Vijayapura; ಕೃಷಿ ಅಧಿಕಾರಿ ಕಾರ್‌ಗೆ ಅಡ್ಡ ಬಂದ ಕುದುರೆ ಸಾವು!
ಚಲಿಸುತ್ತಿದ್ದ ಕಾರಿಗೆ ಕುದುರೆ ಅಡ್ಡ ಬಂದ ಪರಿಣಾಮ ಕುದುರೆ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ಎನ್ ಎಚ್ 50 ರಲ್ಲಿ ನಡೆದಿದೆ.
ವಿಜಯಪುರ (ಅ.17): ಚಲಿಸುತ್ತಿದ್ದ ಕಾರಿಗೆ ಕುದುರೆ ಅಡ್ಡ ಬಂದ ಪರಿಣಾಮ ಕುದುರೆ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ಎನ್ ಎಚ್ 50 ರಲ್ಲಿ ನಡೆದಿದೆ. ಕಾರಿನಲ್ಲಿದ್ದ ಕೃಷಿ ಆಧಿಕಾರಿ ಎನ್ ಟಿ ಗೌಡರ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಕಾರು ಕುದುರೆಗೆ ಡಿಕ್ಕಿಯಾದ ಪರಿಣಾಮ ಕುದುರೆ ಸ್ಥಳದಲ್ಲೇ ಸಾವನ್ನಪ್ಪಿದೆ. ಕಾರಿಗೆ ಹಿಂಬದಿಯಿಂದ ಬರುತ್ತಿದ್ದ ಸರ್ಕಾರಿ ಬಸ್ ಡಿಕ್ಕಿಯಾಗಿದ್ದು, ಸರ್ಕಾರಿ ಬಸ್ ಡಿಕ್ಕಿಯಿಂದ ಕಾರು ಪಲ್ಟಿಯಾಗಿದೆ. KA 36 F 1561 ನಂಬರಿನ ಬಸ್ ಹಾಗೂ KA 28 P 5616 ನಂಬರಿನ ಕಾರ್ ಇದಾಗಿದ್ದವು. ನಿಡಗುಂದಿ ತಾಲೂಕು ಕೃಷಿ ಇಲಾಖೆಯಲ್ಲಿ ಸೇವೆ ಮಾಡುತ್ತಿರುವ ಎನ್ ಟಿ ಗೌಡರ ಸ್ಥಳಿಯ ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃಷಿ ಆಧಿಕಾರಿ ಗೌಡರ ಕಚೇರಿಗೆ ಹೋಗುವಾಗ ಕುದುರೆ ಅಡ್ಡ ಬಂದಿದೆ. ಅದಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ಹಿಂಬದಿ ಇದ್ದ ಕೆಎಸ್ ಆರ್ ಟಿಸಿ ಬಸ್ ಕಾರಿಗೆ ಗುದ್ದಿದೆ. ಇದರ ಮಧ್ಯೆ ತೀವ್ರ ಗಾಯಗೊಂಡಿದ್ದ ಕುದುರೆ ಸ್ಥಳದಲ್ಲಿ ಸಾವನ್ನಪ್ಪಿದೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆಡಿಯೋ ವೈರಲ್ ಪ್ರಕರಣ: ಆರೋಪಿಗಳಿಗೆ ಷರತ್ತುಬದ್ಧ ಜಾಮೀನು
ಮಡಿಕೇರಿ ಪೆಟ್ರೋಲ್ ಬಾಂಬ್ ಹಾಕಿ ಹಿಂದುಗಳ ಹತ್ಯೆಗೆ ಸಂಚು ರೂಪಿಸಿದ ಆಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳಿಗೆ ಮಡಿಕೇರಿಯ ಜೆಎಂಎಫ್ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಸಾಕ್ಷಿಗಳನ್ನು ನಾಶಪಡಿಸುವಂತಿಲ್ಲ ಹಾಗೂ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯುವಂತೆ ಎಂದು ಆರೋಪಿಗಳಾದ ಮಡಿಕೇರಿ ನಗರಸಭಾ ಸದಸ್ಯ ಮುಸ್ತಾಫಾ ಹಾಗೂ ಅಬ್ದುಲ್ಲಾಗೆ ನ್ಯಾಯಾಧೀಶರು ಹಲವು ಷರತ್ತುಗಳೊಂದಿಗೆ ಜಾಮೀನು ನೀಡಿದ್ದಾರೆ.
Bengaluru: ಬಿಬಿಎಂಪಿಯ ಯಮಸ್ವರೂಪಿ ರಸ್ತೆ ಗುಂಡಿಗೆ ಮಹಿಳೆ ಬಲಿ!
ಹಿಂದೂಗಳ ಹತ್ಯೆಗೆ ಈ ಇಬ್ಬರು ಸಂಚು ರೂಪಿಸಿರುವ ಆಡೀಯೋ ವೈರಲ್ ಆಗಿತ್ತು. ಶೇಷಪ್ಪ ರೈ ಎಂಬವರು ಮಡಿಕೇರಿ ನಗರ ಠಾಣೆಗೆ ಇಬ್ಬರ ವಿರುದ್ಧ ಶನಿವಾರ ದೂರು ನೀಡಿದ್ದರು. ಶನಿವಾರ ಸಂಜೆಯೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಭಾನುವಾರ ಇಬ್ಬರು ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಮಡಿಕೇರಿ ನಗರ ಪೊಲೀಸರು ಮಲಯಾಳಂ ಭಾಷೆಯಲ್ಲಿ ನಡೆಸಿದ ಸಂಭಾಷಣೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿಕೆ ಮುದ್ರಿಸಿದರು. ಬಳಿಕ ಇಬ್ಬರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಠಾಣೆಗೆ ಕರೆತಂದರು. ಸಂಜೆ ವೇಳೆಗೆ ಮಡಿಕೇರಿಯ ಜೆಎಂಎಫ್ಸಿ ನ್ಯಾಯಾಧೀಶರ ಮನೆಯಲ್ಲಿ ಆರೋಪಿಗಳನ್ನು ಹಾಜರಪಡಿಸಿದರು.
CHIKKAMAGALURU: ಅಸಲಿ ಚಿನ್ನದ ನಾಣ್ಯಗಳನ್ನು ತೋರಿಸಿ ಹಣ ಪಡೆದು ವಂಚನೆ, 3 ಮಂದಿ ಬಂಧನ
ಆರೋಪಿಗಳ ಪರ ವಕೀಲ ಸುಫಿಯಾನ್ ಪ್ರಕರಣ ಸಂಬಂಧ ಮಾಧ್ಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಪ್ರಕರಣವನ್ನು ತಿರುಚಿ ಸಮಾಜದಲ್ಲಿ ಧರ್ಮಗಳ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.