Asianet Suvarna News Asianet Suvarna News

ಅಪ್ರಾಪ್ತ ಬಾಲಕಿಯ ಅಪಹರಣ, ಮದುವೆಯಾಗಿ ದೈಹಿಕ ಸಂಪರ್ಕ, ಆರೋಪಿಗೆ ಕೊನೆಗೂ ಶಿಕ್ಷೆ!

* ಅಪ್ರಾಪ್ತ ಬಾಲಕಿ ಅಪಹರಿಸಿ ಮದುವೆ ಪ್ರಕರಣ.

* ಬಾಲಕಿಯನ್ನ ಪುಸಲಾಯಿಸಿ ಮದುವೆಯಾಗಿದ್ದ ಆರೋಪಿ ಹರೀಶ್

* ಎಂಟು ತಿಂಗಳ ನಂತರ ಪೊಲೀಸರ ಬಲೆಗೆ ಬಿದ್ದಿದ್ದ ಹರೀಶ್ 

* ಆರೋಪಿಗೆ 20 ವರ್ಷ ಕಠಿಣ ಸಜೆ ರೂ.35 ಸಾವಿರ ರೂಪಾಯಿ ದಂಡ..

Chamarajanagar Man held for Kidnapping marrying and raping minor pod
Author
Bangalore, First Published Apr 21, 2022, 9:07 AM IST

ಚಾಮರಾಜನಗರ(ಏ.21): ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ದೈಹಿಕ ಸಂಬಂಧ ಬೆಳೆಸಿದ ಆರೋಪಿಗೆ ಶಿಕ್ಷೆ ವಿ​ಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ. 

28 ವರ್ಷದ ಮಹೇಶ ಎಂಬ ವ್ಯಕ್ತಿ ಕಳೆದ 2019ರ ಮಾರ್ಚ್ 7ರಂದು 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿಕೊಂಡು ಮದುವೆಯಾಗಿ ನಂತರ ಬೆಂಗಳೂರಿಗೆ ತೆರಳಿ ಬಾಲಕಿಯೊಂದಿಗೆ ದೈಹಿಕ ಸಂಬಂಧ ಮಾಡಿದ ಆರೋಪ ದೃಢಪಟ್ಟ ಹಿನ್ನೆಲೆ ವಿಚಾರಣೆ ನಡೆದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾ. ಬಿ.ಎಸ್‌.ಭಾರತಿ ಅವರು ಆರೋಪಿತ ವ್ಯಕ್ತಿಗೆ ಶಿಕ್ಷೆ ವಿಧಿಸಿದೆ.

Bengaluru Crime: ಶೀಲ ಶಂಕಿಸಿ ಪತ್ನಿಯ ಇರಿದು ಕೊಂದು ಪೊಲೀಸರಿಗೆ ಶರಣು

ಹೌದು ಭಾರತೀಯ ದಂಡ ಸಂಹಿತೆ ಕಲಂ 366ಕ್ಕೆ 5 ವರ್ಷ ಸಾದಾ ಸಜೆ, 10 ಸಾವಿರ ರು. ದಂಡ ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಸಜೆ, 376 ಐಪಿಸಿಗೆ ಮತ್ತು ಫೋಕ್ಸೋ ಕಾಯ್ದೆ ಕಲಂ 4ರ ಅನ್ವಯ 20 ವರ್ಷ ಸಾದಾ ಸಜೆ 10 ಸಾವಿರ ರು. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳು ಸಜೆ ಮತ್ತು ಐಪಿಸಿ ಕಲಂ 376 ಮತ್ತು ಫೋಕ್ಸೊ ಕಾಯ್ದೆ ಕಲಂ 6ರ ಅನ್ವಯ 20 ವರ್ಷ ಕಠಿಣ ಶಿಕ್ಷೆ 10 ಸಾವಿರ ರು. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳು ಸಜೆ, ಫೋಕ್ಸೊ ಕಾಯ್ದೆ ಕಲಂ 12ರ ಅನ್ವಯ ಒಂದು ವರ್ಷ ಸಾದಾ ಸಜೆ 5 ಸಾವಿರ ರು. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಸಜೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9ರ ಅನ್ವಯ 2 ವರ್ಷ ಸಾದಾ ಸಜೆ ಶಿಕ್ಷೆ ವಿ​ಸಿ ತೀರ್ಪು ನೀಡಿದ್ದಾರೆ.

ಅಲ್ಲದೇ ಕಾನೂನು ಸೇವಾ ಪ್ರಾಧಿ​ಕಾರದಿಂದ ನೊಂದ ಬಾಲಕಿಗೆ ಪರಿಹಾರದ ರೂಪದಲ್ಲಿ 5 ಲಕ್ಷ ರು. ಹಣವನ್ನು ಒಂದು ತಿಂಗಳೊಳಗೆ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್‌ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ

ಚಾಮರಾಜನಗರದ ಹೊನ್ನಳ್ಳಿ ಗ್ರಾಮದ ದೊಡ್ಡಮಾದೇಗೌಡರಗ ಮಹೇಶ್ 2019 ರ ಮಾರ್ಚ್ 17 ರಂದು 15 ವರ್ಷದ ವಯಸ್ಸಿನ ಅಪ್ರಾಪ್ತೆಯನ್ನು ಪುಸಲಾಯಿಸಿ, ಮದುವೆಯಾಗುವುದಾಗಿ ನಂಬಿಸಿ, ತನ್ನ ಜೊತೆ ಹೊನ್ನಳ್ಳಿಗೆ ಬರದೇ ಇದ್ದರೆ ವಿಷ ಕುಡಿಯುವುದಾಗಿ ಹೆದರಿಸಿದ್ದಾನೆ. ಬಳಿಕ ಆಕೆಯನ್ನು ಗ್ರಾಮದ ಜಮೀನೊಂದರ ಬಳಿ ಕರೆದೊಯ್ದು ಬಳಿಕ ತನ್ನ ಬೈಕ್‌ನಲ್ಲಿ ಅಪಹರಿಸಿಕೊಂಡು ಮದುವೆಯಾಗಿದ್ದಾನೆ. ನಂತರ ಬೆಂಗಳೂರಿಗೆ ಆಕೆಯನ್ನು ಕರೆದೊಯ್ದು ಮನೆಯೊಂದರಲ್ಲಿ ಇರಿಸಿ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಬೊಲೆರೋ ವಾಹನ ಮರಕ್ಕೆ ಡಿಕ್ಕಿ, 6 ಮಂದಿ ಸಾವು, ಮದ್ವೆ ಮುಗಿಸಿ ಮನೆಗೆ ಹೋಗುತ್ತಿದ್ದವರು ಮಸಣಕ್ಕೆ

ಈ ವಿಚಾರ ತಿಳಿದ ಬಾಲಕಿಯ ತಂದೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಆರೋಪಿ ಮಹೇಶ್ ವಿರುದ್ದ ದೂರು ನೀಡಿದ್ದರು. ಆರೋಪಿ ವಿರುದ್ದ ಐಪಿಸಿ ಸೆಕ್ಷನ್ 366(ಎ), 376(ಎನ್), ಪೋಕ್ಸೋ ಕಲಂ 4,6,12 ಹಾಗಿ ಕಲಂ 9,10 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯೆಡಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 

Follow Us:
Download App:
  • android
  • ios