ಕೇರಳದಲ್ಲಿ 30 ವರ್ಷಗಳಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ, ಮಾಜಿ ಶಿಕ್ಷಕಿಕನ ಬಂಧನ

* ಕೇರಳದ ಮಲಪ್ಪುರಂನ ಶಾಕಿಂಗ್ ಘಟನೆ ಬೆಳಕಿಗೆ

* 30 ವರ್ಷಗಳಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಟ್ಟ ಶಿಕ್ಷಕ

* ಮಾಜಿ ಶಿಕ್ಷಕಿಕನ ಬಂಧನ

Ex teacher held in Kerala for molesting over 60 students in 30 years pod

ಮಲಪ್ಪುರಂ(ಮೇ.14): ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 30 ವರ್ಷಗಳಲ್ಲಿ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಶಾಲಾ ಶಿಕ್ಷಕನನ್ನು ಬಂಧಿಸಲಾಗಿದ್ದು, ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ. 

ಮಲಪ್ಪುರಂನ ಸೇಂಟ್ ಜೆಮ್ಮಾಸ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯ ಮಾಜಿ ಶಿಕ್ಷಕ ಹಾಗೂ ಮಲಪ್ಪುರಂ ಪುರಸಭೆಯ ಕೌನ್ಸಿಲ್ ಸದಸ್ಯ ಕೆ.ವಿ.ಶಶಿಕುಮಾರ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಏತನ್ಮಧ್ಯೆ, ಕೇರಳದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ಲೋಪದೋಷಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ನಿರ್ದೇಶಕ ಬಾಬು ಕೆ ಐಎಎಸ್ ಅವರಿಗೆ ಸಚಿವರು ಆದೇಶಿಸಿದರು.

ಮಲಪ್ಪುರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಶಶಿಕುಮಾರ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಒಂದು ವಾರದ ನಂತರವೇ ಶಿಕ್ಷಕನನ್ನು ಬಂಧಿಸಲು ಸಾಧ್ಯವಾಗಿದೆ.  ಶಾಲೆಯಲ್ಲಿ ಶಿಕ್ಷಕರಾಗಿದ್ದಾಗ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶಶಿಕುಮಾರ್ ವಿರುದ್ಧ ದೂರು ದಾಖಲಾಗಿತ್ತು. ಈತನ ವಿರುದ್ಧ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ.

ಸಿಪಿಎಂ ನಾಯಕ ಮತ್ತು ಮೂರು ಬಾರಿ ಮಲಪ್ಪುರಂ ಪುರಸಭಾ ಸದಸ್ಯರಾಗಿರುವ ಕೆ.ವಿ.ಶಶಿಕುಮಾರ್ ಅವರು ಮಾರ್ಚ್ 2022 ರಲ್ಲಿ ಸೇಂಟ್ ಜೆಮ್ಮಾಸ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಿಂದ ನಿವೃತ್ತರಾದರು.  ಬೋಧನೆಯಿಂದ ನಿವೃತ್ತಿಯ ಬಗ್ಗೆ ಶಶಿಕುಮಾರ್ ಅವರ ಫೇಸ್‌ಬುಕ್ ಪೋಸ್ಟ್ ನಂತರ ಶಾಲೆಯ ಹಳೆಯ ವಿದ್ಯಾರ್ಥಿಯೊಬ್ಬರು ಮೊದಲ '#MeToo' ಆರೋಪವನ್ನು ಮಾಡಿದ್ದಾರೆ.

ಕ್ರಮ ಕೈಗೊಳ್ಳದ ಶಾಲಾ ಮಂಡಳಿ

ಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ಪ್ರಕಾರ, ಕೆಲವು ವಿದ್ಯಾರ್ಥಿಗಳು 2019 ರಲ್ಲಿ ಶಶಿಕುಮಾರ್ ವಿರುದ್ಧ ದೂರು ನೀಡಿದ್ದರು ಆದರೆ ಶಾಲಾ ಆಡಳಿತವು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಳೆಯ ವಿದ್ಯಾರ್ಥಿಗಳ ಸಂಘವು ಹೆಚ್ಚಿನ ದೂರುಗಳೊಂದಿಗೆ ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ಸಂಪರ್ಕಿಸಿತ್ತು. ಈ ಘಟನೆಗಳ ನಂತರ, ಸಿಪಿಐ(ಎಂ) ಶಾಖಾ ಸಮಿತಿಯ ಸದಸ್ಯ ಶಶಿಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

Latest Videos
Follow Us:
Download App:
  • android
  • ios