Asianet Suvarna News Asianet Suvarna News

10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಸರ್ಕಾರಿ ಶಾಲೆ ಶಿಕ್ಷಕ ಸಾದೀಕ್ ಬೇಗ್ ಬಂಧನ

ಸರ್ಕಾರಿ ಶಾಲೆ ಶಿಕ್ಷಕನೋರ್ವ ತನ್ನದೇ ಶಾಲೆಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

chikkodi govt teacher sadiq baig arrested for sexually harassing students rav
Author
First Published Sep 14, 2024, 10:06 AM IST | Last Updated Sep 14, 2024, 10:23 AM IST

ಚಿಕ್ಕೋಡಿ (ಸೆ.14): ಸರ್ಕಾರಿ ಶಾಲೆ ಶಿಕ್ಷಕನೋರ್ವ ತನ್ನದೇ ಶಾಲೆಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಶಿಕ್ಷಕ ಸಾದಿಕ ಬೇಗ್  ಬಂಧಿತ ಆರೋಪಿ. ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನಾಗಿರುವ ಆರೋಪಿ ಶಿಕ್ಷಕ. ಅದೇ ಶಾಲೆಯ  ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಆರೋಪ. ವಿದ್ಯಾರ್ಥಿನಿ ಪೋಷಕರ ಬಳಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಯಾವಾಗ ಶಿಕ್ಷಕನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ  ಹತ್ತಕ್ಕೂ ಹೆಚ್ಚು  ವಿದ್ಯಾರ್ಥಿನಿಯರು ನಮಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ. ಪಾಠ ಹೇಳುವ ನೆಪದಲ್ಲಿ ಕಿರುಕುಳ. ಬ್ಯಾಡ್ ಟಚ್ ಮಾಡುವ ಮೂಲಕ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಇರಿಸುಮುರಿಸು ಮಾಡಿರುವ ಆರೋಪಿ.  

ಕೇರಳದಲ್ಲಿ 30 ವರ್ಷಗಳಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ, ಮಾಜಿ ಶಿಕ್ಷಕಿಕನ ಬಂಧನ

ಘಟನೆ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಗೆ ದೂರು ನೀಡಿದ ಪೋಷಕರು. ದೂರು ನೀಡುತ್ತಿದ್ದಂತೆ ತಡರಾತ್ರಿ ಆರೋಪಿ ಶಿಕ್ಷಕ ಸಾದಿಕ್ ಬೇಗ್ ಬಂಧಿಸಿದ ಪೊಲೀಸರು. ಸದ್ಯ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರಿಸಿರುವ ಪೊಲೀಸರು.

ಸಬ್ ಇನ್ಸ್‌ಪೆಕ್ಟರ್‌ರಿಂದಲೇ ಮಹಿಳಾ ಪೇದೆಗೆ ಲೈಂಗಿಕ ಕಿರುಕುಳ: ಮತ್ತೊಂದೆಡೆ ಬಾಗಿಣ ನೀಡಿ ಸೋದರತ್ವ ಭಾವನೆ

ಬೀದರ್‌ನಲ್ಲೂ ಶಿಕ್ಷಕನಿಂದ ಲೈಂಗಿಕ ಕಿರುಕುಳ

ಕಳೆದ ವಾರ ಬೀದರ್‌ನಲ್ಲೂ ಇಂತದೇ ಪ್ರಕರಣ ನಡೆದಿತ್ತು. ಶಿಕ್ಷಕನೋರ್ವ ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟುವುದು ಟಾರ್ಚರ್ ಕೊಡುವ ಘಟನೆ ಬೆಳಕಿಗೆ ಬಂದಿತ್ತು. ವಿದ್ಯಾರ್ಥಿನಿಯರು ವಿರೋಧಿಸಿದರೆ ಅಂತಹ ವಿದ್ಯಾರ್ಥಿನಿಯರಿಗೆ ಹಾಲ್ ಟಿಕೆಟ್ ಕೊಡದೇ ಶಿಕ್ಷಕ ಬೆದರಿಸುತ್ತಿದ್ದ ಎಂದು ವಿದ್ಯಾರ್ಥಿನಿಯರು ಕಣ್ಣೀರು ಹಾಕಿದ್ದರು. ಇದೀಗ ಮತ್ತೊಂದು ಸರ್ಕಾರಿ ಶಾಲೆಯಲ್ಲಿ ಮರುಕಳಿಸಿದ. ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಿಕ್ಷಕರು ಈ ಹಿಂದೆ ಇಂತಹ ಕೃತ್ಯವೆಸಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲೂ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆಸುತ್ತಿರುವ ಪ್ರಕರಣ ಹೆಚ್ಚಳವಾಗುತ್ತಿರುವುದು ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಆತಂಕಗೊಳ್ಳುವಂತಾಗಿದೆ.

Latest Videos
Follow Us:
Download App:
  • android
  • ios