನಿಗೆ ಚಟ್ಟ ಕಟ್ಟಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಸರ್ವಿಜಸ್ ರೋಡ್ ಬಳಿಸಿಕೊಂಡು  ಸೆ.4ರ ರಾತ್ರಿ ತನ್ನ ಬೈಕ್ ಮೇಲೆ ಮನೆಗೆ ತೆರಳುತ್ತಿದ್ದ ವಿನಾಯಕ ಹರಕೇರಿ (28) ಎಂಬ ಯುವಕನನ್ನ ಅಡ್ಡಗಟ್ಟಿದ್ದ ಐವರ ತಂಡ ಅವನ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿತ್ತು.

ತೀವ್ರವಾಗಿ ಹಲ್ಲೆ ಆಗಿದ್ದರಿಂದ ವಿನಾಯಕ ಸ್ಥಳದಲ್ಲಿಯೇ  ಸಾವನ್ನಪ್ಪಿದ್ದ ಸ್ಥಳಕ್ಕೆ ದಾವಿಸಿದ್ದ ಯಮಕನಮರಡಿ ಪೊಲೀಸರು ಸ್ಥಳ ಮಹಜರು  ನಡೆಸಿ  ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಘಟನೆ ನಡೆದು ಕೇವಲ ಐದು ದಿನಗಳಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಗುರವ್,ಈರಣ್ಣ ಹಿನ್ನಕ್ಕನವರ್,ಆದಿತ್ಯ ಗಣಾಚಾರಿ, ಮಹಾಂತೇಶ ಕರಗುಪ್ಪಿ, ಶಾನೂರ ನದಾಫ್ ಎಂಬ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. 

ಇನ್ನು ಕೊಲೆಯಾದ ವಿನಾಯಕ ಸಹ ಕಳೆದ 2 ವರ್ಷದ ಹಿಂದೆ ನಾಡಪಿಸ್ತೂಲಿನಿಂದ ಸತೀಶ್ ಜಾರಕಿಹೊಳಿ‌ ಆಪ್ತ ಭರಮಾ ಧುಪದಾಳೆ ಮೇಲೆ ಗುಂಡು ಹಾರಿಸಿ ಪರಾರಿಯಾಗಿ ಅದೇ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತನಾಗಿ ಬೇಲ್ ಮೇಲೆ ಹೊರಗಿದ್ದ. ಸದ್ಯ ಹಳೆ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿದೆ ಎನ್ನಲಾಗಿದ್ದು ಐವರನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.

ಕುಡಿತ ಬಿಡಿಸಲು ಯತ್ನಿಸಿದ್ದಕ್ಕೆ ಸಿಟ್ಟಿನಲ್ಲಿ ಪೋಷಕರು ಸೇರಿ 6 ಮಂದಿಗೆ ಚಾಕು ಇರಿದು, ಕಾರಿನ ಗಾಜು ಒಡೆದ!

ಬರ್ತಡೇ ಪಾರ್ಟಿ ಮುಗಿಸಿ ಹೋಗುತ್ತಿದ್ದಾಗ ಡೆತ್ ಆದ:
ವಿನಾಯಕ ತನ್ನ ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ಹೋಗ್ತಿದ್ದಾಗ ಆತನ ಬೈಕ್ ಅಡ್ಡಹಾಕಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.  ಇನ್ನೂ ಮದುವೆಯಾಗದ ಈ ವಿನಾಯಕ ಒಬ್ಬನೇ ಮಗನಿದ್ದು ಯಾವುದೇ ಕೆಲಸ ಕಾರ್ಯಗಳನ್ನ ಮಾಡುತ್ತಿರಲಿಲ್ಲ‌. ಇನ್ನೂ ಕಳೆದ ವರ್ಷ ಇದೇ ವಿನಾಯಕ ಇಡೀ ಜಿಲ್ಲೆಯಲ್ಲೇ ಮಾಡಬಾರದ ಕೆಲಸ ಮಾಡಿ ಸುದ್ದಿಯಾಗಿದ್ದ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತ ಭರಮಾ ದೂಪದಾಳೆ ಎಂಬುವವರ ಮೇಲೆ ನಾಡ ಪಿಸ್ತೂಲ್ ದಿಂದ ಪೈರಿಂಗ್ ಮಾಡಿ ಹತ್ಯೆಗೆ ಯತ್ನಿಸಿದ್ದ.  ಭರಮಾ ದೂಪದಾಳೆ ಅಂದು ಬದುಕುಳಿದಿದ್ದ, ವಿನಾಯಕ  ಅರೆಸ್ಟ್ ಆಗಿ ಹಿಂಡಲಗಾ ಜೈಲು ಸೇರಿದ‌‌.

ಹಳೆ ದ್ವೇಷಕ್ಕೆ ಬಿತ್ತಾ ಹೆಣ, ಜಾಮೀನು ಮೇಲೆ ಹೊರ ಬಂದಿದ್ದವನ ಬರ್ಬರ ಹತ್ಯೆ!

ತಿಂಗಳ ಹಿಂದಷ್ಟೇ ಜಾಮೀನು ಮೇಲೆ ಹೊರ ಬಂದಿದ್ದ ಈತ ಕೆಲಸ ಕಾರ್ಯ ಇಲ್ಲದೇ ಊರಲ್ಲಿ ಯುವಕರ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದ. ಶನಿವಾರದಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಈತ  ಸ್ನೇಹಿತರು ಪಾರ್ಟಿ ಕೇಳಿದ್ರೂ ಅಂತಾ ಹತ್ತರಗಿ ಬಳಿ ದಾಬಾಕ್ಕೆ ಪಾರ್ಟಿ ಕೊಡಿಸಿ ವಾಪಾಸ್ ಯಮಕನಮರಡಿಗೆ ಬರುವಾಗ ಈತನನ್ನ ಹಿಂಬಾಲಿಸಿದ ದುಷ್ಕರ್ಮಿಗಳು ರಸ್ತೆ ಮಧ್ಯದಲ್ಲಿ ಈತನನ್ನ ಅಡ್ಡಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

Latest Videos
Follow Us:
Download App:
  • android
  • ios