* ಮನೆ ಬಾಡಿಗೆ ಕೊಡುವುದು ಬೇಡ ಕಿಸ್ ಕೊಟ್ಟರೆ ಸಾಕು!* ಮನೆ ಮಾಲೀಕನ ದೌರ್ಜನ್ಯಕ್ಕೆ ಬೇಸತ್ತ ಮಹಿಳೆ* ಆರೋಪಿಯನ್ನು ಬಂಧಿಸಿದ ಚೆನ್ನೈ ಪೊಲೀಸರು

ಚೆನ್ನೈ(ಜು. 10) ಇದೊಂದು ವಿಚಿತ್ರ ಪ್ರಕರಣ. ಆದರೆ ಆರೋಪಿಯನ್ನು ಬಂಧಿಸಲಾಗಿದೆ. ಮನೆ ಬಾಡಿಗೆ ಕೊಡಲು ಸಾಧ್ಯವಾಗದ್ದರೆ ಗಂಡ ಇಲ್ಲದಿದ್ದಾಗ ಕಿಸ್ ಕೊಡು ಎಂದು ಗಟು ಬಿದ್ದಿದ್ದ. 

Add Asianetnews Kannada as a Preferred SourcegooglePreferred

ಚೆನ್ನೈನ ಕೊಡುಂಗೈಯೂರ್ ನಿಂದ ಪ್ರಕರಣ ವರದಿಯಾಗಿದ್ದು ಪೊಲೀಸರು ಆರೋಪಿ ಜಯಕುಮಾರ್(50 ) ನನ್ನು ಬಂಧಿಸಿದ್ದಾರೆ. ಮಹಿಳಾ ಕಿರುಕುಳ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

28ರ ಯುವಕ 42ರ ಆಂಟಿ.. ಸುಪಾರಿ ಹೆಣವಾಗಿದ್ದ ಬಾಡಿ ಬಿಲ್ಡರ್!

ಆಟೋ ಚಾಲಕನಾಗಿ ಕೆಲಸ ಮಾಡುವ ಜಯಕುಮಾರ್ ಮನೆ ಬಾಡಿಗೆಗೆ ಕೊಟ್ಟಿದ್ದ. ಮಹಿಳೆಯ ಪತಿ ಇಲ್ಲದಿದ್ದಾಗ ಬಂದು ನೀವು ಬಾಡಿಗೆ ಕೊಡುವುದು ಬೇಡ.. ಕಿಸ್ ಕೊಡಿ ಎಂದು ಪದೇ ಪದೇ ಬಂದು ಪೀಡಿಸುತ್ತಿದ್ದ.

ಇದ್ದಕ್ಕಿದ್ದಂತೆ ಮಂಗಳವಾರ ಮಹಿಳೆ ಬಳಿ ಬಂದಾತ ಕೈ ಹಿಡಿದು ಎಳೆಯಲು ಮುಂದಾಗಿದ್ದಾನೆ. ನೊಂದ ಮಹಿಳೆ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.