ACB Raid: ಅಕ್ರಮವಾಗಿ 28 ಮನೆ, 16 ಸೈಟ್‌ ಗಳಿಸಿದ್ದ ಭ್ರಷ್ಟ ಅಧಿಕಾರಿ ಬಂಧನ

*   ಬೆಂಗಳೂರು ಸುತ್ತಮುತ್ತ ಅಕ್ರಮವಾಗಿ ಆಸ್ತಿ ಸಂಪಾದನೆ
*  3 ದಿನದ ವಿಚಾರಣೆ ಬಳಿಕ ವಾಸುದೇವ್‌ ಬಂಧನ
*   ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಲಯ
 

CCB Police Arrested Corrupt Officer Vasudev in Bengaluru grg

ಬೆಂಗಳೂರು(ನ.29):  ನಗರದ ಸುತ್ತಮುತ್ತ 28 ಮನೆಗಳು(Houses) ಹಾಗೂ 16 ನಿವೇಶನಗಳು(Sites) ಸೇರಿದಂತೆ ಅಕ್ರಮವಾಗಿ 31.20 ಕೋಟಿ ಮೌಲ್ಯದ ಆಸ್ತಿ ಸಂಪಾದನೆ(Illegal Property) ಪ್ರಕರಣ ಬಯಲಿಗೆ ಬಂದ ಬೆನ್ನಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್‌.ಎನ್‌.ವಾಸುದೇವ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಬಂಧಿಸಿದೆ.

ನಾಲ್ಕು ದಿನಗಳ ಹಿಂದೆ ವಾಸುದೇವ್‌ ಅವರ ಅಕ್ರಮ ‘ಸಂಪತ್ತಿನ ಗಣಿ’ ಮೇಲೆ ದಾಳಿ ನಡೆಸಿದ್ದ ಎಸಿಬಿ, ಬೆಂಗಳೂರು(Bengaluru), ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾನೂನುಬಾಹಿರವಾಗಿ ಸಂಪಾದಿಸಿದ್ದ .26.78 ಕೋಟಿ ಸ್ಥಿರಾಸ್ತಿ ಹಾಗೂ .3.87 ಕೋಟಿ ಮೊತ್ತದ ಚರಾಸ್ತಿಯನ್ನು ಪತ್ತೆ ಹಚ್ಚಿದ್ದರು. ಇದು ವಾಸುದೇವ್‌ ಅವರ ಆದಾಯಕ್ಕಿಂತ ಶೇಕಡ 1434 ಅಕ್ರಮ ಸಂಪತ್ತು ಎಂದು ಎಸಿಬಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ವಿಚಾರಣೆ ಬಳಿಕ ವಾಸುದೇವ್‌(Vasudev) ಅವರನ್ನು ಭಾನುವಾರ ಬಂಧಿಸಿದ(Arrest) ಎಸಿಬಿ, ಬಳಿಕ ಅವರನ್ನು ನ್ಯಾಯಾಲಯಕ್ಕೆ(Court) ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ACB Raid: ಬೆಂಗ್ಳೂರಿನ ಭ್ರಷ್ಟ ಅಧಿಕಾರಿ ಬಳಿ ಕೋಟಿ ಕೋಟಿ ಆಸ್ತಿ..!

ಮಾಗಡಿ, ರಾಮನಗರದಲ್ಲಿ ಆಸ್ತಿ:

ಬೆಂಗಳೂರಿನ ಕೆಂಗೇರಿ ಉಪ ನಗರ, ಮಲ್ಲೇಶ್ವರ, ನೆಲಮಂಗಲದ ಸೋಂಪುರ (ದಾಬಸಪೇಟೆ), ಅರ್ಕಾವತಿ ಬಡಾವಣೆ, ಯಲಹಂಕ ಉಪನಗರ, ವಿಶ್ವೇಶ್ವರಯ್ಯ ಬಡಾವಣೆ ಹಾಗೂ ಜ್ಞಾನಭಾರತಿಗಳಲ್ಲಿ ವಾಸುದೇವ್‌ ಅವರು ಸಂಪಾದಿಸಿದ್ದ 16 ನಿವೇಶನಗಳು ಪತ್ತೆಯಾಗಿದ್ದವು. ನೆಲಮಂಗಲ ತಾಲೂಕಿನ ಮಾಕಳಿ ಕುಪ್ಪೆ ಗ್ರಾಮದಲ್ಲಿ 4 ಎಕರೆ ಜಮೀನು ಹಾಗೂ ಕೆಂಗೇರಿ ಉಪನಗರ, ಹೊಸಕರೆ ರಸ್ತೆ, ಬಿನ್ನಿಪೇಟೆ ಹಾಗೂ ದೊಡ್ಡಬಳ್ಳಾಪುರ ತಾಲೂಕು ಸೇರಿದಂತೆ ಇತರೆ ನಿವೇಶನಗಳ ದಾಖಲೆಗಳು ಸಿಕ್ಕಿಬಿದ್ದಿದ್ದವು. ಮತ್ತೆ ವಾಸುದೇವ್‌ ‘ಸಂಪತ್ತು’ ಶೋಧನೆ ಮುಂದುವರೆಸಿದ ಎಸಿಬಿ ಈಗ ಮತ್ತೆ ರಾಮನಗರ ಹಾಗೂ ಮಾಗಡಿ ತಾಲೂಕಿನಲ್ಲಿ ಗಳಿಸಿದ್ದ ಕೋಟ್ಯಂತರ ಮೌಲ್ಯದ ಭೂಮಿ(Land) ಪತ್ತೆ ಮಾಡಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಗೊಲ್ಲರಪಾಳ್ಯದಲ್ಲಿ 6.20 ಎಕರೆ ಹಾಗೂ ರಾಮನಗರ ತಾಲೂಕಿನ ಫಾಲಬೋವಿದೊಡ್ಡಿ ಗ್ರಾಮದಲ್ಲಿ 10 ಗುಂಟೆ ಭೂಮಿಯನ್ನು ತಮ್ಮ ಪುತ್ರನ ಹೆಸರಿನಲ್ಲಿ ವಾಸುದೇವ್‌ ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗೆ ತನಿಖೆಗೆ ಅಸಹಕಾರ ತೋರಿದ ಕಾರಣಕ್ಕೆ ಅವರನ್ನು ಬಂಧಿಸಲಾಗಿದ್ದು, ಅವರ ಅಕ್ರಮ ಸಂಪತ್ತಿನ ಪರಿಶೋಧನೆ ಕಾರ್ಯ ಕೂಡಾ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ACB Raid: ಬಿಬಿಎಂಪಿ ನೌಕರ ಮಾಯಣ್ಣ ಸ್ಫೋಟಕ ಹೇಳಿಕೆ

ಆದಾಯಕ್ಕಿಂತ 500 ಪಟ್ಟು ಆಸ್ತಿಪಾಸ್ತಿ!

ಕಲಬುರಗಿ: ಶಾಂತಗೌಡರು ನೌಕರಿಗೆ ಸೇರಿದಾಗಿನಿಂದ, ಅವರು ಹೊಂದಿರುವ ಹುದ್ದೆ, ಸಂಬಳ ಲೆಕ್ಕ ಹಾಕಿ ಹೇಳೋದಾದಲ್ಲಿ ಆದಾಯಕ್ಕಿಂತ 500 ಪಟ್ಟು ಅದಿಕ ಆಸ್ತಿಪಾಸ್ತಿ ಮಾಡಿದ್ದಾರೆ. 2002 ರಲ್ಲಿ ನೌಕರಿಗೆ ಸೇರಿರುವ ಶಾಂತಗೌಡರ ಪ್ರಸ್ತುತ ಸಂಬಳ 51 ಸಾವಿರ ರುಪಾಯಿ, ಇವರ ಸೇವಾವಧಿಯ ವೇತನ, ಸ್ಥಿರಾಸ್ತಿ ಆದಾಯ ಲೆಕ್ಕ ಹಾಕಿದರೆ 1. 69 ಕೋಟಿ ರು ಆಗಬೇಕಿತ್ತು. ಆದರೆ ದಾಳಿಯ ಕಾಲದಲ್ಲಿ ಈಗಾಗಲೇ 6. 33 ಕೋಟಿ ರು ಮೊತ್ತದ ಆದಾಯ ಪತ್ತೆಯಾಗಿದ್ದು ಇನ್ನೂ ಈ ಮೊತ್ತ ಹೆಚ್ಚುವ ಸಾಧ್ಯತೆಗಳಿವೆ. ಇವರ ಆದಾಯದ ಹಿನ್ನೆಲೆಯಲ್ಲಿ 30 ಲಕ್ಷ ರು ಸ್ಥಿರಾಸ್ತಿ ಇರಬೇಕಿದ್ದ ಜಾಗದಲ್ಲಿ 1. 18 ಕೋಟಿ ರು ಸ್ಥಿರಾಸ್ತಿ ಪತ್ತೆಯಾಗಿದೆ. ಬೆಂಗಳೂರಿನ ಯಲಹಂಕದಿಂದ ಜೇವರ್ಗಿಯ ಹಂಗರಗಾ ಹಳ್ಳಿಯವರೆಗೂ ಶಾಂತಗೌಡರ ಆಸ್ತಿಪಾಸ್ತಿ ಹರಡಿದೆ.
 

Latest Videos
Follow Us:
Download App:
  • android
  • ios