ಕಲಬುರಗಿ: ಹೆಣ್ಣು ಮಕ್ಕಳ ಹೆತ್ತಿದಕ್ಕೆ ಮಹಿಳೆಗೆ ಕಿರುಕುಳ
2006ರಲ್ಲಿ ಮತ್ತೊಂದು ಹೆಣ್ಣು ಮಗುವಾದ ನಂತರ ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ್ದಾರೆ. ಪತಿ ವಿವಾಹ ವಿಚ್ಛೇದನ ನೀಡಿ ಮತ್ತೊಂದು ಮದುವೆಯಾಗುವುದಾಗಿ ಹೇಳಿ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಿದ ನಸ್ರೀನ್.
ಕಲಬುರಗಿ(ಜು.08): ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ಮಹಿಳೆಯೊಬ್ಬಳಿಗೆ ಗಂಡ, ಅತ್ತೆ, ಭಾವ, ನಾದಿನಿ ಮತ್ತು ನಾದಿನಿ ಮಗ ಕಿರುಕುಳ ನೀಡಿರುವ ಘಟನೆ ಇಲ್ಲಿನ ನಯಾ ಮೋಹಲ್ಲಾದಲ್ಲಿ ನಡೆದಿದೆ.
ನಸ್ರೀನ್ ಎಂಬ ಮಹಿಳೆಗೆ ಗಂಡ ಸೈಯ್ಯದ್ ದಸ್ತಗೀರ, ಅತ್ತೆ, ಭಾವ, ನಾದಿನಿ ಮತ್ತು ನಾದಿನಿಯ ಮಗ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು, ಅವರು ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ನಸ್ರೀನ್ ಅವರು 7.2.2005ರಲ್ಲಿ ಸಂಪ್ರದಾಯದಂತೆ ಸೈಯ್ಯದ್ ದಸ್ತಗೀರ ಜೊತೆ ಮದುವೆಯಾಗಿದ್ದು, ಮದುವೆಯಾದ ಒಂದು ವರ್ಷದವರೆಗೆ ಗಂಡ ಮತ್ತು ಆತನ ಮನೆಯವರು ಸರಿಯಾಗಿಯೇ ಇದ್ದರು. ಮದುವೆಯಾದ ಒಂದು ವರ್ಷದ ಮೇಲೆ ಹೆಣ್ಣು ಮಗು ಜನಿಸಿದೆ. ಹೆಣ್ಣು ಮಗುವಾದ ಮೇಲೆ ಕಿರುಕುಳ ನೀಡಲು ಆರಂಭಿಸಿದ್ದಾರೆ.
ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯನ್ನ ವೇಶ್ಯಾವಾಟಿಕೆಗೆ ತಳ್ಳಿದ ಧೂರ್ತರು!
2006ರಲ್ಲಿ ಮತ್ತೊಂದು ಹೆಣ್ಣು ಮಗುವಾದ ನಂತರ ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ್ದಾರೆ. ಪತಿ ವಿವಾಹ ವಿಚ್ಛೇದನ ನೀಡಿ ಮತ್ತೊಂದು ಮದುವೆಯಾಗುವುದಾಗಿ ಹೇಳಿ ಹಲ್ಲೆ ನಡೆಸಿದ್ದಾಗಿ ನಸ್ರೀನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.