Asianet Suvarna News Asianet Suvarna News

Bengaluru Crime: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಸಿಸಿಬಿ ದಾಳಿ

*  ಸ್ಕೈ ಯುನಿಸೆಕ್ಸ್‌ ಸಲೂನ್‌ ಮತ್ತು ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ
*  ಮೂವರು ಮಹಿಳೆಯರ ರಕ್ಷಣೆ
*  ಸ್ಪಾ ಪರವಾನಿಗೆ ರದ್ದುಪಡಿಸುವಂತೆ ಬಿಬಿಎಂಪಿಗೆ ವರದಿ ಸಲ್ಲಿಸಿದ ಸಿಸಿಬಿ ಪೊಲೀಸ್‌

CCB Police Raid on Prostitution Racket in Spa at Bengaluru grg
Author
Bengaluru, First Published Mar 2, 2022, 9:45 AM IST | Last Updated Mar 2, 2022, 10:47 AM IST

ಬೆಂಗಳೂರು(ಮಾ.02): ಸ್ಪಾವೊಂದರ(Spa) ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ(Prostitution) ತೊಡಗಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ.

ಟಿ.ದಾಸರಹಳ್ಳಿ ಸಮೀಪ ಐಶ್ವರ್ಯ ಅಲಿಯಾಸ್‌ ರಿಷಪ್ಸನಿಸ್ಟ್‌ ಬಂಧಿತಳಾಗಿದ್ದು(Arrest), ಟಿ.ದಾಸರಹಳ್ಳಿ ಸಮೀಪದ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಸ್ಕೈ ಯುನಿಸೆಕ್ಸ್‌ ಸಲೂನ್‌ ಮತ್ತು ಸ್ಪಾ(Sky Unisex Salon and Spa) ಹೆಸರಿನಲ್ಲಿ ಆಕೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. 

Bengaluru: ವೇಶ್ಯಾವಾಟಿಕೆಗೆ ದೆಹಲಿಗೆ ಸಾಗಿಸುತ್ತಿದ್ದ. ಯುವತಿಯನ್ನು ರಕ್ಷಿಸಿದ CISF ಅಧಿಕಾರಿಗಳು

ಈ ದಾಳಿ ವೇಳೆ(Raid) ಮೂವರು ಮಹಿಳೆಯರನ್ನು(Women) ರಕ್ಷಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಸ್ಪಾ ಪರವಾನಿಗೆ(License) ರದ್ದುಪಡಿಸುವಂತೆ ಬಿಬಿಎಂಪಿಗೆ(BBMP) ವರದಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3 ಸ್ಪಾ ಮೇಲೆ ಸಿಸಿಬಿ ದಾಳಿ: 13 ಮಹಿಳೆಯರ ರಕ್ಷಣೆ

ಬೆಂಗಳೂರು: ಅನೈತಿಕ ಚಟುವಟಿಕೆಗಳ ಶಂಕೆ ಹಿನ್ನೆಲೆಯಲ್ಲಿ ನಗರದ ಮೂರು ‘ಸ್ಪಾ’ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ವಿದೇಶಿಯರು(Foreigners) ಸೇರಿ 13 ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆ ಫೆ.4 ರಂದು ನಡೆದಿತ್ತು 
ಉತ್ತರ ಭಾರತ ಮೂಲದ ದೇವೆಂದರ್‌, ಅಭಿಜಿತ್‌ ಬಂಧಿತರು. ನಗರದ ರಾಯಲ್‌ ಸ್ಪಾ ಆ್ಯಂಡ್‌ ಸಲೂನ್‌, ಅಸ್ತೇಟಿಕ್‌ ಯೂನಿಸೆಕ್ಸ್‌ ಸೆಲೂನ್‌ ಆ್ಯಂಡ್‌ ಸ್ಪಾ, ನಿಸರ್ಗ ಆಯುರ್ವೇದಿಕ್‌ ಕ್ಲಿನಿಕ್‌ಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ. ಕೆಲಸದ ನೆಪದಲ್ಲಿ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ಹೇಳಿದ್ದರು.

ದಾಳಿ ವೇಳೆ ನೇಪಾಳ(Nepal) ಹಾಗೂ ಟರ್ಕಿ(Turkey) ದೇಶದ ಇಬ್ಬರು ಮಹಿಳೆಯರು, ನಾಗಾಲ್ಯಾಂಡ್‌ನ(Nagaland) ಇಬ್ಬರು, ಅಸ್ಸಾಂನ(Assam) ಮೂವರು ಮಹಿಳೆಯರು, ದೆಹಲಿಯ ಒಬ್ಬರು, ಪಶ್ಚಿಮ ಬಂಗಾಳದ ಮೂವರು ಹಾಗೂ ಸ್ಥಳೀಯ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಸಂಬಂಧ 9 ಮಂದಿ ವಿರುದ್ಧ ಎಚ್‌ಎಸ್‌ಆರ್‌ ಲೇಔಚ್‌, ಅಶೋಕ ನಗರ ಹಾಗೂ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಮಂಗಳೂರಲ್ಲಿ ಪಿಯು ಹುಡುಗಿಯರ ಬೆದರಿಸಿ ವೇಶ್ಯಾವಾಟಿಕೆ: 10 ಜನ ಸೆರೆ

ಮಂಗಳೂರು(Mangaluru): ನಗರದ ಫ್ಲ್ಯಾಟ್‌ವೊಂದರಲ್ಲಿ ಪಿಯು ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್‌ ಮಾಡಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌(Police) ಇಲಾಖೆ, ಈ ಸಂಬಂಧ ಮತ್ತೆ ಏಳು ಆರೋಪಿಗಳನ್ನು(Accused) ಬಂಧಿಸಿ ಪೋಕ್ಸೋ ಕೇಸ್‌ ದಾಖಲಿಸಿದ ಘಟನೆ ಫೆ. 8 ರಂದು ನಡೆದಿತ್ತು. 

Shivamogga: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಮೂವರು ಮಹಿಳೆಯರ ರಕ್ಷಣೆ

ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೇರಿದೆ. ಸಂತ್ರಸ್ತ ಬಾಲಕಿಯ ದೂರಿನ ಮೇರೆಗೆ ಫೆ.3ರಂದು ಫ್ಲ್ಯಾಟ್‌ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಪ್ರಮುಖ ಆರೋಪಿ ನಂದಿಗುಡ್ಡೆಯ ಶಮೀನಾ (41), ಉಪ್ಪಳದ ಅಬೂಬಕ್ಕರ್‌ ಸಿದ್ದಿಕ್‌ (42) ಮತ್ತು ಅಡ್ಯಾರ್‌ಪದವಿನ ಐಸಮ್ಮ (56)ನನ್ನು ಬಂಧಿಸಿದ್ದರು. ಇದೀಗ ಮೂಡುಬಿದಿರೆ ಹೊಸಬೆಟ್ಟಿನ ಸಂದೀಪ್‌ (33), ಮಂಗಳೂರು ಕೈಕಂಬದ ಸಿಪ್ರಿಯಾನ್‌ ಅಂದ್ರಾದೆ (40), ಉದ್ಯಾವರ ಮಂಜೇಶ್ವರದ ಮಹಮ್ಮದ್‌ ಶರೀಫ್‌ (46) ಎಂಬವರನ್ನು ಬಂಧಿಸಲಾಗಿತ್ತು. 

ಇವರು ಗಿರಾಕಿಗಳಾಗಿ ಆಗಮಿಸಿ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಪಿಂಪ್‌ಗಳಾಗಿ ಸಹಕಾರ ನೀಡಿದ ತಲಪಾಡಿಯ ರಹಮತ್‌(48), ಕಣ್ಣೂರಿನ ಸನಾ ಆಲಿಯಾಸ್‌ ಅಸ್ಮಾ (24), ಬಂಟ್ವಾಳ ನರಿಂಗಾನದ ಉಮ್ಮರ್‌ ಕುನ್ನಿ ಮತ್ತು ಬೆಂದೂರ್‌ವೆಲ್‌ನ ಮಹಮ್ಮದ್‌ ಹನೀಫ್‌ (46) ಎಂಬವರನ್ನೂ ಬಂಧಿಸಲಾಗಿತ್ತು. 
 

Latest Videos
Follow Us:
Download App:
  • android
  • ios