Asianet Suvarna News Asianet Suvarna News

Bengaluru Crime: ಶೀಲ ಶಂಕಿಸಿ ಪತ್ನಿಯ ಇರಿದು ಕೊಂದು ಪೊಲೀಸರಿಗೆ ಶರಣು

*  ಫೇಸ್‌ಬುಕ್‌ನಲ್ಲೂ ಪೋಸ್ಟ್‌ ಗಮನಿಸಿ ಕೌನ್ಸಿಲಿಂಗ್‌ ಮಾಡಿದ್ದ ಪೊಲೀಸರು
*  ಶೀಲ ಶಂಕಿಸಿ ಪತ್ನಿ ಜೊತೆ ನಿತ್ಯ ಜಗಳವಾಡುತ್ತಿದ್ದ ಆರೋಪಿ
*  ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಹತ್ಯೆ ಮಾಡಿದ ಮಲ್ಲೇಶ್‌ 
 

Husband Killed Wife in Bengaluru grg
Author
Bengaluru, First Published Apr 21, 2022, 6:53 AM IST

ಆನೇಕಲ್‌(ಏ.21): ಪತ್ನಿಯ ಶೀಲ ಶಂಕಿಸಿ, ಚಾಕುವಿನಿಂದ ಆಕೆಯ ಕತ್ತನ್ನು ಸೀಳಿ ಕೊಲೆ(Murder) ಮಾಡಿದ ಆರೋಪಿ, ಬಳಿಕ ತಾನೇ ಪೊಲೀಸರಿಗೆ(Police) ಶರಣಾದ ಘಟನೆ ಆನೇಕಲ್‌(Anekal) ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

ಇಲ್ಲಿನ ತಿಮ್ಮರಾಯಸ್ವಾಮಿ ದಿಣ್ಣೆಯ ಸರಸ್ವತಿ(35) ಕೊಲೆಯಾದವರು. ಮಲ್ಲೇಶ್‌ ಕೊಲೆ ಮಾಡಿದ ಪತಿರಾಯ. ಮಲ್ಲೇಶ್‌ ಬಿಲ್ಡಿಂಗ್‌ ಕಂಟ್ರಾಕ್ಟರ್‌ ಆಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆ ದುಕೊಂಡಿದ್ದ ಆರೋಪಿ(Accused) ತನ್ನನ್ನು ಯಾರೋ ಕೊಲೆ ಮಾಡಲಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಜತೆಗೆ ಫೇಸ್‌ಬುಕ್‌ನಲ್ಲೂ(Facebook) ಈ ಸಂಬಂಧ ಪೋಸ್ಟ್‌ ಹಾಕಿದ್ದ. ಪೋಸ್ಟ್‌ ಗಮನಿಸಿದ್ದ ಪೊಲೀಸರು ಕೌನ್ಸಿಲಿಂಗ್‌ ಮಾಡಿ, ಬುದ್ಧಿವಾದ ಹೇಳಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ. 

ಮರ್ಯಾದಾ ಹತ್ಯೆ, ಪ್ರೇಮಿ ಮನೆ ತಲುಪಿದ ವಿದ್ಯಾರ್ಥಿನಿಯ ಕೊಂದ ತಂದೆ-ಮಗ!

ಇದಾದ ಬಳಿಕ ಕುಡಿತದ ದಾಸನಾಗಿದ್ದ ಆರೋಪಿ, ಶೀಲ ಶಂಕಿಸಿ ಪತ್ನಿ ಜೊತೆ ನಿತ್ಯ ಜಗಳವಾಡುತ್ತಿದ್ದ. ಸೋಮವಾರ ರಾತ್ರಿ ಸಹ ಜಗಳವಾಗಿದ್ದು, ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಕೊಲೆ ಮಾಡಿದ್ದ ಇಬ್ಬರ ಬಂಧನ

ಬೆಂಗಳೂರು: ಹಣಕಾಸು ವಿಚಾರ ಹಿನ್ನೆಲೆಯಲ್ಲಿ ಪರಿಚಿತ ಮಹಿಳೆಯೊಬ್ಬಳನ್ನು ಹತ್ಯೆಗೈದಿದ್ದ ಆಟೋ ಚಾಲಕ ಸೇರಿದಂತೆ ಇಬ್ಬರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದರು. ಕಾಚಮಾರನಹಳ್ಳಿ ನಿವಾಸಿ ಇಮ್ರಾನ್‌ ಹಾಗೂ ವೆಂಕಟೇಶ್‌ ಬಂಧಿತರಾಗಿದ್ದು, ಈ ಕೃತ್ಯ ಸಂಬಂಧ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಕಿರಣ್‌ ಪತ್ತೆಗೆ ತನಿಖೆ ನಡೆದಿದೆ. 

ಕೆಲ ದಿನಗಳ ಹಿಂದೆ ಕಾಚಮಾರನಹಳ್ಳಿಯ ಅಪಾರ್ಚ್‌ಮೆಂಟ್‌ನಲ್ಲಿ ಸುನೀತಾ ಪ್ರಸಾದ್‌(55) ಅವರ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮೊಬೈಲ್‌ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು. 

ಹೆತ್ತ ಮಕ್ಕಳನ್ನೇ ಹತ್ಯೆ ಮಾಡಿದ್ದ ಆರೋಪಿ ಕೋರ್ಟ್‌ ಮಹಡಿಯಿಂದ ಜಿಗಿದು ಆತ್ಮಹತ್ಯೆ!

ಕಬ್ಬಿಣದ ರಾಡ್‌ನಿಂದ ಬಡಿದು ಪತಿಯನ್ನೇ ಕೊಂದಳು..!

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆಗೈದ(Murder) ಪತ್ನಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು(Police) ಸೋಮವಾರ ಬಂಧಿಸಿದ್ದರು.

ಅಂದ್ರಹಳ್ಳಿಯ ಸಾಯಿಬಾಬಾ ಲೇಔಟ್‌ ನಿವಾಸಿ ಉಮೇಶ್‌(52) ಕೊಲೆಯಾದ ದುರ್ದೈವಿ. ಈ ಸಂಬಂಧ ಮೃತನ ಪತ್ನಿ ವರಲಕ್ಷ್ಮೀ(48) ಎಂಬುವರನ್ನು ಬಂಧಿಸಲಾಗಿದೆ(Arrest). ಮನೆಯಲ್ಲಿ ಮುಂಜಾನೆ ದಂಪತಿ ಮಧ್ಯೆ ಜಗಳವಾಗಿದೆ. ಆಗ ಕೆರಳಿದ ವರಲಕ್ಷ್ಮೀ, ಮಲಗಿದ್ದ ಪತಿ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ಬಳಿಕ ತಾವೇ ಮನೆ ಸಮೀಪದ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಉಮೇಶ್‌ ಮೃತಪಟ್ಟಿದ್ದಾರೆ(Death). ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕೆ ಮೇರೆಗೆ ಮೃತನ ಪತ್ನಿ ಮತ್ತು ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದರು.
 

Follow Us:
Download App:
  • android
  • ios