ACB Raid: ಬೆಂಗ್ಳೂರಿನ ಭ್ರಷ್ಟ ಅಧಿಕಾರಿ ಬಳಿ ಕೋಟಿ ಕೋಟಿ ಆಸ್ತಿ..!
* ಆದಾಯಕ್ಕಿಂತ 1408% ಅಧಿಕ ಆಸ್ತಿ ಪತ್ತೆ
* ಭ್ರಷ್ಟಾಚಾರ ಮಾಹಿತಿ ಹಿನ್ನೆಲೆಯಲ್ಲಿ ಎಸಿಬಿ ದಾಳಿ
* ಬಿಜೆಪಿ ಸರ್ಕಾರದಿಂದ ಎಸಿಬಿಗೆ ಬಲ: ಆರಗ
ಬೆಂಗಳೂರು(ನ.28): ಭ್ರಷ್ಟಾಚಾರ ನಿಗ್ರಹ ದಳ (ACB) ಅಧಿಕಾರಿಗಳು ಇತ್ತೀಚೆಗೆ ನಡೆಸಿದ ದಾಳಿ ವೇಳೆ ಅತಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್.ಎನ್.ವಾಸುದೇವ್ ಬಳಿ ಇನ್ನಷ್ಟು ಅಕ್ರಮ ಆಸ್ತಿಯನ್ನು(Illegal Property) ಶೋಧಿಸಲಾಗಿದೆ.
ಇದರಿಂದಾಗಿ ಶೇ.879.53ರಷ್ಟಿದ್ದ ಅವರ ಅಕ್ರಮ ಸಂಪತ್ತು ಶೇ.1408ಕ್ಕೆ ಹೆಚ್ಚಳವಾಗಿದೆ. ಬೆಂಗಳೂರಿನ(Bengaluru) ಐದು ಕಡೆ ಬಾಡಿಗೆ ಉದ್ದೇಶಕ್ಕಾಗಿ ಅವರು 28 ವಾಸದ ಮನೆಗಳನ್ನು ನಿರ್ಮಿಸಿರುವುದು ಬೆಳಕಿಗೆ ಬಂದಿದೆ. 26.78 ಕೋಟಿ ರು. ಸ್ಥಿರಾಸ್ತಿ ಮತ್ತು 3.87 ಕೋಟಿ ರು. ಚರಾಸ್ತಿ ಸೇರಿ ವಾಸುದೇವ್ ಬಳಿ ಒಟ್ಟು 30.65 ಕೋಟಿ ರು. ಆಸ್ತಿ ಇರುವುದು ಗೊತ್ತಾಗಿದೆ. ಅಕ್ರಮ ಆಸ್ತಿಯು ಇನ್ನಷ್ಟು ಕಂಡು ಬರುವ ಸಾಧ್ಯತೆ ಇದ್ದು, ಆರೋಪಿ ವಿರುದ್ಧ ತನಿಖೆ(Investigatio) ಮುಂದುವರಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ACB Raid: ಭ್ರಷ್ಟ ಅಧಿಕಾರಿಗಳ ಆಸ್ತಿ ಮುಟ್ಟುಗೋಲು ಹೇಗೆ?
16 ಕಡೆ ನಿವೇಶನ:
ದಾಳೆ(Raid) ವೇಳೆ ತನಿಖೆ ನಡೆಸಿದಾಗ ಕೆಂಗೇರಿ ಉಪನಗರದ ಶಾಂತಿ ವಿಲಾಸ್ ಲೇಔಟ್‌ನಲ್ಲಿ ಪತ್ನಿಯ ಹೆಸರಲ್ಲಿ ಮನೆ ಇದ್ದು, ಅಲ್ಲಿ ಆರೋಪಿ ವಾಸಿಸುತ್ತಿದ್ದಾರೆ. ಅದೇ ಲೇಔಟ್‌ನಲ್ಲಿ ಮತ್ತೊಂದು ಮನೆ, ಮಲ್ಲೇಶ್ವರದಲ್ಲಿ ಪತ್ನಿಯ ಹೆಸರಲ್ಲಿ ಮನೆ, ಕೆಂಗೇರಿ ಉಪನಗರದ 3ನೇ ಮುಖ್ಯ ರಸ್ತೆಯಲ್ಲಿ ಮನೆ, ನೆಲಮಂಗಲ ಸೋಂಪುರ ಗ್ರಾಮದಲ್ಲಿ ಮಗನ ಹೆಸರಲ್ಲಿ ಎರಡು ಮನೆ ಹೊಂದಿರುವುದು ಕಂಡು ಬಂದಿದೆ. ಅವುಗಳನ್ನು ಬಾಡಿಗೆಗೆ ನೀಡಲಾಗಿದೆ. ಇದಲ್ಲದೆ, ನೆಲಮಂಗಲದ ಸೋಂಪುರ ಗ್ರಾಮ, ಅರ್ಕಾವತಿ ಬಡಾವಣೆ, ಯಲಹಂಕ ಉಪನಗರ, ವಿಶ್ವೇಶ್ವರಯ್ಯ ಬಡಾವಣೆ, ಜ್ಞಾನಭಾರತಿ ಸೇರಿದಂತೆ 16 ಕಡೆ ನಿವೇಶನಗಳನ್ನು ಹೊಂದಿದ್ದಾರೆ. ನೆಲಮಂಗಲ ತಾಲೂಕಿನ ಮಾಕಳಿ ಕುಪ್ಪೆ ಗ್ರಾಮದಲ್ಲಿ ಸುಮಾರು 4 ಎಕರೆ ಜಮೀನು(Land) ಇರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.
ತನಿಖೆಯನ್ನು ಮುಂದುವರಿಸಿದಾಗ ಪತ್ನಿ ಲಲಿತಾ ಹೆಸರಿಗೆ ಕೆಂಗೇರಿ ಉಪನಗರದ 1ನೇ ಹಂತದ ಕೆಎಚ್‌ಬಿ ಮನೆ, ಕೆಂಗೇರಿ ಉಪನಗರದ 7ನೇ ಅಡ್ಡರಸ್ತೆಯಲ್ಲಿ ಮನೆ(House), ಹೊಸಕೆರೆ ರಸ್ತೆಯಲ್ಲಿ ಮನೆ ಪತ್ತೆಯಾಗಿದೆ. ಬಿನ್ನಿಪೇಟೆಯಲ್ಲಿ ಪಾರ್ಕ್ ವೆಸ್ಟ್ ವತಿಯಿಂದ ನಿರ್ಮಾಣ ಹಂತದಲ್ಲಿರುವ ಫ್ಲಾಟ್‌ನ(Flat) ಖರೀದಿಗಾಗಿ 2.46 ಕೋಟಿ ರು. ಮುಂಗಡ ನೀಡಲಾಗಿದೆ. ಮಗ ಮತ್ತು ತನ್ನ ಹೆಸರಲ್ಲಿ ದೊಡ್ಡಬಳ್ಳಾಪುರ ತಾಲೂಕು ಕರೆಹಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟು 11.37 ಎಕರೆ ಜಮೀನು ಇದೆ. ಮತ್ತೊಬ್ಬ ಮಗ ನರೇಂದ್ರ ಹೆಸರಲ್ಲಿ ನೆಲಮಂಗಲ ತಾಲೂಕಿನ ಮಾಕನಕುಪ್ಪೆ ಗ್ರಾಮದಲ್ಲಿ 1.38 ಎಕರೆ ಜಮೀನು, ಕೆಂಗೇರಿ ಉಪನಗರ ಬಡಾವಣೆಯ ಎರಡನೇ ಹಂತದಲ್ಲಿ ನಿವೇಶನ, 3550 ಅಡಿ ವಿಸ್ತೀರ್ಣದ ನಿವೇಶನ(Site), ಸೋಂಪುರ ಗ್ರಾಮದಲ್ಲಿ 30*40 ನಿವೇಶನ ಹೊಂದಿರುವುದು ಗೊತ್ತಾಗಿದೆ ಎಂದಿದ್ದಾರೆ.
ACB Raid:ಪೈಪ್‍ನಲ್ಲಿ ಹಣ ತುರುಕಿದ್ದ ಜೆಇ ಅಕ್ರಮ ಸಂಪತ್ತು, ಅಚ್ಚರಿಯ ಮಾಹಿತಿ ಬಹಿರಂಗ!
ಬಿಜೆಪಿ ಸರ್ಕಾರದಿಂದ ಎಸಿಬಿಗೆ ಬಲ: ಆರಗ
ಶಿವಮೊಗ್ಗ: ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ಭ್ರಷ್ಟರ ಮೇಲೆ ದಾಳಿ ನಡೆಯುವುದು ನಿರಂತರ ಪ್ರಕ್ರಿಯೆ. ಯಾರೇ ಆಗಲಿ, ತಪ್ಪು ಮಾಡಿದರೆ ಕ್ರಮ ನಿಶ್ಚಿತ. ಎಸಿಬಿ ಮೇಲೆ ಯಾವುದೇ ಒತ್ತಡ ಹಾಕುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸಿಬಿಯನ್ನು ಬಲಪಡಿಸಲಾಗಿದೆ. ಭ್ರಷ್ಟಾಚಾರದ(Corruption) ಮಾಹಿತಿ ಇದ್ದರೆ ಎಸಿಬಿಯವರು ತಮ್ಮ ಕೆಲಸ ತಾವು ಮಾಡುತ್ತಾರೆ. ಕಾನೂನುಬಾಹಿರವಾಗಿ ಸಂಪಾದನೆ ಮಾಡಿರುವುದು ಕಂಡಬಂದರೆ ಕ್ರಮ ಕೈಗೊಳ್ಳುತ್ತಾರೆ ಎಂದರು.
ಭ್ರಷ್ಟಾಚಾರ ಮಾಹಿತಿ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆದಿದೆ. ಚಾರ್ಜ್‌ಶೀಟ್(Chargesheet) ಹಾಕುತ್ತಾರೆ. ಸಾಕ್ಷ್ಯಾಧಾರ, ದಾಖಲಾತಿ ಸಂಗ್ರಹಿಸಿ ಚಾರ್ಜ್‌ಶೀಟ್ ಹಾಕಲು ಸಮಯ ತೆಗೆದುಕೊಳ್ಳುತ್ತದೆ. ಕೆಲ ಅಧಿಕಾರಿಗಳು, ನೌಕರ ವರ್ಗದವರು ಅಕ್ರಮ ಆಸ್ತಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಯಾರೇ ಇರಲಿ, ಅಕ್ರಮ(Illegal) ಎಸಗಿದ್ದರೆ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದರು.