Asianet Suvarna News Asianet Suvarna News

ಬೊಲೆರೋ ವಾಹನ ಮರಕ್ಕೆ ಡಿಕ್ಕಿ, 6 ಮಂದಿ ಸಾವು, ಮದ್ವೆ ಮುಗಿಸಿ ಮನೆಗೆ ಹೋಗುತ್ತಿದ್ದವರು ಮಸಣಕ್ಕೆ

* ಮೈಸೂರು ಜಿಲ್ಲೆಯಲ್ಲಿ ಭೀಕರ ಅಪಘಾತ
* ಮರಕ್ಕೆ ಬೊಲೆರೋ ವಾಹನ ಡಿಕ್ಕಿಯಾಗಿ 6 ಜನ ಸಾವು
* ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೊಲೊರೋದಲ್ಲಿ ಹಿಂದಿರುತ್ತಿದ್ದಾಗ ಘಟನೆ

6 Dies three injured after bolero vehicle hits to tree at hunsur rbj
Author
Bengaluru, First Published Apr 20, 2022, 6:10 PM IST

ಮೈಸೂರು, (ಏ.20): ಮೈಸೂರು ಜಿಲ್ಲೆ ಹುಣಸೂರು (Hunsur) ತಾಲ್ಲೂಕಿನ ಕಲ್‌ಬೆಟ್ಟ ಬಳಿ ಇಂದು(ಬುಧವಾರ)ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ಈ ದುರ್ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. 

ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನವೊಂದು (olero Vehicle) ಮರಕ್ಕೆ(Tree) ಡಿಕ್ಕಿ ಹೊಡೆದಿದೆ. ಪರಿಣಾಮ 6 ಮಂದಿ ಸ್ಥಳದಲ್ಲೇ  ಸಾವನ್ನಪ್ಪಿದ್ದು (Death),ಮೂವರಿಗೆ ಗಂಭೀರ ಗಾಯಗಳಾಗಿವೆ(Injured).  

 ಹುಣಸೂರಿನಿಂದ ಮದುವೆ ಮುಗಿಸಿ ಹೋಗುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಇನ್ನು ಗಾಯಾಳುಗಳನ್ನು ಹುಣಸೂರು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಚಾಲಕನಿಲ್ಲದೇ ಚಲಿಸಿದ ಕಂಟೈನರ್ ಲಾರಿ: ತಪ್ಪಿದ ಭಾರೀ ಅನಾಹುತ

ಪಾಲಿ ಬೆಟ್ಟ ಗ್ರಾಮದ ಸ್ನೇಹಿತ ಸದಾನಂದ ಹಾಗೂ ಹುಣಸೂರಿನ ವಧುವಿನ ಜೊತೆಗೆ ಇಂದು ಮದುವೆ ಏರ್ಪಟ್ಟಿತು. ಹುಣಸೂರಿನ ಕಲ್ಯಾಣ ಮಂಟಪವೊಂದರಲ್ಲಿ ಜರುಗಿದ ಮದುವೆಗೆ ಗ್ರಾಮದವರಾದ ಅನಿಲ್ 44, ಸಂತೋಷ್ 42 (ಜೀಪ್ ಚಲಾಯಿಸುತ್ತಿದ್ದವನು), ಬಾಬು 48, ರಾಜೇಶ್ 40, ದಯಾನಂದ್ 42, ವಿನೀತ್ 37, ಕೀರ್ತನ 22, ಏಂಜಲ್ 14 ಹಾಗೂ ಪಿಲೀಪ್ 65 ಆಗಮಿಸಿದ್ದರು. ಮದುವೆ ಮಗಿಸಿಕೊಂಡು ಹುಣಸೂರಿನಿಂದ ಮತ್ತೆ ಪಾಲಿಬೆಟ್ಟಕ್ಕೆ ತೆರಳಲು ಎಲ್ಲರೂ ಬೊಲೆರೋ ಜೀಪ್ ಸಂಖ್ಯೆ ka03-mc-6455ರಲ್ಲಿ ಹೊರಟಿದ್ದರು.

ಹುಣಸೂರಿನಿಂದ ಕುಶಾಲನಗರ ಮಾರ್ಗವಾಗಿ ತೆರಳುತ್ತಿದ್ದಾಗ ಜೀಪು ಚಾಲಕನ ನಿಯರಂತ್ರ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಆಲದ ಮರಕ್ಕೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಜೀಪು ಸಂಪೂರ್ಣ ನಜ್ಜುಗುಜ್ಜಾಗಿದ್ದು ಸ್ಥಳದಲ್ಲೇ ಅನಿಲ್, ಸಂತೋಷ್, ಬಾಬು, ರಾಜೇಶ್, ದಯಾನಂದ್, ವಿನಿತ್ ಮೃತಪಟ್ಟಿದ್ದಾರೆ. ಉಳಿದ ಮೂವರನ್ನು ಸ್ಥಳಿಯರು ರಕ್ಷಿಸಿ ತಾಲೂಕು ಆಸ್ಪತ್ರೆಗೆ ಸೇರಿಸಿದ್ದಾರೆ.‌ ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮೈಸೂರು ಎಸ್‌ಪಿ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಣಸೂತು ಗ್ರಾಮಾಂತರ ಪೊಲೀಸರು ತನಿಖೆ ಮುಂದುವರೆಸಿದ್ದು, ಘಟನೆಗೆ ನಿಖರ ಕಾರಣ ಕಲೆ‌ಹಾಕುತ್ತಿದ್ದಾರೆ.

ಲಿಂಗಸಗೂರು ಬಳಿ ಭೀಕರ ಅಫಘಾತ; ಮೂವರ ದುರ್ಮರಣ
ರಾಯಚೂರು: ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಗೊಲ್ಲಪಲ್ಲಿ ಬಳಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಮರೇಶ್ (30), ಗೋವಿಂದ್ (35) ದೇವರಾಜ್ (34) ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳು. ಎಲ್ಲರೂ ಯಾದಗಿರಿ ಜಿಲ್ಲೆಯ ವಡಗೇರ ಗ್ರಾಮದವರು ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಮದುವೆಗೆಂದು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios